More

    ಗಣಪತಿ ಕಟ್ಟೆಯಲ್ಲಿ ಹಸಿರು ಬಾವುಟವಿಟ್ಟು ಗಲಭೆಗೆ ಯತ್ನ: ಇನ್ಸ್‌ಪೆಕ್ಟರ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

    ಮಂಗಳೂರು: ಕಿಡಿಗೇಡಿಗಳು ಗಣಪತಿ ಕಟ್ಟೆಯಲ್ಲಿ ಹಸಿರು ಬಾವುಟವಿಟ್ಟು ಗಲಭೆಗೆ ಯತ್ನಿಸಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುಚ್ಚೆಮೊಗೇರು ಎಂಬಲ್ಲಿ ಸೆ.30ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಈಗಾಗಲೇ ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್​ ಮಿಲಾದ್​ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಗಲಭೆ ಉಂಟಾದ ಪ್ರಕರಣದ ತನಿಖೆ ನಡೆಯುತ್ತಿದೆ. ಅದೇ ದಿನ ಮಂಗಳೂರಿನಲ್ಲೂ ಶಾಂತಿ ಕದಡುವ ಕೆಲಸ ನಡೆದಿತ್ತು ಎಂದು ತಿಳಿದುಬಂದಿದೆ. ಆದರೆ, ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.

    ಹಲವು ದಿನಗಳ ಬಳಿಕ ಸೆ.30ರಂದು ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈದ್​ ಮಿಲಾದ್ ದಿನ ಗಣಪತಿ ಕಟ್ಟೆಯಲ್ಲಿ ಕಿಡಿಗೇಡಿಗಳು ಹಸಿರು ಬಾವುಟ ಇಟ್ಟಿದ್ದರು. ಈ ಬಗ್ಗೆ ಹೊಸಬೆಟ್ಟು ಪಿಡಿಒ ಶೇಖರ್​ ಗಮನಕ್ಕೆ ತಂದರೂ ಬಾವುಟವನ್ನು ತೆರವು ಮಾಡದೆ ಬೇಜವಾಬ್ದಾರಿ ಮೆರೆದಿದ್ದರು.

    ಇದನ್ನೂ ಓದಿ: ಉಗ್ರಾಣ ನಿಗಮದ ಅವ್ಯವಹಾರ ತನಿಖೆ; ಐಎಎಸ್​ ಸೇರಿ ವಿವಿಧ ವೃಂದದ ಅಧಿಕಾರಿಗಳ ವಿರುದ್ಧ ಕ್ರಮ

    ಪಿಡಿಒ ವರ್ತನೆಯನ್ನು ಕಂಡ ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಕೆಂಡಾಮಂಡಲರಾಗಿ ಪಿಡಿಒರನ್ನು ತರಾಟೆಗೆ ತೆಗೆದುಕೊಂಡ ದೃಶ್ಯ ವೈರಲ್​ ಆಗಿರುವ ವಿಡಿಯೋದಲ್ಲದೆ. ಗಣಪತಿ ಕಟ್ಟೆ ಮೇಲೆ‌ ಬಾವುಟ ಹಾಕಲಿಕ್ಕೆ ಅನುಮತಿ ತೆಗೊಂಡಿದ್ದಾರಾ? ಎಂದು ಪಿಡಿಒರನ್ನು ಇನ್ಸ್​ಪೆಕ್ಟರ್​ ಪ್ರಶ್ನೆ ಮಾಡಿದರು.

    ನಿನ್ನ ಕೆಲಸ ಏನೂ ಅಂತ ನಿನಗೆ ಗೊತ್ತಿಲ್ಲ, ಏನು ಮಾಡ್ತಾ ಇದೀಯಾ? ಅವರು ಅನುಮತಿ ತೆಗೆದುಕೊಂಡಿಲ್ಲ ಅಂದ್ರೆ ಪೊಲೀಸ್ ದೂರು ಕೊಡಬೇಕು. ಮೊದಲು ಇವನನ್ನೇ ಆರೋಪಿ‌ ಮಾಡಬೇಕು. ನಿನ್ನ ಅಧಿಕಾರ ಏನು ಅಂತ ನಿನಗೇ ಗೊತ್ತಿಲ್ಲ. ನನಗೂ ಇದಕ್ಕೂ ಸಂಬಂಧ ಇಲ್ಲ ಅಂತ ಹೇಳುವ ನೀನ್ಯಾಕೆ ಪಿಡಿಒ ಆಗಿದ್ದೀಯ ಅಂತ ಇನ್ಸ್‌ಪೆಕ್ಟರ್ ಗರಂ ಆದರು.

    ಬಳಿಕ ಪೊಲೀಸ್ ಸಿಬ್ಬಂದಿ ಮೂಲಕ ಇನ್ಸ್​ಪೆಕ್ಟರ್​ ಬಾವುಟ ತೆರವು ಮಾಡಿಸಿದರು. ಹಿಂದೂಗಳಿಗೆ ಸೇರಿದ್ದ ಕಟ್ಟೆಯಲ್ಲಿ ಹಸಿರು ಬಾವುಟ ನೆಟ್ಟು ಗಲಭೆ ಯತ್ನ ನಡೆಸಿದ್ದು, ಇನ್ಸ್‌ಪೆಕ್ಟರ್ ಸಮಯಪ್ರಜ್ಞೆಯಿಂದ ಸಂಘರ್ಷವೊಂದು ತಪ್ಪಿದೆ.

    ಏನಿದು ಮಹದೇವ ಬೆಟ್ಟಿಂಗ್ ಆ್ಯಪ್ ಕೇಸ್​? ರಣಬೀರ್​ ಬೆನ್ನಲ್ಲೇ ಶ್ರದ್ಧಾ​, ಕಪಿಲ್​, ಹುಮಾಗೆ ಇಡಿ ಸಮನ್ಸ್​

    ತೀಸ್ತಾ ಕಣಿವೆ ತತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts