More

    ಭಾರತ ಹಾಕಿ ತಂಡವನ್ನು ಅಭಿನಂದಿಸಿದ ಆಸ್ಟ್ರೇಲಿಯಾ ಹೈಕಮಿಷನರ್​

    ನವದೆಹಲಿ : ಭಾರತೀಯ ಮಹಿಳಾ ಹಾಕಿ ತಂಡವು ಆಸ್ಟ್ರೇಲಿಯಾದ ಬಲಿಷ್ಠ ತಂಡವನ್ನು 1-0 ಅಂತರದಿಂದ ಸೋಲಿಸಿ ಇತಿಹಾಸದಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್​ ಸೆಮಿಫೈನಲ್ಸ್​ ಪ್ರವೇಶಿಸಿದೆ. ವರ್ಲ್ಡ್​ ನಂ.4 ತಂಡವಾದ ಆಸ್ಟ್ರೇಲಿಯಾ ತಂಡವನ್ನು ವರ್ಲ್ಡ್​ ನಂ.10 ಆಗಿರುವ ಭಾರತ ತಂಡ ಮಣಿಸಿರುವುದಕ್ಕೆ ಆಟಗಾರ್ತಿಯರಿಗೆ ಪ್ರಶಂಸೆಯ ಹೊಳೆ ಹರಿದಿದೆ.

    ಈ ಸಾಧನೆಗೆ ಭಾರತಕ್ಕೆ ಆಸ್ಟ್ರೇಲಿಯಾದ ಹೈಕಮಿಷನರ್​ ಆಗಿರುವ ಬ್ಯಾರ್ರಿ ಒ’ಫೆರ್ರೆಲ್​ ಅವರು ಕೂಡ ಭಾರತೀಯ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. “ವೆಲ್​ ಡನ್​!” ಎಂದು ಶ್ಲಾಘಿಸಿರುವ ಅವರು, “ಅದು ಕಠಿಣವಾದ ಪಂದ್ಯವಾಗಿತ್ತು. ಆದರೆ ನಿಮ್ಮ ಡಿಫೆನ್ಸ್​​ ಕೊನೆಯವರೆಗೂ ಪಟ್ಟಾಗಿ ಮುಂದುವರೆದಿತ್ತು” ಎಂದಿದ್ದಾರೆ.

    ಇದನ್ನೂ ಓದಿ: ಬೊಮ್ಮಾಯಿ ನೇತೃತ್ವದ ಕ್ಯಾಬಿನೆಟ್​ ಸೇರಲಿದೆ ಯುವಪಡೆ! ಆ ಲಿಸ್ಟ್ ಇಲ್ಲಿದೆ

    ಜೊತೆಗೆ, ಉತ್ತಮ ಆಟಗಾರಿಕೆ ಪ್ರದರ್ಶಿಸಿದ ಭಾರತ ತಂಡದ ಸವಿತಾ ಪೂನಿಯ ಅವರನ್ನು “ಗ್ರೇಟ್​ ವಾಲ್​ ಆಫ್​ ಇಂಡಿಯ” ಎಂದು ಕರೆದು “ಸವಿತಾರನ್ನು ಮಣಿಸಲು ಸಾಧ್ಯವಾಗಲಿಲ್ಲ” ಎಂದು ಟ್ವೀಟ್​ ಮಾಡಿರುವ ಒ’ಫೆರ್ರೆಲ್​, “ಬೆಸ್ಟ್​ ಆಫ್​ ಲಕ್​ ಇನ್ ಸೆಮಿ ಅಂಡ್​ ಗ್ರ್ಯಾಂಡ್​ ಫೈನಲ್ಸ್​” ಎಂದು ಭಾರತ ತಂಡಕ್ಕೆ ಮುಂದಿನ ಪಂದ್ಯಕ್ಕೆ ಶುಭ ಕೋರಿದ್ದಾರೆ. (ಏಜೆನ್ಸೀಸ್)

    ಮಿಜೊರಾಂ ಸಂಸದರ ವಿರುದ್ಧದ ಕೇಸ್ ವಾಪಸ್​ : ಅಸ್ಸಾಂ ಸಿಎಂ

    ಗ್ಯಾಸ್ಟ್ರಿಕ್ ಸಮಸ್ಯೆಗೆ, ಮಧುಮೇಹ ನಿಯಂತ್ರಣಕ್ಕೆ ಇದು ಬಲು ಉಪಯುಕ್ತ!

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts