More

    VIDEO| ಟೈಟಾನಿಕ್ ಈಸ್ ಬ್ಯಾಕ್: ಮತ್ತೆ ಸಾಗರದ ನೀಲಿ ನೀರಿನಲ್ಲಿ ಚಲಿಸಲಿದೆ ದೈತ್ಯ ಹಡಗು, ಹೇಗಿದೆ ನೋಡಿ?

    ಆಸ್ಟ್ರೇಲಿಯಾ: ಟೈಟಾನಿಕ್ ಮತ್ತೊಮ್ಮೆ ಸಾಗರದ ನೀಲಿ ನೀರಿನಲ್ಲಿ ಚಲಿಸುವುದನ್ನು ಕಾಣಬಹುದು. ಹೌದು, ಮತ್ತೊಮ್ಮೆ ಅದೇ ಹಡಗು ಸಮುದ್ರದ ಅಲೆಗಳ ಮೇಲೆ ತೇಲಲಿದೆ. ಆಸ್ಟ್ರೇಲಿಯಾದ ಬಿಲಿಯನೇರ್ ಕ್ಲೈವ್ ಪಾಮರ್ ಮತ್ತೊಮ್ಮೆ ಟೈಟಾನಿಕ್-II ಯೋಜನೆಗೆ ಚಾಲನೆ ನೀಡಿದ್ದಾರೆ.

    ಏಪ್ರಿಲ್ 13, 1912 ರ ರಾತ್ರಿ ಸಮುದ್ರದ ಆಳದಲ್ಲಿ ಮುಳುಗಿದ ದೈತ್ಯ ಹಡಗಿನ ನಕಲು ಮಾಡುವುದಾಗಿ ಕ್ಲೈವ್ ಘೋಷಿಸಿದ್ದಾರೆ. ಟೈಟಾನಿಕ್ ದುರಂತದಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಉಳಿದ 700 ಜನರು ತಮ್ಮ ಕೊನೆಯ ಉಸಿರಿನವರೆಗೂ ಆ ಭಯಾನಕ ರಾತ್ರಿ ಮತ್ತು ದೃಶ್ಯವನ್ನು ಮರೆಯಲು ಸಾಧ್ಯವಿಲ್ಲ. ಆದರೆ ಈಗ ಒಂದು ಕಂಪನಿ ಧೈರ್ಯ ಮಾಡಿ ಅಪೂರ್ಣವಾದ ಆ ಪ್ರಯಾಣವನ್ನು ಪೂರ್ಣಗೊಳಿಸಲು ನಿರ್ಧರಿಸಿದೆ.

    ಹಡಗಿನ ಮಾದರಿ ಜಗತ್ತಿಗೆ ಪರಿಚಯ 
    ಪಾಲ್ಮರ್ 2012 ರಲ್ಲಿ ಟೈಟಾನಿಕ್-II ಯೋಜನೆಯನ್ನು ಪ್ರಾರಂಭಿಸಿದ್ದರು. 2018 ರಲ್ಲಿ ಮತ್ತೊಮ್ಮೆ ಈ ಕನಸನ್ನು ನನಸಾಗಿಸುವತ್ತ ಹೆಜ್ಜೆ ಹಾಕಿದ್ದರು. ಬುಧವಾರ ಸಿಡ್ನಿಯ ಒಪೇರಾ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಗರದ ಪ್ರಸಿದ್ಧ ಬಂದರಿನಲ್ಲಿ ನಿಂತಿರುವ ಹಡಗಿನ ಮಾದರಿಯನ್ನು ಅನಿಮೇಷನ್ ಚಲನಚಿತ್ರ ಮತ್ತು ಸ್ಕ್ರೀನ್‌ಶಾಟ್‌ಗಳ ಮೂಲಕ ಜಗತ್ತಿಗೆ ಪ್ರಸ್ತುತಪಡಿಸಲಾಯಿತು.

    ಪತ್ರಿಕಾಗೋಷ್ಠಿಯಲ್ಲಿ, ಪಾಮರ್ ತಂಡವು ಹಲವಾರು ವರ್ಷಗಳ ಹಿಂದೆ ಮಾಡಿದ 8 ನಿಮಿಷಗಳ ವಿಡಿಯೋವನ್ನು ಸಹ ತೋರಿಸಿತು. ಹಡಗಿನ ವಿನ್ಯಾಸವನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. 2025 ರ ಮೊದಲ 3 ತಿಂಗಳುಗಳಲ್ಲಿ ಅಥವಾ ಕೊನೆಯಲ್ಲಿ ಹಡಗನ್ನು ಜಗತ್ತಿಗೆ ಅರ್ಪಿಸಲು ನಿರ್ಮಾಣ ಕಂಪನಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಪಾಮರ್ ಹೇಳಿಕೊಂಡಿದ್ದಾರೆ.

    10 ವರ್ಷಗಳ ಹಿಂದೆ ಕಂಡ ಕನಸಿಗೆ ಬ್ರೇಕ್ ಹಾಕಿದ ಕರೊನಾ
    ಮಾಧ್ಯಮ ವರದಿಗಳ ಪ್ರಕಾರ, ಟೈಟಾನಿಕ್ II ಸುಮಾರು 269 ಮೀಟರ್ (833 ಅಡಿ) ಉದ್ದ ಮತ್ತು 32.2 ಮೀಟರ್ (105 ಅಡಿ) ಅಗಲವಾಗಿರುತ್ತದೆ, ಇದು ಟೈಟಾನಿಕ್ ಗಿಂತ ಸ್ವಲ್ಪ ಅಗಲ ಮತ್ತು ದೊಡ್ಡದಾಗಿರುತ್ತದೆ. 835 ಕ್ಯಾಬಿನ್‌ಗಳು ಮತ್ತು 9 ಡೆಕ್‌ಗಳು ಇರುತ್ತವೆ. ಇದರಲ್ಲಿ ಸುಮಾರು 2400 ಮಂದಿ ಪ್ರಯಾಣಿಸಬಹುದು. ಮೊದಲ ಎರಡು ಡೆಕ್‌ಗಳನ್ನು ಕಾಯ್ದಿರಿಸಲಾಗಿದೆ, ಉಳಿದವು ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.

    ಮೂರನೇ ಡೆಕ್‌ನಲ್ಲಿ ಅಡುಗೆ ಕೋಣೆ ಮತ್ತು ಡೈನಿಂಗ್ ಹಾಲ್, ರೆಸ್ಟೋರೆಂಟ್, ಬಾರ್, ಸಿನಿಮಾ ಹಾಲ್ ಮತ್ತು ಥಿಯೇಟರ್ ಇರಲಿದೆ. “ಸುಮಾರು 10 ವರ್ಷಗಳ ಹಿಂದೆ ತನಗೆ ಒಂದು ಕನಸಿತ್ತು, ಆ ಹಡಗಿನ ಮಾದರಿಯನ್ನು ತಯಾರಿಸಿ ಇದೀಗ ಪ್ರಸ್ತುತಪಡಿಸಿರುವುದಾಗಿ” ಪಾಮರ್ ಹೇಳಿದ್ದಾರೆ. ಆದರೆ ಈ ಯೋಜನೆಗೆ ಬೇಕಾದಷ್ಟು ಹಣ ತನ್ನ ಬಳಿ ಆಗ ಇರಲಿಲ್ಲ. ನಂತರ ಅವರ ಯೋಜನೆಯು ಕೋವಿಡ್ ಅವಧಿಯಲ್ಲಿ ಸ್ಥಗಿತಗೊಂಡಿತು. ಆದರೆ ಅವರು ಪ್ರಾಯೋಜಕತ್ವದ ಆಧಾರದ ಮೇಲೆ ಅದನ್ನು ಮರು ಪ್ರಾರಂಭಿಸುತ್ತಿದ್ದಾರೆ.   

    Bengaluru Water Crisis: ‘40 ಸಾವಿರ ಬಾಡಿಗೆ ಕೊಡುತ್ತಿದ್ದೇನೆ, ವಾಶ್‌ರೂಂನಲ್ಲಿಯೂ ನೀರಿಲ್ಲ’

    ಹರಿದ ಸೀರೆ ಉಡುತ್ತಿದ್ದ ಅಮ್ಮ, ತುತ್ತು ಅನ್ನಕ್ಕೂ ಕಷ್ಟವಿತ್ತು..ಆದರಿಂದು ಕೂತು ತಿನ್ನುವಷ್ಟು ಆಸ್ತಿಯಿದೆ..ಈ ನಟ ಯಾರೆಂದು ಗುರುತಿಸುವಿರಾ?

    IPL 2024: ‘ಅವರಿಗೆ ಶೌಚಾಲಯಕ್ಕೂ ಹೋಗಲಾಗುತ್ತಿರಲಿಲ್ಲ’: ರಿಷಬ್ ಪಂತ್ ಸ್ಥಿತಿ ನೆನಪಿಸಿಕೊಂಡು ಭಾವುಕರಾದ ಶಿಖರ್ ಧವನ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts