More

    ಕೋವಿಡ್ ನಿಯಮ ಉಲ್ಲಂಸಿದ 5 ಅಂಗಡಿ ಸೀಜ್

    ಬಾದಾಮಿ: ಪಟ್ಟಣದಲ್ಲಿ ಕೋವಿಡ್ ನಿಯಮಗಳ ಪಾಲನೆ ಮಾಡುತ್ತಿರುವ ಕುರಿತು ತಹಸೀಲ್ದಾರ್ ಸುಹಾಸ ಇಂಗಳೆ, ಸಿಪಿಐ ರಮೇಶ ಹಾನಾಪುರ, ಪುರಸಭೆ ಮುಖ್ಯಾಧಿಕಾರಿ ಜ್ಯೋತಿಗಿರೀಶ ನೇತೃತ್ವದ ತಂಡ ನಗರದಾದ್ಯಂತ ಸಂಚರಿಸಿ ಪರಿಶೀಲಿಸಿತು.

    ಇದೇ ಸಂದರ್ಭದಲ್ಲಿ ಮದುವೆ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳಲಾಯಿತು. ಸರ್ಕಾರದ ಆದೇಶ ಮತ್ತು ಕೋವಿಡ್ ನಿಯಮ ಉಲ್ಲಂಸಿ ತೆರೆಯಲಾಗಿದ್ದ ಮೊಬೈಲ್, ುಟ್‌ವೇರ್ ಅಂಗಡಿ ಸೇರಿ 5 ಅಂಗಡಿಗಳನ್ನು ಸೀಜ್ ಮಾಡಲಾಯಿತು. ನಗರದ ಮುಖ್ಯ ರಸ್ತೆಯಲ್ಲಿ, ಸರ್ಕಾರಿ ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ತೆರೆಯಲಾಗಿದ್ದ ಅಂಗಡಿಗಳನ್ನು ಬಂದ್ ಮಾಡಿಸಿದರು. ಗ್ರಾಮೀಣ ಭಾಗಗಳಿಂದ ನಗರಕ್ಕೆ ಮಾಸ್ಕ್ ಧರಿಸದೆ ಬಂದವರಿಗೆ ಪೊಲೀಸರು ಬಿಸಿ ಮುಟ್ಟಿಸಿದರು.

    ಪಿಎಸ್‌ಐ ಪ್ರಕಾಶ ಬಣಕಾರ ಮತ್ತು ಪೊಲೀಸ್ ಸಿಬ್ಬಂದಿ ಸರಾಫ್ ಬಜಾರ್‌ನಲ್ಲಿ ಕೆಲವು ಅಂಗಡಿಗಳನ್ನು ಮುಚ್ಚಿಸಿದರು. ಬೈಕ್‌ನಲ್ಲಿ ಸಂಚರಿಸುವ ಕೆಲವರು ಮಾಸ್ಕ್ ಹಾಕದೆ ಇರುವುದು ಕಂಡು ಬಂದಿತು. ಸರ್ಕಾರದ ಆದೇಶದಂತೆ ಜನರು ಸಹ ನಿಯಮ ಪಾಲನೆ ಮಾಡುವುದರ ಜತೆಗೆ ಮಾಸ್ಕ್, ಪರಸ್ಪರ ಅಂತರ ಕಾಪಾಡಿಕೊಂಡರೆ ಮಾತ್ರ ಕೋವಿಡ್ ಸೋಂಕು ಬರದಂತೆ ತಡೆಯಬಹುದು.

    ಸರ್ಕಾರದ ನಿಯಮಗಳಂತೆ ಪುರಸಭೆ ವತಿಯಿಂದ ಸೋಮವಾರದಿಂದ ಬಸ್ ನಿಲ್ದಾಣದ ಎದುರಿನ ತಾಪಂ ವಸತಿ ಗೃಹಗಳ ಜಾಗದಲ್ಲಿ ಸಾರ್ವಜನಿಕರು ಪರಸ್ಪರ ಅಂತರದೊಂದಿಗೆ ತರಕಾರಿ, ಹಣ್ಣುಗಳನ್ನು ಖರೀದಿಸಿದರು. ಪುರಸಭೆ ವತಿಯಿಂದ ಹಾಕಲಾಗಿದ್ದ ಬಾಕ್ಸ್ ಗಳಲ್ಲಿ ಕುಳಿತು ತರಕಾರಿ ವ್ಯಾಪಾರ ಮಾಡಿದರು.

    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts