More

  ಸಿಎಎ ಬೆಂಬಲಿಸಿ ರ‌್ಯಾಲಿ

  ಬಾದಾಮಿ: ವಿಶ್ವದ ದೊಡ್ಡ ಹಿಂದು ರಾಷ್ಟ್ರವಾದ ಭಾರತದ ಸಂಸ್ಕೃತಿ ಉಳಿಸಿ ಬೆಳೆಸಲು ಕೇಂದ್ರ ಸರ್ಕಾರ ಪೌರತ್ವ ತಿದ್ದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಇದರಿಂದ ದೇಶದ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ. ಈ ಕಾಯ್ದೆಯನ್ನು ಎಲ್ಲರೂ ಸ್ವಾಗತಿಸಬೇಕು ಎಂದು ಬಿಜೆಪಿ ಬೆಳಗಾವಿ ವಿಭಾಗಮಟ್ಟದ ಸಹ ಪ್ರಭಾರಿ ಬಸವರಾಜ ಯಂಕಂಚಿ ಹೇಳಿದರು.

  ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬೆಂಬಲಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಭಾನುವಾರ ಏರ್ಪಡಿಸಿದ್ದ ಜನಜಾಗೃತಿ ಅಭಿಯಾನ, ಪಾದಯಾತ್ರೆ ಹಾಗೂ ಮಹಾ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.

  ನೆರೆಯ ಮುಸ್ಲಿಂ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಅಪಘಾನಿಸ್ತಾನ ರಾಷ್ಟ್ರಗಳಲ್ಲಿ ಶೋಷಣೆಗೆ ಒಳಗಾದವರಿಗೆ ರಕ್ಷಣೆ ನೀಡಲು ಪ್ರಧಾನಿ ಮೋದಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದ್ದಾರೆ ವಿನಹ ಯಾರ ವಿರುದ್ದವಲ್ಲ. ಇದು ಯಾವುದೇ ಧರ್ಮ, ಜಾತಿಯವರ ಪೌರತ್ವ ಕಿತ್ತುಕೊಳ್ಳುವುದಲ್ಲ. ಸಿಎಎ ಮುಸ್ಲಿಂ ವಿರೋಧಿ ಕಾನೂನು ಅಲ್ಲ. ವಿರೋಧಿಸುವವರು ಮೊದಲು ಕಾನೂನು ಓದಿ ಅರ್ಥ ಮಾಡಿಕೊಳ್ಳಲಿ. ಕೆಲವು ರಾಜಕೀಯ ಪಕ್ಷಗಳು ಸ್ವಾರ್ಥಕ್ಕಾಗಿ ಸಮಾಜದಲ್ಲಿ ಕಲಹ ಉಂಟು ಮಾಡುತ್ತಿವೆ ಎಂದು ಆರೋಪಿಸಿದರು.
  ಬಾದಾಮಿ ನವಗೃಹಮಠದ ಶಿವಪೂಜಾ ಶಿವಾಚಾರ್ಯರು ಮಾತನಾಡಿದರು. ಪೌರತ್ವ ಕಾಯ್ದೆ ಬೆಂಬಲಿಸಿ ತಹಸೀಲ್ದಾರ್ ಸುಹಾಸ ಇಂಗಳೆ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಯಿತು.

  ಮುಖಂಡರಾದ ಶಾಂತಗೌಡ ಪಾಟೀಲ, ಇಷ್ಟಲಿಂಗ ನರೇಗಲ್ಲ, ಶಹಜಿ ಪವಾರ, ಮಹಾಂತೇಶ ವಡ್ಡರ, ಕುಮಾರ ಗಾಣಿಗೇರ, ರವಿ ಪೂಜಾರ, ಸೋಮಣ್ಣ ಬಿಂಗೇರಿ, ಆನಂದ ಕಾಟ್ವಾ, ಮಹೇಶ ಬರಗಿ, ಪ್ರವೀಣ ಹಿರೆಯಂಡಿಗೇರಿ, ಪ್ರವೀಣ ಹೋಳಿ, ರಾಘು ದಯಾಪುಲೆ, ಕುಮಾರ ಪವಾಡಶೆಟ್ಟಿ, ವಿಜಯ ಲಮಾಣಿ, ಗಿರೀಶ ಶೆಟ್ಟರ, ಬಸವರಾಜ ಭೂತಾಳಿ, ಹೊನ್ನಯ್ಯ ಹಿರೇಮಠ, ನಾಗರಾಜ ಕಾಚೆಟ್ಟಿ, ಬಸವರಾಜ ತೀರ್ಥಪ್ಪನವರ, ವಸಂತಕುಮಾರ ದೊಡ್ಡಪತ್ತಾರ ಇತರರು ಇದ್ದರು.

  ಗಮನ ಸೆಳೆದ ತಿರಂಗಾ ಮೆರವಣಿಗೆ
  ಕಾರ್ಯಕ್ರಮಕ್ಕೂ ಮುನ್ನ ಪೌರತ್ವ ಕಾಯ್ದೆ ಬೆಂಬಲಿಸಿ ಮೆರವಣಿಗೆ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಿಂದ ಹೊರಟ ಬಹತ್ ಶೋಭಾ ಯಾತ್ರೆಯಲ್ಲಿ 200 ಮೀಟರ್ ಉದ್ದದ ತಿರಂಗಾ ಧ್ವಜದೊಂದಿಗೆ, ವಿಜಂಭಣೆಯಿಂದ ದೇಶಾಭಿಮಾನಿಗಳು ಭಾರತ ಮಾತಾ ಕಿ ಜೈ ಎಂದು ಘೋಷಣೆಯೊಂದಿಗೆ ನಡೆಯಿತು. ಪಟ್ಟಣದ ಪ್ರಮುಖ ಮುಖ್ಯ ರಸ್ತೆಯ ಮೂಲಕ ಬಸವೇಶ್ವರ ಸರ್ಕಲ್, ಬಸ್ ನಿಲ್ದಾಣದ ಮುಖ್ಯರಸ್ತೆ ಮೂಲಕ ಪಿಕಾರ್ಡ ಬ್ಯಾಂಕ್ ಆವರಣಕ್ಕೆ ಬಂದು ತಲುಪಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts