More

    ಆಟೋರಿಕ್ಷಾ ಸ್ಟಾೃಂಡ್ ಮರೀಚಿಕೆ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ಶಂಕರನಾರಾಯಣದಲ್ಲಿ ಆಟೋ ರಿಕ್ಷಾಕ್ಕೆ ನಿಲ್ಲಲು ನೆಲೆಯೂ ಇಲ್ಲ, ಸೂರೂ ಇಲ್ಲ. ಬಿಸಿಲಿಗೆ ಒಣಗಿ, ಮಳೆಯಲ್ಲಿ ತೋಯ್ದು ಅತ್ತಿತ್ತ ಓಡುವುದರಲ್ಲೇ ಆಟೋ ಚಾಲಕರು ನಿರತರಾಗಿದ್ದಾರೆ.
    ಶಂಕರನಾರಾಯಣ ಸುತ್ತಳ್ಳಿಯ ಗ್ರಾಮೀಣ ಭಾಗವಾಗಿದ್ದು, ನಕ್ಸಲರ ಪ್ರಭಾವ ಇರುವ ಈ ಜಾಗದಲ್ಲಿ ಜನರನ್ನು ಸುರಕ್ಷಿತವಾಗಿ ರಿಕ್ಷಾ ಚಾಲಕರು ಮನೆ ತಲುಪಿಸುತ್ತಾರೆ. ಇಲ್ಲಿನ ಆಟೋ ಚಾಲಕರು ಹಾಗೂ ಪರಿಸರದ ಜನರ ಮಧ್ಯೆ ಉತ್ತಮ ಬಾಂಧವ್ಯವಿದೆ. ಆಟೋ ಚಾಲಕರೂ ಪ್ರಯಾಣಿಕರಿಗೆ ಹೊರೆಯಾಗದ ಹಾಗೆ ಸೇವೆ ನೀಡುತ್ತಿದ್ದಾರೆ. ಆದರೆ ಆಟೋ ಚಾಲಕರ ಸ್ಥಿತಿ ಕೇಳುವವರಿಲ್ಲದಂತಾಗಿದೆ. ಜಿಲ್ಲೆಯ ಎಲ್ಲ ಕಡೆ ಜನಪ್ರತಿನಿಧಿಗಳ ಅನುದಾನದಲ್ಲಿ ಸುಸಜ್ಜಿತ ರಿಕ್ಷಾ ನಿಲ್ದಾಣಗಳು ನಿರ್ಮಾಣವಾಗುತ್ತಿವೆ. ಶಂಕರನಾರಾಯಣದಲ್ಲಿ ಇನ್ನೂ ಆ ಭಾಗ್ಯ ಲಭಿಸಿಲ್ಲ. ಮರಗಳ ನೆರಳು, ಮರದ ಗೆಲ್ಲಿನ ಅಡಿಯಲ್ಲೇ ನಿಂತು ತಮ್ಮನ್ನು ತಾವು ಸಂಭಾಳಿಸಿಕೊಳ್ಳುವ ಪರಿಸ್ಥಿತಿ ಇಲ್ಲಿನ ಆಟೋ ಚಾಲಕರದ್ದು.

    ಶಂಕರನಾರಾಯಣ ಬಸ್ ನಿಲ್ದಾಣ ಸುಸಜ್ಜಿತವಾಗಿ ನಿರ್ಮಾಣಗೊಂಡಿದ್ದರೂ ರಿಕ್ಷಾಗಳಿಗೆ ಪ್ರವೇಶ ನಿರ್ಬಂಧವಿದೆ. ದೂರದ ಊರಿಂದ ಬರುವ ಪ್ರಯಾಣಿಕರು, ಅಶಕ್ತರನ್ನು ಬಸ್ ನಿಲ್ದಾಣದಿಂದ ಹೊರಗಡೆ ಕೈ ಹಿಡಿದು ಲಗೇಜು ತಾವೇ ಎತ್ತಿಕೊಂಡು ರಿಕ್ಷಾಕ್ಕೆ ಹಾಕಿ ಮುಂದಕ್ಕೆ ಹೋಗಬೇಕಾದ ಪ್ರಮೇಯ ಇಲ್ಲಿದೆ. ಶಂಕರನಾರಾಯಣಕ್ಕೆ ಆಟೋ ರಿಕ್ಷಾ ನಿಲ್ದಾಣ ನಿರ್ಮಾಣ ಬಗ್ಗೆ ಜಿಲ್ಲಾಡಳಿತ ಹಾಗೂ ಶಾಸಕರ ಗಮನಕ್ಕೆ ಶೀಘ್ರ ತರಲಾಗುವುದು ಎಂದು ಶಂಕರನಾರಾಯಣ ತಾಲೂಕು ಹೋರಾಟ ರಚನಾ ಸಮಿತಿ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ ವಿಜಯವಾಣಿಗೆ ತಿಳಿಸಿದ್ದಾರೆ.

    ಪ್ರತಿ ರಿಕ್ಷಾದಿಂದ 15 ರೂ. ಶುಲ್ಕ ಗ್ರಾಮ ಪಂಚಾಯಿತಿಗೆ ಸಲ್ಲಿಕೆಯಾಗುತ್ತದೆ. ಚುನಾವಣೆ ಹತ್ತಿರ ಬಂದಾಗ ರಾಜಕೀಯದವರು ಬಂದು ಅನುದಾನ ಬಂದಿದೆ ಕೂಡಲೇ ರಿಕ್ಷಾ ನಿಲ್ದಾಣ ಆಗುತ್ತದೆ ಎಂದು ಎಲ್ಲ ಕಡೆ ಅಳತೆ ಮಾಡಿ ಹೋಗುತ್ತಾರೆ. ಬಸ್ ನಿಲ್ದಾಣದ ಪಕ್ಕ ಶ್ರೀಕೃಷ್ಣ ಕಾಂಪ್ಲೆಕ್ಸ್ ಹಾಗೂ ಸದಾಶಿವ ನಾಯಕ್ ಅಂಗಡಿ ಮಧ್ಯ 6, 7 ರಿಕ್ಷಾ ನಿಲ್ಲಲು ಅನುಕೂಲವಿದೆ. ಸ್ಥಳೀಯ ಆಡಳಿತ ಅಲ್ಲಿ ಸೂರು ಕಲ್ಪಿಸಿದರೆ ಒಳ್ಳೆಯದು.
    ಮಹಾಬಲ ಕುಲಾಲ, ಗೌರವ ಅಧ್ಯಕ್ಷ, ರಿಕ್ಷಾ ಚಾಲಕ ಮಾಲೀಕರ ಸಂಘ, ಶಂಕರನಾರಾಯಣ

    ಶಂಕರನಾರಾಯಣ ಆಟೋರಿಕ್ಷಾ ನಿಲ್ದಾಣಕ್ಕೆ ಬಸ್ ನಿಲ್ದಾಣ ಬಳಿ ಜಾಗ ಗುರುತಿಸಿದ್ದು, ಇಂಜಿನಿಯರ್ ಜಾಗದ ಸರ್ವೇ ಮಾಡಿ 2.43 ಲಕ್ಷ ರೂ. ಅನುದಾನ ಇಟ್ಟಿದ್ದೇವೆ. ಪ್ರಸಕ್ತ ರಂಗಮಂದಿರದ ಹತ್ತಿರ ಆಟೋ ನಿಲ್ಲುತ್ತಿದ್ದು, ಬಸ್ ನಿಲ್ದಾಣಕ್ಕೂ ಆಟೋ ಸ್ಟಾೃಂಡಿಗೂ ತುಂಬ ದೂರವಾಗುತ್ತದೆ. ಶೀಘ್ರ ಶಂಕರನಾರಾಯಣದಲ್ಲಿ ಆಟೋ ನಿಲ್ದಾಣ ನಿರ್ಮಾಣ ಆಗಲಿದೆ.
    ರವಿ ಕುಲಾಲ್, ಅಧ್ಯಕ್ಷ ಶಂಕರನಾರಾಯಣ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts