More

    ಮಗುವಿಗೆ ಎರಡೆರಡು ಬಾಯಿ, ಎರಡೂ ಬಾಯಲ್ಲೂ ಹಲ್ಲು, ನಾಲಿಗೆ!

    ನ್ಯೂಯಾರ್ಕ್‌: ಗರ್ಭವತಿಯಾಗಿದ್ದ ಸಂದರ್ಭದಲ್ಲಿ ಮಹಿಳೆಯ ಆರೋಗ್ಯದಲ್ಲಿ ಉಂಟಾಗುವ ಏರುಪೇರುಗಳು, ಆಕೆಯ ಮಾನಸಿಕ, ದೈಹಿಕ ಸ್ಥಿತಿ, ತಿನ್ನುವ ಆಹಾರ ಇವೆಲ್ಲವುಗಳ ಮೇಲೆ ಮಗುವಿನ ಬೆಳಗವಣಿಗೆ ನಿರ್ಧರಿತವಾಗುತ್ತದೆ. ಗರ್ಭಿಣಿಯಲ್ಲಿ ಏನೇ ಸಮಸ್ಯೆಯಾದರೂ ಮೊದಲು ಅದು ಕಾಣಿಸುವುದು ಹುಟ್ಟುವ ಮಗುವಿನ ಮೇಲೆ.

    ಇದೇ ಕಾರಣದಿಂದ ಆರು ಬೆರಳುಳ್ಳ ಮಗ, ಸಯಾಮಿ ಅವಳಿ, ಅಂಗವಿಕಲ ಮಗು, ವಿಚಿತ್ರವಾಗಿ ಹುಟ್ಟುವ ಮಗು ಎಲ್ಲವೂ ಆಗಾಗ ಕಾಣುತ್ತಲೇ ಇರುತ್ತೇವೆ. ಆದರೆ ಅಮೆರಿಕದಲ್ಲಿನ ಮಗುವೊಂದಕ್ಕೆ ಎರಡು ಬಾಯಿ ಇದ್ದು, ಇದು ಅಪರೂಪದಲ್ಲಿ ಅಪರೂಪ ಪ್ರಕರಣ ಎನ್ನಲಾಗಿದೆ. ಕಳೆದೊಂದು ಶತಮಾನದಲ್ಲಿಯೇ ಇಂಥ ಮಗು ಹುಟ್ಟಿರಲಿಲ್ಲ ಎನ್ನುತ್ತಿದೆ ವೈದ್ಯ ಲೋಕ.

    ಇದನ್ನೂ ಓದಿ: ಶಾಲೆ ಆರಂಭ ಯಾವಾಗ? ಶಿಕ್ಷಣ ಸಚಿವರ ಪ್ರಶ್ನೆಗೆ ಪುಟ್ಟ ಬಾಲೆ ಕೊಟ್ಟ ಉತ್ತರಕ್ಕೆ ಭಾರಿ ಮೆಚ್ಚುಗೆ

    ಅಮೆರಿಕದ ದಕ್ಷಿಣ ಕೆರೋಲಿನಾದ ಕಾಲ್ಸ್​ಟರ್ನ್​ನಲ್ಲಿ ಇಂಥದ್ದೊಂದು ಮಗು ಹುಟ್ಟಿದೆ. 6 ತಿಂಗಳ ಹೆಣ್ಣುಮಗುವಿದು. ಹುಟ್ಟುವಾಗಲೇ ಒಂದು ಬಾಯಿ ಸರಿಯಾಗಿಯೇ ಇದ್ದರೆ ಅದರ ಪಕ್ಕದಲ್ಲಿ 0.8 ಇಂಚಿನ ಎರಡನೇ ಬಾಯಿಯೂ ಇತ್ತು. ವಿಶೇಷವೆಂದರೆ ಎರಡನೇ ಬಾಯಿಯಲ್ಲಿ ಸಣ್ಣದಾದ ಹಲ್ಲು ನಾಲಗೆ ಎಲ್ಲವೂ ಇತ್ತು. ಮಗುವಿನ ಅಮ್ಮ ಗರ್ಭಿಯಾಗಿದ್ದ ಸಂದರ್ಭದಲ್ಲಿ 28ನೇ ವಾರದಲ್ಲಿಯೇ ಈ ಬಗ್ಗೆ ವೈದ್ಯರಿಗೆ ತಿಳಿದಿದೆ. ಆದರೆ ಆ ಸಂದರ್ಭದಲ್ಲಿ ಏನೂ ಮಾಡಲು ಸಾಧ್ಯವಾಗಿರಲಿಲ್ಲ.

    ಎರಡು ಬಾಯಿ ಎನ್ನುವುದು ಬಿಟ್ಟರೆ ಮಗು ಆರೋಗ್ಯವಾಗಿಯೇ ಇತ್ತು. ಒಂದು ಬಾಯಿಯಿಂದ ಸರಿಯಾಗಿ ಆಹಾರ ಸೇವನೆ ಮಾಡುತ್ತಿತ್ತು. ಆದರೆ ಜೊಲ್ಲಿನ ಸಮಸ್ಯೆ ಮಾತ್ರ ಅಧಿಕವಾಗಿತ್ತು, ಜತೆಗೆ ಭವಿಷ್ಯದಲ್ಲಿ ಈ ಎರಡನೇ ಬಾಯಿಯಿಂದ ಸಮಸ್ಯೆ ಬಾಧಿಸಬಹುದು ಎಂದು ವೈದ್ಯರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಮಗುವಿನ ಎರಡನೆಯ ಬಾಯಿ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

    ಇದನ್ನೂ ಓದಿ: ಜನಾಂಗೀಯ ದ್ವೇಷದ ನಡುವೆ ಭಗ್ನವಾಯ್ತು ಗಾಂಧಿ ಪ್ರತಿಮೆ

    ಇಂಥ ಪ್ರಕರಣಗಳು ಮನುಷ್ಯರಲ್ಲಿ ಅತಿ ಕಡಿಮೆ. ಕೋಳಿಗಳು, ಕುರಿ, ಬೆಕ್ಕು ಇತ್ಯಾದಿ ಪ್ರಾಣಿಗಳಲ್ಲಿ ಕಂಡುಬಂದಿರುವ ಉದಾಹರಣೆಗಳು ಇವೆ. ಮುಖವನ್ನು ರೂಪಿಸುವ ಪ್ರೊಟೀನ್‌ಗಳಲ್ಲಿ ಸಂಕೇತದ ಸಮಸ್ಯೆಗಳಿಂದಾಗಿ ಗರ್ಭದಲ್ಲಿ ಇಂತಹ ಅಚಾತುರ್ಯ ಘಟಿಸುತ್ತದೆ ಎನ್ನುತ್ತಾರೆ ವೈದ್ಯರು. 2004ರಲ್ಲಿ ದೊಡ್ಡ ಬಾಯಿ ಹಾಗೂ ಎರಡು ಪ್ರತ್ಯೇಕ ಮೂಗು ಇದ್ದ ಮಗು ಜನಿಸಿತ್ತು. ಆ ಮಗು ಬದುಕುವುದು ಅಸಾಧ್ಯ ಎಂದೇ ಭಾವಿಸಲಾಗಿತ್ತು. ಆದರೆ ಇದೀಗ ಆತನಿಗೆ 17 ವರ್ಷವಾಗಿದೆ.

    ಜನಪ್ರತಿನಿಧಿಗಳು ಕದ್ದುಮುಚ್ಚಿ ಮಾಡುವುದನ್ನೂ ತಿಳಿಯುವ ಹಕ್ಕು ಮತದಾರರಿಗಿದೆ ಎಂದ ಹೈಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts