More

    ವಿದ್ವಾನ್ ಉಮಾಕಾಂತ ಭಟ್ಟಗೆ ಪ್ರಶಸ್ತಿ

    ಶಿರಸಿ: ಇಲ್ಲಿನ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಯಕ್ಷ ಶಾಲ್ಮಲಾ ಸಂಸ್ಥೆ ಸಂಸ್ಥಾಪಕರಾಗಿದ್ದ ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತ ಅವರ ಹೆಸರಿನಲ್ಲಿ ನೂತನವಾಗಿ ಸ್ಥಾಪಿಸಿದ ರಾಜ್ಯ ಮಟ್ಟದ ಪ್ರಶಸ್ತಿಗೆ ತಾಳಮದ್ದಲೆ ಅರ್ಥದಾರಿ ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ ಆಯ್ಕೆಯಾಗಿದ್ದಾರೆ.

    ಮುನ್ನೂರಕ್ಕೂ ಅಧಿಕ ಯಕ್ಷಗಾನ ಪ್ರಸಂಗ ಬರೆದು ನಾಡಿನ ಉದ್ದಗಲದಲ್ಲಿ ಯಕ್ಷಗಾನ ಶಿಷ್ಯರನ್ನು ತಯಾರು ಮಾಡಿದ ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತ ಅವರ ಹೆಸರಿನಲ್ಲಿ ಯಕ್ಷ ಶಾಲ್ಮಲಾ ಸಂಸ್ಥೆ ಇದೇ ವರ್ಷದಿಂದ ವಾರ್ಷಿಕ ಪ್ರಶಸ್ತಿಯನ್ನು ಘೊಷಿಸಿದೆ.

    ಪ್ರಥಮ ಪ್ರಶಸ್ತಿ ವಿದ್ವಾಂಸ ಕೆರೇಕೈ ಅವರನ್ನು ಅರಸಿ ಬಂದಿದೆ. ಮೇಲುಕೋಟೆಯ ಸಂಸ್ಕೃತ ಮಹಾ ವಿದ್ಯಾಲಯದ ಪ್ರಾಚಾರ್ಯರಾಗಿ ಕಾರ್ಯ ಮಾಡಿದ ಕೆರೇಕೈ, ಕನ್ನಡ, ಆಂಗ್ಲ, ಸಂಸ್ಕೃತ ಭಾಷೆಯ ಪಂಡಿತರಾಗಿ, ತಾಳಮದ್ದಲೆಯ ಅರ್ಥದಾರಿಗಳಾಗಿ, ಲೇಖಕರಾಗಿ, ಛಂದಸ್ವತಿ ಪತ್ರಿಕೆಯ ಸಂದಾಪಕರಾಗಿ, ಪ್ರವಚನಕಾರರಾಗಿ ಗುರುತಿಸಿಕೊಂಡಿದ್ದಾರೆ.

    ಯಕ್ಷಗಾನ, ತಾಳಮದ್ದಲೆ ಕ್ಷೇತ್ರಕ್ಕೆ ನೀಡಿದ ಕೊಡುಗೆ ಗಮನಿಸಿ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನೇತೃತ್ವದ ಆಯ್ಕೆ ಸಮಿತಿ ಉಮಾಕಾಂತ ಭಟ್ಟ ಅವರ ಹೆಸರನ್ನು ಅಂತಿಮಗೊಳಿಸಿದೆ ಎಂದು ಯಕ್ಷಶಾಲ್ಮಲಾದ ಕಾರ್ಯದರ್ಶಿ ನಾಗರಾಜ ಜೋಶಿ ಸೋಂದಾ ತಿಳಿಸಿದ್ದಾರೆ.

    23 ವರ್ಷಗಳ ಹಿಂದೆ ಯಕ್ಷಶಾಲ್ಮಲಾದ ಹುಟ್ಟಿಗೂ ಕಾರಣರಾಗಿದ್ದ ಹೊಸ್ತೋಟರು ಜೀವನದ ಕೊನೆಯ ದಿನಗಳ ತನಕವೂ ಈ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ಮಾಡುತ್ತಿದ್ದರು.

    ಅವರ ಸ್ಮರಣೆಯಲ್ಲಿ ಯಕ್ಷ ಶಾಲ್ಮಲಾ ಈ ಪ್ರಶಸ್ತಿ ಸ್ಥಾಪಿಸಲಾಗಿದೆ. ಪ್ರತೀ ವರ್ಷ ಯಕ್ಷಗಾನ ಹಿಮ್ಮೇಳ, ಮುಮ್ಮೇಳ, ಯಕ್ಷ ಸಾಹಿತ್ಯ, ಪ್ರಸಾದನ ಕ್ಷೇತ್ರದಲ್ಲಿ ಕೆಲಸ ಮಾಡಿದ ಹಿರಿಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲು ಸಮಿತಿ ತೀರ್ವನಿಸಿದೆ.

    ಯಕ್ಷಶಾಲ್ಮಲಾ ಸಂಸ್ಥೆ ಮುಂಡಿಗೇಸರದಲ್ಲಿ ನಡೆಸುತ್ತಿರುವ ಶ್ರೀ ರಾಮಾನುಭವ ಸರಣಿ ತಾಳಮದ್ದಲೆ ಸಪ್ತಾಹದ ಡಿ.12ರ ಸಂಜೆ 4.30ಕ್ಕೆ ನಡೆಸುತ್ತಿರುವ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದೆ.

    ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಪ್ರಶಸ್ತಿಯನ್ನು ಕೆರೇಕೈ ಅವರಿಗೆ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ಫಲಕ, ಸ್ಮರಣಿಕೆ, ಐದು ಸಾವಿರ ರೂ. ನಗದು ಒಳಗೊಂಡಿದೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪೊ›. ಎಂ.ಎ.ಹೆಗಡೆ, ಗಮಕ ಕಲಾವಿದ ವೈಎಸ್​ವಿ ದತ್ತ ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts