More

    ಅವ್ಯವಸ್ಥೆಯ ಆಗರವಾದ ಮೀನು ಮಾರುಕಟ್ಟೆ

    ಅಂಕೋಲಾ: ತಾಲೂಕಿನ ಅವರ್ಸಾ ಗ್ರಾಪಂ ವ್ಯಾಪ್ತಿಯ ಮೀನು ಮಾರುಕಟ್ಟೆ ಅವ್ಯವಸ್ಥೆಯ ಆಗರವಾಗಿದ್ದು ವ್ಯಾಪಾರಸ್ಥರಿಗೆ ಹಾಗು ಗ್ರಾಹಕರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ.

    ಶುಚಿತ್ವದ ಕೊರತೆ: ಇಡೀ ಮಾರುಕಟ್ಟೆ ಆವರಣ ಶುಚಿತ್ವ ಇಲ್ಲದೇ ಗಬ್ಬೆದ್ದು ನಾರುತ್ತಿದೆ. ಮಾರುಕಟ್ಟೆಯ ಶೌಚಗೃಹದ ನೀರು ಆವರಣದಲ್ಲಿ ಹರಿಯುತ್ತಿದೆ. ಇನ್ನು ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲಂದರಲ್ಲಿ ರಾಶಿ ಹಾಕಿರುವುದರಿಂದ ನೀರು ಸರಾಗವಾಗಿ ಹರಿಯದೇ ಇನ್ನಷ್ಟು ಸಮಸ್ಯೆಗೆ ಕಾರಣವಾಗಿದೆ.

    ಅತೀ ಹೆಚ್ಚು ಜನ ಸೇರುವ ಜಾಗ: ಅಂಕೋಲಾ ಪಟ್ಟಣದ ಮಾರುಕಟ್ಟೆ ನಂತರದಲ್ಲಿ ಅತೀ ದೊಡ್ಡ ಮೀನುಮಾರುಕಟ್ಟೆ ಎಂಬ ಹೆಗ್ಗಳಿಕೆ ಇದಕ್ಕಿದೆ. ಪ್ರತೀ ಸೋಮವಾರ ಸಂತೆಗೆ ಇಲ್ಲಿಗೆ ಅವರ್ಸಾ, ಹಟ್ಟಿ ಕೇರಿ, ಹಾರವಾಡ ಭಾಗದ ನೂರಾರು ಜನರು ಬಂದು ವ್ಯಾಪಾರ ವ್ಯವಹಾರ ನಡೆಸುತ್ತಾರೆ.

    ನಿರ್ವಹಣೆಗೆ ಗ್ರಾಪಂ ನಿರಾಸಕ್ತಿ: 2017ರಲ್ಲಿ ಈ ಮಾರುಕಟ್ಟೆಗೆ ನೂತನ ಕಟ್ಟಡ ನಿರ್ವಿುಸಲಾಗಿದೆ. ಇದರ ನಿರ್ವಹಣೆ ಹೊಣೆಯನ್ನು ಅಂಕೋಲಾ ಗ್ರಾಪಂ ವಹಿಸಿಕೊಂಡಿದೆ. ಆದರೆ ಯಾವುದೇ ಸೂಕ್ತ ನಿರ್ವಹಣೆ ಮಾಡದ ಕಾರಣ ಮಾರುಕಟ್ಟೆ ಆವರಣ ಕಸದ ತಿಪ್ಪೆಯಾಗಿದ್ದು ರೋಗ ರುಜಿನಗಳ ತಾಣವಾಗಿ ರೂಪುಗೊಂಡಿದೆ.

    ಪಾರ್ಕಿಂಗ್ ಸಮಸ್ಯೆ

    ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಮಾರುಕಟ್ಟೆ ಇರುವ ಕಾರಣ ವಾಹನ ಪಾರ್ಕಿಂಗ್ ಗೆ ತೀವ್ರ ಸಮಸ್ಯೆಯಿದೆ. ಸೋಮವಾರ ಸಂತೆಯ ದಿನ ಹೆಚ್ಚಿನ ವಾಹನಗಳು ಆಗಮಿಸುವುದರಿಂದ ಇನಷ್ಟು ಕಿರಿಕಿರಿ ಉಂಟಾಗುತ್ತಿದೆ.

    ಜುಲೈ 20ರಂದು ನಡೆಯುವ ಸಭೆಯಲ್ಲಿ ಟೆಂಡರ್ ಪ್ರಕ್ರಿಯೆ ಕುರಿತು ಚರ್ಚೆ ನಡೆಯಲಿದೆ. ಕಸ ಎಸೆಯದಂತೆ ನೋಟಿಸ್ ನೀಡಲಾಗಿದೆ. ಆದರೂ ಜನ ಕ್ಯಾರೇ ಎನ್ನುತ್ತಿಲ್ಲ. ತುಂಬಿರುವ ಶೌಚಗೃಹದ ಟ್ಯಾಂಕ್ ಸ್ವಚ್ಛಗೊಳಿಸಲು ಪರಸಭೆಗೆ ತಿಳಿಸಲಾಗಿದೆ.
    | ಸೀತಾ ಮೇತ್ರಿ ಪಿಡಿಓ ಅವರ್ಸಾ, ಅಂಕೋಲಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts