More

    ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಪರ ಮತಯಾಚನೆ

    ಪಾಂಡವಪುರ: ಆರ್ಥಿಕವಾಗಿ ದಿವಾಳಿಯತ್ತ ಸಾಗುತ್ತಿದ್ದ ದೇಶದ ಆರ್ಥಿಕತೆಗೆ ಶಕ್ತಿ ತುಂಬಿ ವಿಶ್ವವೇ ಭಾರತವನ್ನು ದಿಟ್ಟಿಸಿ ನೋಡುವಂತಡ ಪ್ರಧಾನಿ ನರೇಂದ್ರ ಮೋದಿ ಆಡಳಿತ ನೀಡಿದ್ದಾರೆ. ಅವರ ನೇತೃತ್ವದಲ್ಲಿ ಮಂಡ್ಯ ಸೇರಿದಂತೆ ರಾಜ್ಯದ 28 ಕ್ಷೇತ್ರಗಳಲ್ಲೂ ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಅಶೋಕ್ ಹೇಳಿದರು.

    ತಾಲೂಕಿನ ಮೊಳ್ಳೇನಹಳ್ಳಿ, ಅಂಕೇಗೌಡನಕೊಪ್ಪಲು, ಕನಗನಹಳ್ಳಿ, ಅಶೋಕನಗರ, ಕೆ.ಮಂಚನಹಳ್ಳಿ, ಸಣಬದಕೊಪ್ಪಲು, ಇಳ್ಳೇನಹಳ್ಳಿ, ಬೋರೇಗೌಡನಕೊಪ್ಪಲು, ಸಣಬ, ತಿರುಮಲಪುರ, ಹಸನ್‌ಪುರ, ಚಿಕ್ಕಬೋಗನಹಳ್ಳಿ, ಬ್ಯಾಟರಾಯನಪುರ, ದೊಡ್ಡಬೋಗನಹಳ್ಳಿ, ಲಿಂಗಾಪುರ, ಮೊರಸನಹಳ್ಳಿ ಹಾಗೂ ಕಾಳೇಗೌಡನಕೊಪ್ಪಲು ಗ್ರಾಮಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರ ಪರವಾಗಿ ಶುಕ್ರವಾರ ಮತಯಾಚನೆ ಮಾಡಿದ ಬಳಿಕ ಮಾತನಾಡಿದರು.

    ಕೇವಲ 10 ವರ್ಷದ ಆಡಳಿತಾವಧಿಯಲ್ಲಿ ಭಾರತವನ್ನು ವಿಶ್ವಗುರುವನ್ನಾಗಿದ್ದಾರೆ. ಇನ್ನುಳಿದ ಐದು ವರ್ಷದಲ್ಲಿ ದೇಶದ ಆರ್ಥಿಕತೆ ಸಮಗ್ರ ಅಭಿವೃದ್ಧಿ ಕಂಡು ವಿಶ್ವದ ಆರ್ಥಿಕತೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿರುತ್ತದೆ. ಮೋದಿ ಅವರು ಕೈ ಬಲಪಡಿಸಲು ಎಚ್.ಡಿ.ಕುಮಾರಸ್ವಾಮಿ ಅವರನ್ನು ಬಹುಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದರು.

    ತಾಪಂ ಮಾಜಿ ಸದಸ್ಯ ಗೋಪಾಲೇಗೌಡ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸಿ.ಶಿವಕುಮಾರ್, ಮೈಕ್ ಮಹದೇವು, ಗ್ರಾಪಂ ಸದಸ್ಯ ಸಿ.ಎಸ್.ಲೋಕೇಶ್, ಕಾಳೇಗೌಡನಕೊಪ್ಪಲು ಶಿವಕುಮಾರ್, ಚನ್ನಕೃಷ್ಣ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts