More

    ಬೇಬಿ ಬೆಟ್ಟ-ಮೈಸೂರು ಅರಮನೆಗೆ ಅವಿನಾಭಾವ ಸಂಬಂಧ

    ಪಾಂಡವಪುರ: ಬೇಬಿ ಬೆಟ್ಟ, ಮೇಲುಕೋಟೆ ಮತ್ತು ಮೈಸೂರು ಅರಮನೆಗೆ ಅವಿನಾಭಾವ ಸಂಬಂಧವಿದೆ ಎಂದು ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶ್ರೀ ಶಿವಬಸವ ಸ್ವಾಮೀಜಿ ಹೇಳಿದರು.

    ತಾಲೂಕಿನ ಬೇಬಿ ಬೆಟ್ಟದಲ್ಲಿ ಶುಕ್ರವಾರ ಭಾರೀ ದನಗಳ ಜಾತ್ರೆಯ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಬೇಬಿ ಬೆಟ್ಟಕ್ಕೆ ಹಿಂದೆ ಸಿದ್ಧಗಿರಿ ಎಂದು ಕರೆಯಲಾಗುತ್ತಿತ್ತು. ಬ್ರಿಟಿಷರು ಶಸ್ತ್ರಾಸ್ತ್ರ ತಾಯಾರಿಸುತ್ತಿದ್ದರು. ಅಂದು ಬ್ರಿಟಿಷರು ಬೇಬಿ ಹಿಲ್ ಎಂದು ಕರೆದ ಪರಿಣಾಮ ಜನಪದವಾಗಿ ಬೇಬಿ ಬೆಟ್ಟ ಎಂದು ಕರೆಯಲಾಗುತ್ತಿದೆ. ಕ್ಷೇತ್ರದ ಸಿದ್ದೇಶ್ವರ, ಮಲೆ ಮಹದೇಶ್ವರ ಹಾಗೂ ಮಲ್ಲಿಕಾರ್ಜುನಸ್ವಾಮಿ ದೇವರ ಅನುಗ್ರಹದಿಂದ ಹಿಂದೆ ಜನರ ರೋಗ ರುಜಿನಗಳು ಗುಣಮುಖವಾಗುತ್ತಿದ್ದವು. ಮೈಸೂರು ರಾಜರು ಕೂಡ ಈ ಬಗ್ಗೆ ಬರೆದಿರುವ ಪತ್ರ ಮಠದಲ್ಲಿದೆ ಎಂದರು.

    ಮಾಜಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೋರಾಟವನ್ನೇ ಜೀವನ ಮಾಡಿಕೊಂಡಿದ್ದರು. ಅವರ ಚಿಂತನೆಗಳು ಯಾವಾಗಲೂ ಜನರ ಪರವಾಗಿತ್ತು. ಅವರಂತೆಯೇ ದರ್ಶನ್ ಪುಟ್ಟಣ್ಣಯ್ಯ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಸರಳತೆ ಎಲ್ಲರಿಗೂ ಮಾದರಿಯಾಗಿದೆ. ಸಣ್ಣ ಮಕ್ಕಳನ್ನು ಗೌರವಪೂರ್ವಕವಾಗಿ ಮಾತನಾಡಿಸುತ್ತಾರೆ. ಬೇಬಿ ಬೆಟ್ಟ ಜಾತ್ರೆಯನ್ನು ತುಂಬ ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ. ಅವರ ಶಾಸಕ ಅವಧಿಯಲ್ಲಿ ಕ್ಷೇತ್ರ ಅಭಿವೃದ್ಧಿ ಕಾಣಲಿದೆ ಎಂದು ಹೇಳಿದರು.

    ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಈ ಜಾತ್ರೆ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದ್ದು, ರಾಜ್ಯದಲ್ಲೇ ಅತಿ ದೊಡ್ಡ ಜಾತ್ರೆ ಎಂದು ಹೆಸರು ಪಡೆದಿದೆ. ಇದು ನಮ್ಮ ಕ್ಷೇತ್ರದಲ್ಲಿದೆ ಎಂಬುದೇ ಹೆಮ್ಮೆಯ ವಿಚಾರ. ಶಾಸಕನಾಗಿ ಮೊದಲ ಬಾರಿಗೆ ಜಾತ್ರೆ ಆಯೋಜಿಸುತ್ತಿರುವ ಕಾರಣ ಕೊಂಚ ಲೋಪಗಳಾಗಿದ್ದು, ಸರಿಪಡಿಸಿಕೊಂಡು ಜಾತ್ರೆಯನ್ನು ಯಶಸ್ವಿಗೊಳಿಸಲಾಗುವುದು ಎಂದು ತಿಳಿಸಿದರು.

    ಪ್ರತಿವರ್ಷ ಬರಗಾಲ ಇರುತ್ತದೆ. ಭಾರತದಲ್ಲಿ ವ್ಯವಸಾಯ ಪದ್ಧತಿ ಬದಲಾಗಬೇಕು. ರೈತರ ಆದಾಯ ದ್ವಿಗುಣಗೊಳಿಸಲು ಹೊಸ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಈಗಾಗಲೇ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಲು ಪಂಚಾಯಿತಿವಾರು ಸಭೆ ಆಯೋಜಿಸಿ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಈಗಾಗಲೇ ಬಳಿಘಟ್ಟ ಪಂಚಾಯಿತಿಯಲ್ಲಿ ಸಭೆ ನಡೆದಿದ್ದು, ಮುಂದಿನ ದಿನಗಳಲ್ಲಿ ಅರಳಕುಪ್ಪೆಯಲ್ಲಿ ಆಯೋಜಿಸಲಾಗುವುದು. ಬರಗಾಲದ ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸಬೇಕು ಎಂದು ಸಲಹೆ ನೀಡಿದರು.

    ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಆಧ್ಯಕ್ಷ ನಾಗರಾಜು, ಎಸ್.ದಯಾನಂದ್, ತಹಸೀಲ್ದಾರ್ ಜಿ.ಎಸ್.ಶ್ರೇಯಸ್, ಆರಕ್ಷಕ ನಿರೀಕ್ಷಕ ಕುಮಾರ್, ತಾಪಂ ಇಒ ಲೋಕೇಶ್‌ಮೂರ್ತಿ, ಬಿಇಒ ಚಂದ್ರಶೇಖರ್, ಕುಬೇರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts