More

    ಓದುವ ವಯಸ್ಸಿನಲ್ಲಿ ಪ್ರೀತಿಯ ಬಲೆ ಬೀಸಿದ ನಟ ಪರೀಕ್ಷೆಗೆ ಓದುವುದನ್ನು ಬಿಟ್ಟು ಮಾಡಿದ್ದೇನು?

    ಮುಂಬೈ: ಪರೀಕ್ಷೆ ಎಂದರೆ ಟೆನ್ಶನ್​. ಪರೀಕ್ಷೆಯ ದಿನ ಹತ್ತಿರ ಬರುತ್ತಿದ್ದಂತೆ ರಾತ್ರಿಯೆಲ್ಲ ನಿದ್ರೆ ಬಿಟ್ಟು ಓದುತ್ತಾರೆ ವಿದ್ಯಾರ್ಥಿಗಳು. ಆದರೆ ಬಾಲಿವುಡ್​ನ ಪ್ರಸಿದ್ಧ ನಟನೊಬ್ಬ ತಮ್ಮ ಬೋರ್ಡ್​ ಪರೀಕ್ಷೆಯ ಸಮಯದಲ್ಲಿ ಓದುವುದನ್ನು ಬಿಟ್ಟು ಮಧ್ಯ ರಾತ್ರಿಯಲ್ಲಿ ತನ್ನ ಸ್ನೇಹಿತೆಗೆ ಪ್ರಪೋಸ್​ ಮಾಡಿದ್ದರಂತೆ.

    ನಟ ಆಯುಷ್ಮಾನ್​ ಖುರಾನಾ ದಂಪತಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಹಿರಿ ತೆರೆ ಮೇಲೆ ಮಿಂಚುತ್ತಿರುವ ಆಯುಷ್ಮಾನ್​ ಬಾಲ್ಯದ ಗೆಳತಿಯೊಂದಿಗೆ ಲವ್​ ಮಾಡಿ ಮದುವೆಯಾದವರು. ಪತ್ನಿ ತಹೀರಾ ಕಶ್ಯಪ್​ ಶಾರ್ಟ್​ ಸಿನಿಮಾಗಳ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದು ಅದಕ್ಕೆ ನಟ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಸೂಪರ್​ ದಂಪತಿಯ ಲವ್​ ಪ್ರಪೋಸಲ್​ ಸ್ಟೋರಿಯನ್ನು ನಟ ಬಿಚ್ಚಿಟ್ಟಿದ್ದಾರೆ.

    ಆಯುಷ್ಮಾನ್​ ಮತ್ತು ತಹೀರಾ 2001ರಲ್ಲಿ ತಮ್ಮ ಬೋರ್ಡ್​ ಎಕ್ಸಾಂಗೆ ತಯಾರಾಗುತ್ತಿದ್ದ ಸಮಯದಲ್ಲಿ ಆಯುಷ್ಮಾನ್​ ತಹೀರಾಗೆ ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದರಂತೆ. ರಾತ್ರಿ 1.48ಕ್ಕೆ ತಹೀರಾಗೆ ಕರೆ ಮಾಡಿ ನಾನು ನಿನ್ನ ಪ್ರೀತಿಸುತ್ತೇನೆ ಎನ್ನುವ ವಿಚಾರವನ್ನು ಹೇಳಿಕೊಂಡಿದ್ದರಂತೆ. ಅಂದು ಶುರುವಾದ ಪ್ರೀತಿ 2008ರಲ್ಲಿ ಮದುವೆಯಾಗಿ ದಾಂಪತ್ಯಕ್ಕೆ ತಿರುಗಿದೆ.

    14 ವರ್ಷದ ಲವ್​ ಆ್ಯನಿವರ್ಸರಿ ಆಚರಿಸಿಕೊಳ್ಳುತ್ತಿರುವ ಈ ಜೋಡಿಗೆ ವಿರಾಜವೀರ್​ ಹೆಸರಿನ ಮಗ ಮತ್ತು ವರುಷ್ಕಾ ಹೆಸರಿನ ಮಗಳಿದ್ದಾಳೆ. (ಏಜೆನ್ಸೀಸ್​)

    ಮತ್ತೆ ಏರಿತು ಕರೊನಾ ಸೋಂಕಿತರ ಸಂಖ್ಯೆ; 107 ಜನರಲ್ಲಿ ಸೋಂಕು ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts