More

    ಆಸ್ಟ್ರೇಲಿಯಾ ತಂಡಕ್ಕೆ ಚೊಚ್ಚಲ ಟಿ20 ವಿಶ್ವಕಪ್ ಕಿರೀಟ; ಕಿವೀಸ್‌ಗೆ ನಿರಾಸೆ

    ದುಬೈ: ಏಕದಿನ ವಿಶ್ವಕಪ್‌ನಲ್ಲಿ 5 ಬಾರಿ ಗೆದ್ದು ಪ್ರಾಬಲ್ಯ ಸಾಧಿಸಿರುವ ಆಸ್ಟ್ರೇಲಿಯಾ ತಂಡ ಇದೀಗ ಚುಟುಕು ಕ್ರಿಕೆಟ್‌ನಲ್ಲೂ ಚೊಚ್ಚಲ ಬಾರಿಗೆ ವಿಶ್ವ ಚಾಂಪಿಯನ್ ಕಿರೀಟ ಅಲಂಕರಿಸುವಲ್ಲಿ ಯಶಸ್ವಿಯಾಯಿತು. ದುಬೈ ಸ್ಟೇಡಿಯಂನಲ್ಲಿ ಭಾನುವಾರ ನಡೆದ 7ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆರನ್ ಫಿಂಚ್ ಬಳಗ ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿತು. ಸತತ ಮೂರನೇ ಐಸಿಸಿ ಟೂರ್ನಿಗಳಲ್ಲಿ ಫೈನಲ್‌ಗೇರಿದ್ದ ಕಿವೀಸ್ ತಂಡ ‘ವಿಶ್ವಕಪ್’ ಒಲಿಸಿಕೊಳ್ಳಲು ಮತ್ತೊಮ್ಮೆ ವಿಫಲವಾಯಿತು.

    ಆಸ್ಟ್ರೇಲಿಯಾ ತಂಡಕ್ಕೆ ಚೊಚ್ಚಲ ಟಿ20 ವಿಶ್ವಕಪ್ ಕಿರೀಟ; ಕಿವೀಸ್‌ಗೆ ನಿರಾಸೆಟಾಸ್ ಜಯಿಸಿದ ಆಸೀಸ್ ನಾಯಕ ಆರನ್ ಫಿಂಚ್ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ನಾಯಕ ಕೇನ್ ವಿಲಿಯಮ್ಸನ್ (85ರನ್, 48 ಎಸೆತ, 10 ಬೌಂಡರಿ, 3 ಸಿಕ್ಸರ್) ಏಕಾಂಗಿ ಅಬ್ಬರದ ಫಲವಾಗಿ ನ್ಯೂಜಿಲೆಂಡ್ ತಂಡ 4 ವಿಕೆಟ್‌ಗೆ 172 ರನ್ ಕಲೆಹಾಕಿತು. ಪ್ರತಿಯಾಗಿ ಆಸೀಸ್ ತಂಡ, ಡೇವಿಡ್ ವಾರ್ನರ್ (53ರನ್, 38 ಎಸೆತ, 4 ಬೌಂಡರಿ, 3 ಸಿಕ್ಸರ್) ಹಾಗೂ ಮಿಚೆಲ್ ಮಾರ್ಷ್ (77*ರನ್, 50 ಎಸೆತ, 6 ಬೌಂಡರಿ, 4 ಸಿಕ್ಸರ್) ಜೋಡಿಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 18.5 ಓವರ್‌ಗಳಲ್ಲಿ 2 ವಿಕೆಟ್‌ಗೆ 173 ರನ್ ಗಳಿಸಿ ಗೆಲುವಿನ ನಗೆ ಬೀರಿತು.

    ನ್ಯೂಜಿಲೆಂಡ್: 4 ವಿಕೆಟ್‌ಗೆ 172 (ಮಾರ್ಟಿನ್ ಗುಪ್ಟಿಲ್ 28, ಕೇನ್ ವಿಲಿಯಮ್ಸನ್ 85, ಜೋಶ್ ಹ್ಯಾಸಲ್‌ವುಡ್ 16ಕ್ಕೆ 3, ಆಡಂ ಜಂಪಾ 26ಕ್ಕೆ 1), ಆಸ್ಟ್ರೇಲಿಯಾ: 18.5 ಓವರ್‌ಗಳಲ್ಲಿ 2 ವಿಕೆಟ್‌ಗೆ 173 (ಡೇವಿಡ್ ವಾರ್ನರ್ 53, ಮಿಚೆಲ್ ಮಾರ್ಷ್ 77*, ಗ್ಲೆನ್ ಮ್ಯಾಕ್ಸ್‌ವೆಲ್ 28*, ಟ್ರೆಂಡ್ ಬೌಲ್ಟ್ 18ಕ್ಕೆ 2)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts