More

    ಮುದ್ದಾದ ಗಂಡು ಮಗುವನ್ನು ಢಾಬಾದಲ್ಲಿ ಬಿಟ್ಟುಹೋದ ಮಹಿಳೆ; ಅಸಲಿ ತಾಯಿ ಯಾರು?

    ಹಾವೇರಿ: ಸುಮಾರು 8-10 ತಿಂಗಳ ಮುದ್ದಾದ ಗಂಡು ಮಗುವೊಂದನ್ನು ಮಹಿಳೆಯೊಬ್ಬಳು ಢಾಬಾಗೆ ತಂದು ಬಿಟ್ಟುಹೋಗಿದ್ದು, ಪ್ರಕರಣ ಸದ್ಯಕ್ಕೆ ಭಾರಿ ಕುತೂಹಲ ಮೂಡಿಸಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿಆಲೂರು ಬಳಿಯ 4ನೇ ಕ್ರಾಸ್ ಹತ್ತಿರ ಇರುವ ಢಾಬಾವೊಂದಕ್ಕೆ ಮಹಿಳೆಯೊಬ್ಬಳು ಮಗುವೊಂದಿಗೆ ಬಂದಿದ್ದು, ಆಟ ಆಡಿಸುತ್ತಿದ್ದಾಕೆ ಹಾಗೇ ಮಗುವನ್ನು ಬಿಟ್ಟು ಹೋಗಿದ್ದಾಳೆ. ಅಳುತ್ತಿದ್ದ ಮಗುವನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮಗುವಿನ ಫೋಟೋ ಈಗ ವೈರಲ್​ ಆಗುತ್ತಿದ್ದು, ವಾರಸುದಾರರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ಮಗುವನ್ನು ಬಿಟ್ಟು ಹೋಗಿರುವ ವಿಷಯ ತಿಳಿದ ಹಾನಗಲ್​ ಪೊಲೀಸರು ಹಾಗೂ ಹಾನಗಲ್ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂತೋಷಕುಮಾರ ಅವರು ಮಕ್ಕಳ ಸಹಾಯವಾಣಿ ಸಿಬ್ಬಂದಿ ಸಹಿತ ಆಗಮಿಸಿ ಮಗುವನ್ನು ರಕ್ಷಿಸಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಿಕಾರ್ಜುನ ಮಠದ ಅವರ ಸಲಹೆಯಂತೆ ಮಗುವನ್ನು ಸ್ಪಂದನಾ ವಿಶೇಷ ದತ್ತು ಸ್ವೀಕಾರ ಕೇಂದ್ರದಲ್ಲಿಡಲಾಗಿದೆ. ಅನುಮಾನ ಬಂದ ಹಿನ್ನಲೆ ಇದೀಗ ಪೋಷಕರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಗುವನ್ನು ಬಿಟ್ಟುಹೋಗಿರುವ ಮಹಿಳೆಯೇ ಅದರ ತಾಯಿಯಾ ಅಥವಾ ಬೇರೆಯವರಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯಕ್ಕೆ ಆ ಮಹಿಳೆ ನಾಪತ್ತೆಯಾಗಿದ್ದಾಳೆ.

    (ದಿಗ್ವಿಜಯ ನ್ಯೂಸ್)

    ಈ ಮನುಷ್ಯ ಕುಡಿಯದೇ ಟೈಟ್ ಆಗುತ್ತಾನೆ!; ಒಂಚೂರೂ ಮದ್ಯಪಾನ ಮಾಡದಿದ್ದರೂ ಇದ್ದಕ್ಕಿದ್ದಂತೆ ಕಿಕ್ಕೇರುತ್ತದೆ!

    ಚಿಕ್ಕಪ್ಪಾ… ಎನ್ನುತ್ತಲೇ ಪ್ರೀತಿಯಿಂದ ತಬ್ಬಿಕೊಳ್ಳಲು ಕೈಚಾಚಿದ 5 ವರ್ಷದ ಮಗಳ ಕತ್ತನ್ನೇ ಕೊಯ್ದುಬಿಟ್ಟ! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts