More

    ತುಂಬಾ ಹೊತ್ತು ಕುಳಿತು ಬೆನ್ನು ನೋವೇ? ಈ ಯೋಗಾಸನ ಮಾಡಿ!

    ಭುಜಗಳ, ತೋಳುಗಳ ಮತ್ತು ಕಾಲುಗಳ ಮಾಂಸಖಂಡಗಳು ಬಲಿಷ್ಠವಾಗಲು ಸಹಕಾರಿಯಾದ ಆಸನವೇ ಪೂರ್ವೋತ್ಥಾನಾಸನ. ಇಡೀ ದೇಹದ ಮುಂಭಾಗಕ್ಕೆ ಪೂರ್ವ ಎಂದು, ಹಿಂಭಾಗಕ್ಕೆ ಪಶ್ಚಿಮ ಎಂದು ಯೋಗಿಗಳು ಕರೆಯುತ್ತಾರೆ. ಈ ಆಸನದಲ್ಲಿ ದೇಹದ ಮುಂಭಾಗವನ್ನೆಲ್ಲ ಮೇಲಕ್ಕೆ ಹೆಚ್ಚು ಹಿಗ್ಗಿಸಬೇಕಾಗಿರುವುದರಿಂದ ಈ ಹೆಸರು ಬಂದಿದೆ.

    ಮಾಡುವ ವಿಧಾನ : ದಂಡಾಸನದಲ್ಲಿ ಕುಳಿತು, ಕೈಗಳನ್ನು ಹಿಂದಕ್ಕೆ ಚಾಚಬೇಕು. ಅನಂತರ ಉಸಿರನ್ನು ಬಿಡುತ್ತಾ ಕೈಗಳಿಗೆ ಮತ್ತು ಪಾದಗಳಿಗೆ ಒತ್ತಡವನ್ನು ಕೊಟ್ಟು ದೇಹವನ್ನು ನೆಲದಿಂದ ಮೇಲೆತ್ತಬೇಕು. ಕಾಲಿನ ಪಾದಗಳನ್ನು ನೆಲಕ್ಕೆ ತಾಗಿಸಬೇಕು. ಈ ಸ್ಥಿತಿಯಲ್ಲಿ ಸಾಮಾನ್ಯ ಉಸಿರಾಟ ನಡೆಸುತ್ತಾ ಇದ್ದು, ನಂತರ ದೇಹವನ್ನು ನಿಧಾನವಾಗಿ ನೆಲಕ್ಕಿಳಿಸಿ ವಿರಮಿಸಬೇಕು.

    ಇದನ್ನೂ ಓದಿ: ಪ್ರೀ-ಕ್ವಾರ್ಟರ್​ಫೈನಲ್ಸ್​​​ಗೆ ಮೇರಿ ಕೋಂ ಮುನ್ನಡೆ; ಚಿನ್ನದ ಮೇಲೆ ಕಣ್ಣು!

    ಪ್ರಯೋಜನಗಳು : ಕೈಕಾಲು, ಮೊಣಗಂಟು ಮತ್ತು ಹೆಗಲಿಗೆ ಚೆನ್ನಾಗಿ ವ್ಯಾಯಾಮ ದೊರಕಿ ಬಲಿಷ್ಠವಾಗುತ್ತವೆ. ಪೂರ್ವೋತ್ತಾನಾಸನವನ್ನು ಅಭ್ಯಾಸ ಮಾಡುವುದರಿಂದ ಮುಂದಕ್ಕೆ ಬಾಗುವ ಕಷ್ಟಕರವಾದ ಆಸನಗಳನ್ನು ಕಲಿಯಲು ಸುಲಭ ಸಾಧ್ಯವಾಗುತ್ತದೆ. ಕಾಲುಗಳ ಮಾಂಸ ಖಂಡಗಳಿಗೂ, ಕೈಗಳು ಮತ್ತು ಬೆನ್ನಿಗೂ ಹೆಚ್ಚಿನ ಶಕ್ತಿ ಸಂಚಯನವಾಗುತ್ತದೆ. ಭುಜಗಳ ಭಾಗ ಬಲಿಷ್ಠಗೊಳ್ಳುತ್ತದೆ.

    ತುಂಬಾ ಹೊತ್ತು ಕುಳಿತುಕೊಂಡು ಕೆಲಸ ನಿರ್ವಹಿಸುವವರಿಗೆ ಸಹಜವಾಗಿ ಕಾಡುವ ಬೆನ್ನು, ಸೊಂಟ ನೋವು ಮತ್ತು ಬಿಗಿತಕ್ಕೆ ಈ ಆಸನ ಉಪಯುಕ್ತವಾಗಿದೆ. ಈ ಆಸನದಿಂದ ಶಿರಸ್ಸಿಗೆ ರಕ್ತ ಸಂಚಲನೆಯಾಗಿ ನರಮಂಡಲ ಸಚೇತನಗೊಳ್ಳುತ್ತದೆ. ಮೆದುಳಿನ ಜೀವಕೋಶಗಳು ಪುನಶ್ಚೇತನಗೊಳ್ಳುತ್ತವೆ ಮತ್ತು ಮನಸ್ಸು ಹಗುರವಾಗುತ್ತದೆ.

    ಆದರೆ, ಕುತ್ತಿಗೆ ಅಥವಾ ಭುಜಗಳ ನೋವು ಇದ್ದವರು ಪೂರ್ವೋತ್ಥಾನಾಸನವನ್ನು ಅಭ್ಯಾಸ ಮಾಡಬಾರದು. ಯೋಗವನ್ನು ಗುರುಮುಖೇನ ಕಲಿತು ನಿತ್ಯ ನಿರಂತರ ಅಭ್ಯಾಸ ಮಾಡಬೇಕು.

    ಹದಿಹರೆಯದವರ ಬೆಳವಣಿಗೆಗೆ ಉಪಯುಕ್ತವಾದ ಭುಜಂಗಾಸನ

    ಬೆನ್ನು ಮೂಳೆಯ ಆರೋಗ್ಯಕ್ಕೆ ಬಹು ಉಪಕಾರಿ ಈ ಆಸನ!

    ಒಲಿಂಪಿಕ್ಸ್​: ಮೊದಲ ಪಂದ್ಯ ಗೆದ್ದ ವರ್ಲ್ಡ್ ಚ್ಯಾಂಪಿಯನ್ ಪಿ.ವಿ.ಸಿಂಧು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts