More

    ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಗಳ ಮಧ್ಯಂತರ ವರದಿ ಸಲ್ಲಿಕೆ: ಜಯಪ್ರಕಾಶ್ ಹೆಗ್ಡೆ

    ಬೆಂಗಳೂರು: ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಗಳ ಕುರಿತು ಮಧ್ಯಂತರ ವರದಿ ನೀಡಿದ್ದು, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ ಅಂತಿಮ ವರದಿ ನೀಡಲಾಗುತ್ತದೆ. ತರಾತುರಿಯಲ್ಲಿ ವರದಿ ನೀಡಲು ಸಾಧ್ಯವಿಲ್ಲ. ಅದೇ ರೀತಿ ಒಕ್ಕಲಿಗ ಮೀಸಲಾತಿ ವಿಷಯವಾಗಿ ದಾಖಲಾತಿಗಳನ್ನು ನೀಡಲು ಸಮಯ ಕೇಳಿದ್ದು, ಪ್ರಕ್ರಿಯೆ ಪರಿಶೀಲನಾ ಹಂತದಲ್ಲಿದೆ ಎಂದು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ತಿಳಿಸಿದರು.

    ದೇವರಾಜ ಅರಸು ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿ ಕುರಿತಂತೆ ಕಳೆದ ಡಿಸೆಂಬರ್‌ನಲ್ಲಿ ಈಗಾಗಲೇ ಮಧ್ಯಂತರ ವರದಿ ನೀಡಲಾಗಿದೆ. ರಾಜ್ಯಾದ್ಯಂತ ಸುಮಾರು 26-27 ಸಾರ್ವಜನಿಕ ವಿಚಾರಣೆಗಳನ್ನು ನಡೆಸಿ, ಅಹವಾಲುಗಳನ್ನು ಸಂಗ್ರಹಿಸಲಾಗಿದೆ. ಅವೆಲ್ಲವನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದರು.

    ಗಡಿಬಿಡಿಯಲ್ಲಿ ನಾವು ವರದಿ ನೀಡಿದ ನಂತರ ನ್ಯಾಯಾಲಯದಲ್ಲಿ ಮಾನ್ಯತೆ ಸಿಗದಿದ್ದರೆ ಏನು ಪ್ರಯೋಜನ? ಹಾಗಾಗಿ, ಸಮಗ್ರ ಅಧ್ಯಯನ ಮಾಡಿ ಸ್ಪಷ್ಟ ಶಿಫಾರಸು ಮಾಡಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

    ಇದನ್ನೂ ಓದಿ: 5 ಮತ್ತು 8ನೇ ತರಗತಿ ಬೋರ್ಡ್ ಎಕ್ಸಾಮ್​ಗೆ ಕೊನೆಗೂ ಸಿಕ್ತು ಹಸಿರು ನಿಶಾನೆ; ಪರೀಕ್ಷೆ ಯಾವತ್ತು? ಇಲ್ಲಿದೆ ಮಾಹಿತಿ

    ಡಿಸೆಂಬರ್‌ನಲ್ಲಿ ಮಧ್ಯಂತರ ವರದಿ ಸಲ್ಲಿಕೆಗೆ ಒತ್ತಡ ಇತ್ತಾ ಎಂದು ಕೇಳಿದಾಗ, ‘ಆಯೋಗದ ಮೇಲೆ ಸರ್ಕಾರ ಒತ್ತಡ ಹೇರಲು ಬರುವುದಿಲ್ಲ. ಮಧ್ಯಂತರ ವರದಿಗೆ ಒತ್ತಡವೂ ಇರಲಿಲ್ಲ; ಬದಲಿಗೆ ಅದರ ಅವಶ್ಯಕತೆ ಇತ್ತು’ ಎಂದು ಸಮಜಾಯಿಷಿ ನೀಡಿದರು.

    ಅನಾಥ ಮಕ್ಕಳು ಪ್ರವರ್ಗ-1ಕ್ಕೆ ಸೇರ್ಪಡೆ

    ತಂದೆ-ತಾಯಿ ಇಲ್ಲದ ಹಾಗೂ ಜಾತಿ ಗೊತ್ತಿಲ್ಲದ ಅನಾಥ ಮಕ್ಕಳಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ತೆಲಂಗಾಣ ಮತ್ತು ಮಹಾರಾಷ್ಟ್ರ ಮಾದರಿಯಲ್ಲಿ ಜಾತಿ ತಿಳಿದಿರುವ ಮಕ್ಕಳಿಗೆ ಆಯಾ ಜಾತಿ ಪ್ರವರ್ಗದಡಿ ಮತ್ತು ಜಾತಿ ಗೊತ್ತಿಲ್ಲದ ಮಕ್ಕಳಿಗೆ ಪ್ರವರ್ಗ-1 ರಡಿ ಮೀಸಲಾತಿ ಕಲ್ಪಿಸಲು ಸೂಚಿಸಿ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದು ಮಾಹಿತಿ ನೀಡಿದರು.

    46 ಅಲೆಮಾರಿ ಜಾತಿಗಳು: ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ 46 ಜಾತಿಗಳಿಗೆ ಅಲೆಮಾರಿ/ಅರೆ ಅಲೆಮಾರಿ ಜಾತಿಗಳಿಗೆ ಜಾತಿ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ಅಲೆಮಾರಿ/ಅರೆ ಅಲೆಮಾರಿ ಎಂದು ನಮೂದಿಸಿ ಪ್ರಮಾಣಪತ್ರ ವಿತರಿಸಲು ಶಿಫಾರಸು ಮಾಡಲಾಗಿದೆ ಎಂದರು.

    ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಪರಿಷ್ಕೃತ ವರದಿ

    ಮೀಸಲಾತಿ ನೀಡಲಿ ಅಥವಾ ನೀಡದಿರಲಿ ಒಟ್ಟಾರೆ ರಾಜ್ಯದ ಎಲ್ಲ ಸಮುದಾಯಗಳಿಗೂ ಜಾತಿ ಪ್ರಮಾಣಪತ್ರ ನೀಡಬೇಕಿದೆ. ಆದರೆ, ಕೆಲವು ಜಾತಿಗಳು ಪರಿಶಿಷ್ಟ ಜಾತಿ/ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿಯೂ ಸೇರ್ಪಡೆ ಮಾಡಲಾಗಿದೆ. ಇದರಿಂದ ಜಾತಿ ಪ್ರಮಾಣ ನೀಡುವಾಗ ಗೊಂದಲ ಉಂಟಾಗುತ್ತಿದೆ. ಗೊಂದಲ ನಿವಾರಣೆಗಾಗಿ ಪರಿಷ್ಕೃತ ಪಟ್ಟಿಯನ್ನು ರಾಜ್ಯದ ಎಲ್ಲ ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳಿಗೆ ವರದಿ ನೀಡಲಾಗುತ್ತದೆ ಎಂದು ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ಆಯೋಗದ ಸದಸ್ಯರಾದ ಎಚ್.ಎಸ್.ಕಲ್ಯಾಣಕುಮಾರ್, ಬಿ.ಎಸ್.ರಾಜಶೇಖರ್, ಕೆ.ಟಿ. ಸುವರ್ಣ, ಅರುಣಕುಮಾರ್ ಮತ್ತು ಶಾರದಾ ನಾಯ್ಕ ಉಪಸ್ಥಿತರಿದ್ದರು.

    ಔದ್ಯೋಗಿಕ ಮೀಸಲಾತಿ ಪಾಲಕರ ಆದಾಯವೇ ಅಂತಿಮ

    ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಜಾತಿ/ಆದಾಯ ಪ್ರಮಾಣಪತ್ರ ನೀಡುವ ವೇಳೆ ಅಭ್ಯರ್ಥಿಯ ತಂದೆ, ತಾಯಿ, ಗಂಡ ಮತ್ತು ಹೆಂಡತಿ ಆದಾಯವನ್ನು ಪರಿಗಣಿಸಲಾಗುತ್ತಿದೆ. ಇದರಿಂದ ಆದಾಯ ಪ್ರಮಾಣಪತ್ರದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಈ ಗೊಂದಲವನ್ನು ನಿವಾರಣೆ ಮಾಡಲಾಗಿದ್ದು, ಪಾಲಕರ ಆದಾಯವನ್ನು ಮಾತ್ರ ಪರಿಗಣಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಸರ್ಕಾರವು ಅಧಿಕೃತವಾಗಿ ಗೆಜೆಟ್ ಅಧಿಸೂಚನೆ ಹೊರಡಿಸಬೇಕಿದೆ ಎಂದು ಹೆಗ್ಡೆ ತಿಳಿಸಿದರು.

    ಜಾಗತಿ ಗಣತಿ ವರದಿಗೆ ಸಹಿ ಹಾಕದ ಸದಸ್ಯ ಕಾರ್ಯದರ್ಶಿಗೆ ನೋಟಿಸ್

    ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಿದ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ’ (ಜಾತಿ ಗಣತಿ)ಗೆ ಸಹಿ ಹಾಕದ ಅಂದಿನ ಸದಸ್ಯ ಕಾರ್ಯದರ್ಶಿಗೆ ಈಗಾಗಲೇ ಕಾರಣಕೇಳಿ ನೋಟಿಸ್ ನೀಡಲಾಗಿದೆ ಎಂದು ಜಯಪ್ರಕಾಶ ಹೆಗ್ಡೆ ತಿಳಿಸಿದರು. ಸದಸ್ಯ ಕಾರ್ಯದರ್ಶಿ ಸಹಿ ಮಾಡದ ಹಿನ್ನೆಲೆಯಲ್ಲಿ ವರದಿ ಸ್ವೀಕೃತವಾಗಿಲ್ಲ. ಆದರೆ, ಸಹಿ ಹಾಕದಿರಲು ಕಾರಣ ಏನು ಎಂದು ಅಂದಿನ ಸದಸ್ಯ ಕಾರ್ಯದರ್ಶಿಗೆ ನೋಟಿಸ್ ನೀಡಲಾಗಿದೆ ಎಂದರು.

    ಇದನ್ನೂ ಓದಿ: ಕಲ್ಯಾಣಮಂಟಪಕ್ಕೂ ಕುಡಿದೇ ಬಂದ ವರ, ಮದುವೆಯೇ ಬೇಡ ಎಂದ ವಧು!

    ಯಾವ ಜಾತಿಯಲ್ಲಿ ಎಷ್ಟು ಸರ್ಕಾರಿ ನೌಕರರು?

    ರಾಜ್ಯದಲ್ಲಿ ಯಾವ ಜಾತಿಯ ಎಷ್ಟು ಜನ ಸರ್ಕಾರಿ ಉದ್ಯೋಗದಲ್ಲಿದ್ದಾರೆ? ಯಾವ ಹುದ್ದೆಗಳಲ್ಲಿದ್ದಾರೆ? ಸಮುದಾಯದ ವಿದ್ಯಾರ್ಥಿಗಳು ಎಷ್ಟು ಶಿಕ್ಷಣ ಪಡೆದಿದ್ದಾರೆ? ಇಂತಹ ಹಲವು ಮಹತ್ವದ ಮಾಹಿತಿಗಳನ್ನು ಕಲೆಹಾಕಲು ಮುಂದಾಗಿರುವ ಹಿಂದುಳಿದ ವರ್ಗಗಳ ಆಯೋಗ, ಈ ಸಂಬಂಧ ವಿವಿಧ ಇಲಾಖೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಮಾಹಿತಿ ನೀಡುವಂತೆ ಕೋರಿದೆ. ಈ ಮಾಹಿತಿ ಲಭ್ಯವಾದರೆ, ಯಾವ ಸಮುದಾಯಕ್ಕೆ ಎಷ್ಟು ಶಿಕ್ಷಣ ದೊರಕಿದೆ? ಯಾರಿಗೆ ಎಷ್ಟು ಸರ್ಕಾರಿ ಉದ್ಯೋಗ ದೊರಕಿದೆ ಎಂಬುದು ಸುಲಭವಾಗಿ ಗೊತ್ತಾಗಲಿದೆ. ಈ ಎಲ್ಲ ಮಾಹಿತಿಗಳ ಸಂಗ್ರಹಕ್ಕೆ ಬಿಇಎಲ್(ಭಾರತ್ ಅರ್ಥ್​ಮೂವರ್ಸ್​​ ಲಿ.,)ನಿಂದ ಸಾಫ್ಟ್‌ವೇರ್ ಕೂಡ ಸಿದ್ಧಪಡಿಸಲು ಮನವಿ ಮಾಡಲಾಗಿದೆ. ಆದರೆ, ಎಂಟು ತಿಂಗಳ ಹಿಂದಿನಿಂದ ಹಲವು ಬಾರಿ ಪತ್ರ ಬರೆದರೂ ಇದುವರೆಗೆ ಶೇ.50ರಷ್ಟು ಮಾಹಿತಿ ಮಾತ್ರ ಲಭ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

    ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts