More

    VIDEO: ಎದುರಾಳಿ ತಂಡದಿಂದ ಟ್ರೋಲ್ ಆದ ಪಾಕ್ ಕ್ರಿಕೆಟಿಗ ಬಾಬರ್ ಅಜಮ್…!

    ಸೌಥಾಂಪ್ಟನ್: ಪಾಕಿಸ್ತಾನ ನಿಗದಿತ ಓವರ್‌ಗಳ ತಂಡದ ನಾಯಕ ಬಾಬರ್ ಅಜಮ್, ರಾಷ್ಟ್ರೀಯ ತಂಡದೊಂದಿಗೆ ವಾಪಸಾಗದೆ ಕೌಂಟಿ ಕ್ರಿಕೆಟ್‌ನಲ್ಲಿ ಆಡುವ ಸಲುವಾಗಿ ಇಂಗ್ಲೆಂಡ್‌ನಲ್ಲಿಯೇ ಉಳಿದುಕೊಂಡರು. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸಾಧಾರಣ ನಿರ್ವಹಣೆ ತೋರಿದ್ದ ಬಾಬರ್ ಅಜಮ್, ಇದೀಗ ಕೌಂಟಿ ಕ್ರಿಕೆಟ್‌ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸುತ್ತಿದ್ದಾರೆ. ಇದಕ್ಕೆ ಎದುರಾಳಿ ತಂಡ ಟ್ರೋಲ್ ಮಾಡುವ ಮೂಲಕ ಪಾಕ್ ಕ್ರಿಕೆಟಿಗನ ಕಾಲೆಳೆದಿದೆ. ವಿಟಲಿಟಿ ಬ್ಲಾಸ್ಟ್ ಟಿ20 ಲೀಗ್‌ನಲ್ಲಿ ಸೋಮರ್‌ಸೆಟ್ ತಂಡದ ಪರ ಆಡುತ್ತಿರುವ ಬಾಬರ್, ಸತತ ಮೂರನೇ ಪಂದ್ಯದಲ್ಲಿ ವಿಫಲರಾದರು. ರ‌್ಯಾಂಕಿಂಗ್ ಪಿಚ್‌ನಲ್ಲಿ ಲೆಕ್ಕಕ್ಕೆ ಬರುವುದಿಲ್ಲ ಎಂದು ಎದುರಾಳಿ ತಂಡ ಗ್ಲೌಚೆಸ್ಟರ್‌ಷೈರ್ ವಿಡಿಯೋ ಸಮೇತ ಟ್ವೀಟ್ ಮಾಡುವ ಮೂಲಕ ಕಾಲೆಳೆದಿದೆ.

    ಇದನ್ನೂ ಓದಿ: ರೈನಾ ಸಂಬಂಧಿಕರ ಮೇಲಿನ ದಾಳಿ ಪ್ರಕರಣವನ್ನು ಕೊನೆಗೂ ಭೇದಿಸಿದ ಪಂಜಾಬ್ ಪೊಲೀಸರು

    ಪಾಕಿಸ್ತಾನದ ನಾಯಕ ಸದ್ಯ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಟಿ20 ರ‌್ಯಾಂಕಿಂಗ್‌ನಲ್ಲಿ ಹಲವು ದಿನಗಳಿಂದ ನಂಬರ್.1 ಸ್ಥಾನದಲ್ಲಿದ್ದಾರೆ. ಸತತವಾಗಿ ವೈಫಲ್ಯ ಕಾಣುತ್ತಿರುವ ಬಾಬರ್ ಎದುರಾಳಿ ತಂಡದಿಂದ ಟೀಕೆಗೆ ಗುರಿಯಾಗಿದ್ದಾರೆ. ಸೋಮರ್‌ಸೆಟ್ ಪರವಾಗಿ ಬಾಬರ್ ಕಳೆದ ಮೂರು ಪಂದ್ಯಗಳಲ್ಲಿ ಕ್ರಮವಾಗಿ 6,0 ಮತ್ತು 10 ರನ್ ಸಿಡಿಸಿದ್ದಾರೆ. ಮೊದಲ ಪಂದ್ಯದಲ್ಲಿ ಬಿರುಸಿನ 42 ರನ್‌ಗಳಿಸಿದ್ದ ಬಾಬರ್, ಬಳಿಕ ಸತತ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡಂಕಿ ಮೊತ್ತ ದಾಟಲು ವಿಫಲರಾಗಿದ್ದಾರೆ.

    ಇದನ್ನೂ ಓದಿ: ಐಪಿಎಲ್ : ಆರೆಂಜ್ ಕ್ಯಾಪ್ ವೀರರು ಇವರೇ..!

    ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ 2 ಪಂದ್ಯಗಳಲ್ಲಿ ಕ್ರಮವಾಗಿ 56 ಹಾಗೂ 21 ರನ್‌ಗಳಿಸಿದ್ದರು. ಶೀಘ್ರವೇ ತವರಿಗೆ ಮರಳಲಿರುವ ಬಾಬರ್ ಅಜಮ್, ಜಿಂಬಾಬ್ವೆ ವಿರುದ್ಧದ ಸರಣಿಗೆ ಸಜ್ಜಾಗಲಿದ್ದಾರೆ. ಬಳಿಕ ಪಾಕಿಸ್ತಾನ ಸೂಪರ್ ಲೀಗ್‌ನ ಉಳಿದ ಪಂದ್ಯಗಳಿಗೆ ಕರಾಚಿ ಕಿಂಗ್ಸ್ ತಂಡದ ಪರ ಆಡಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts