More

    ಅಹರ್ನಿಶಿ ಟೆಸ್ಟ್‌ನಲ್ಲಿ 468 ರನ್ ಗುರಿ ನೀಡಿದ ಆಸೀಸ್, ಸೋಲಿನ ಸುಳಿಯಲ್ಲಿ ಇಂಗ್ಲೆಂಡ್

    ಅಡಿಲೇಡ್: ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ಬೃಹತ್ ಗುರಿ ನೀಡಿದ ಆಸ್ಟ್ರೇಲಿಯಾ ತಂಡ ಆಶಸ್ ಸರಣಿಯ 2ನೇ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯದ 4ನೇ ದಿನದಾಟದಲ್ಲೇ 4 ವಿಕೆಟ್ ಕಬಳಿಸಿದ್ದು, ಅಂತಿಮ ದಿನದಾಟದಲ್ಲಿ ಬಾಕಿ 6 ವಿಕೆಟ್ ಉರುಳಿಸಿ ಗೆಲುವು ಸಾಧಿಸಲು ವೇದಿಕೆ ನಿರ್ಮಿಸಿಕೊಂಡಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಲು ದಿಟ್ಟ ಹೆಜ್ಜೆ ಇಟ್ಟಿದೆ.

    ಾಲೋಆನ್ ನೀಡದೆ 2ನೇ ಇನಿಂಗ್ಸ್ ಆರಂಭಿಸಿದ್ದ ಆಸೀಸ್ 1 ವಿಕೆಟ್‌ಗೆ 45 ರನ್‌ಗಳಿಂದ ಭಾನುವಾರ ಆಟ ಮುಂದುವರಿಸಿ, 9 ವಿಕೆಟ್‌ಗೆ 230 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದರಿಂದ ಗೆಲುವಿಗೆ 468 ರನ್‌ಗಳ ಕಠಿಣ ಸವಾಲು ಪಡೆದ ಇಂಗ್ಲೆಂಡ್, ದಿನದಂತ್ಯಕ್ಕೆ 4 ವಿಕೆಟ್‌ಗೆ 82 ರನ್ ಗಳಿಸಿ ಸೋಲಿನ ಸುಳಿಯಲ್ಲಿ ಸಿಲುಕಿದೆ. ಆಂಗ್ಲರು ಗೆಲ್ಲಬೇಕಾದರೆ ಅಂತಿಮ ದಿನ ಇನ್ನೂ 386 ರನ್ ಗಳಿಸಬೇಕಿದೆ. ನಾಯಕ ಜೋ ರೂಟ್ (24) ಔಟಾಗುವುದರೊಂದಿಗೆ ದಿನದಾಟಕ್ಕೆ ಮುಕ್ತಾಯಗೊಂಡಿದ್ದು, ಬೆನ್ ಸ್ಟೋಕ್ಸ್ (3*) ಏಕಾಂಗಿಯಾಗಿ ಕ್ರೀಸ್‌ನಲ್ಲಿದ್ದಾರೆ.

    ಆಸ್ಟ್ರೇಲಿಯಾ: 9 ವಿಕೆಟ್‌ಗೆ 473 ಡಿಕ್ಲೇರ್ ಮತ್ತು 9 ವಿಕೆಟ್‌ಗೆ 230 ಡಿಕ್ಲೇರ್ (ಲಬುಶೇನ್ 51, ಹೆಡ್ 51, ಸ್ಮಿತ್ 6, ಗ್ರೀನ್ 33*, ಮಲಾನ್ 33ಕ್ಕೆ 2, ರಾಬಿನ್‌ಸನ್ 54ಕ್ಕೆ 2, ರೂಟ್ 27ಕ್ಕೆ 2), ಇಂಗ್ಲೆಂಡ್: 236 ಮತ್ತು 4 ವಿಕೆಟ್‌ಗೆ 82 (ಬರ್ನ್ಸ್ 34, ಮಲಾನ್ 20, ರೂಟ್ 24, ಸ್ಟೋಕ್ಸ್ 3*, ರಿಚರ್ಡ್‌ಸನ್ 17ಕ್ಕೆ 2, ನೇಸರ್ 7ಕ್ಕೆ 1).

    ‘ಹುಡುಗಿಯರು ಕ್ರಿಕೆಟ್ ಆಡುವ ಅಗತ್ಯವಿಲ್ಲ’ ಎಂದಿದ್ದರು ಗಂಗೂಲಿ! ವಿವಾದವೆಬ್ಬಿಸಿದ ಹಳೆ ವಿಡಿಯೋ

    VIDEO: ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ತವರಲ್ಲಿ ದಾಖಲೆ ಎತ್ತರದ ವರ್ಣಚಿತ್ರ ರಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts