More

    ಕಾಲೇಜುಗಳಿಗೆ ಹಿಂಬಾಗಿಲ ಪ್ರವೇಶಾತಿ ನಿಲ್ಲಬೇಕು: ದೆಹಲಿ ಹೈಕೋರ್ಟ್​

    ನವದೆಹಲಿ: ದೇಶದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಮೆರಿಟ್​ ಆಧಾರದ ಮೇಲೆ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಕಷ್ಟ ಪಟ್ಟು ಓದುತ್ತಾರೆ. ಹೀಗಿರುವಾಗ ವೈದ್ಯಕೀಯ ಕಾಲೇಜುಗಳೂ ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಹಿಂಬಾಗಿಲ ಪ್ರವೇಶಾತಿಯು ನಿಲ್ಲಬೇಕು ಎಂದು ದೆಹಲಿ ಹೈಕೋರ್ಟ್​ ಅಭಿಪ್ರಾಯಪಟ್ಟಿದೆ.

    ಭೋಪಾಲ್​ನ ಎಲ್​ಎನ್​ ಮೆಡಿಕಲ್ ಕಾಲೇಜ್​ ಹಾಸ್ಪಿಟಲ್ ಅಂಡ್​ ರಿಸರ್ಚ್​ ಸೆಂಟರ್​​ಗೆ ವೈದ್ಯಕೀಯ ಶಿಕ್ಷಣ ಇಲಾಖೆ ನಡೆಸುವ ಕೇಂದ್ರೀಕೃತ ಕೌನ್ಸೆಲಿಂಗ್​​ನಲ್ಲಿ ಭಾಗವಹಿಸದೆ ಅಡ್ಮಿಷನ್​ ಪಡೆದಿದ್ದ 5 ವಿದ್ಯಾರ್ಥಿಗಳ ಅಪೀಲನ್ನು ವಜಾಗೊಳಿಸಿ, ನ್ಯಾಯಾಲಯ ಈ ಮಾತು ಹೇಳಿದೆ.

    ಇದನ್ನೂ ಓದಿ: ಮುಸ್ಲಿಂ ಮಹಿಳೆಗೆ ಡ್ರಾಪ್​ ಕೊಟ್ಟಿದ್ದಕ್ಕೆ ಗೂಸಾ: ಇಬ್ಬರು ಪುಂಡರು ಪೊಲೀಸರ ವಶಕ್ಕೆ

    ಕೌನ್ಸೆಲಿಂಗ್​ನಲ್ಲಿ ಪಾಲ್ಗೊಳ್ಳದ ಅರ್ಜಿದಾರ ವಿದ್ಯಾರ್ಥಿಗಳಿಗೆ 2016 ರಲ್ಲಿ ಕಾಲೇಜು ಆಡಳಿತವು ಪ್ರವೇಶಾವಕಾಶ ನೀಡಿತ್ತು. ಆದರೆ, ದೇಶದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಿಗೆ ನೀಟ್​ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಕೇಂದ್ರೀಕೃತ ಕೌನ್ಸೆಲಿಂಗ್​ ವ್ಯವಸ್ಥೆಯಡಿಯೇ ದಾಖಲಾತಿ ನಡೆಯಬೇಕು ಎಂದು ಸುಪ್ರೀಂ ಕೋರ್ಟ್​ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ಮೆಡಿಕಲ್​ ಕೌನ್ಸಿಲ್​ ಆಫ್​ ಇಂಡಿಯಾ ಈ ವಿದ್ಯಾರ್ಥಿಗಳಿಗೆ ಡಿಸ್ಚಾರ್ಜ್​ ಲೆಟರ್​ಗಳನ್ನು ಕಳುಹಿಸಿತ್ತು ಎನ್ನಲಾಗಿದೆ.

    ಈ ಡಿಸ್ಚಾರ್ಜ್​ ಲೆಟರ್​ಗಳ ವಿರುದ್ಧ ಮೊಕದ್ದಮೆ ದಾಖಲಿಸಿ, ಅರ್ಜಿದಾರ ವಿದ್ಯಾರ್ಥಿಗಳು ಶಿಕ್ಷಣ ಮುಂದುವರೆಸುತ್ತಿದ್ದರು. ಹೈಕೋರ್ಟ್​ನ ಏಕಸದಸ್ಯ ಪೀಠವು ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಅದರ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನೂ ಇದೀಗ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ಜಸ್ಮೀತ್​ ಸಿಂಗ್ ಅವರ ನ್ಯಾಯಪೀಠವು ವಜಾಗೊಳಿಸಿದೆ. (ಏಜೆನ್ಸೀಸ್)

    ನೀರು ತುಂಬಿದ್ದ ಅಂಡರ್​ಪಾಸಲ್ಲಿ ಸಿಲುಕಿದ ಕಾರು: ರಜೆಗೆ ಊರಿಗೆ ಹೋಗಿದ್ದ ವೈದ್ಯೆ ದುರ್ಮರಣ

    ಬೆನ್ನು, ತೊಡೆಗಳ ಸ್ನಾಯುಗಳನ್ನು ವಿಸ್ತರಿಸುವ ‘ಸುಪ್ತ ಪದ್ಮಾಸನ’

    ಕರ್ನಾಟಕ ಸೇರಿದಂತೆ 8 ಹೈಕೋರ್ಟ್​ಗಳಿಗೆ ಹೊಸ ಮುಖ್ಯ ನ್ಯಾಯಮೂರ್ತಿಗಳ ಶಿಫಾರಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts