More

    ಮಹಿಳೆ ಮೇಲೆ ಬಲತ್ಕಾರಕ್ಕೆ ಯತ್ನ: ಚಮನಸಾಬ್ ಅಂಗರಗಟ್ಟಿ ವಿರುದ್ಧ ದೂರು ದಾಖಲು

    ರಟ್ಟಿಹಳ್ಳಿ: ತಾಲೂಕಿನ ಕೆಂಚಾಯಿಕೊಪ್ಪ ಗ್ರಾಮದ ಅನ್ಯಕೋಮಿನ ಮಹಿಳೆ ಮೇಲೆ ಬಲತ್ಕಾರಕ್ಕೆ ಯತ್ನಿಸಿ, ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಾಗಿದೆ.

    ಗ್ರಾಮದ ಶಾಹೀದವುಲ್ಲಾ ಚಮನಸಾಬ್ ಅಂಗರಗಟ್ಟಿ ವಿರುದ್ಧ ದೂರು ದಾಖಲಾಗಿದೆ.

    ನೀರು ಗಂಟಿ ಕೆಲಸ ಮಾಡುತ್ತಿರುವ ಮಹಿಳೆ, ಭಾನುವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಪಕ್ಕದ ಗ್ರಾಮದಿಂದ ಸಂತೆ ಮುಗಿಸಿಕೊಂಡು ಕೆಂಚಾಯಿಕೊಪ್ಪ ಗ್ರಾಮಕ್ಕೆ ಮರಳುವಾಗ ಹಿಂಬಾಲಿಸಿಕೊಂಡು ಬಂದ ಶಾಹೀದವುಲ್ಲಾ ಅಂಗರಗಟ್ಟಿ, ಬೈಕ್ ಮೇಲೆ ಹತ್ತು, ನಿನಗೆ ಊರಿಗೆ ಬಿಡುತ್ತೇನೆ ಎಂದು ಹೇಳಿದ್ದಾನೆ. ಮಹಿಳೆ ಬೇಡ ಎಂದು ತಿರಸ್ಕಾರ ಮಾಡಿದರೂ, ನೀನು ನನಗೆ ಅಕ್ಕನ ಸಮಾನ ಎಂದು ಒತ್ತಾಯದಿಂದ ಬೈಕ್ ಮೇಲೆ ಕೂರಿಸಿಕೊಂಡು ನೇರವಾಗಿ ತನ್ನ ಜಮೀನಿನ ದನದ ಕೊಟ್ಟಿಗೆಗೆ ಕರೆದುಕೊಂಡು ಹೋಗಿ ಬಲತ್ಕಾರಕ್ಕೆ ಯತ್ನಿಸಿ, ಜಾತಿ ನಿಂದನೆ ಮಾಡಿದ್ದಾನೆ. ಈ ವೇಳೆ ಮಹಿಳೆ ಕಿರುಚಾಡಿ ವಿರೋಧ ವ್ಯಕ್ತಪಡಿಸಿದ ಬಳಿಕ ಆರೋಪಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಸ್ಥಳಕ್ಕೆ ರಾಣೆಬೆನ್ನೂರ ಡಿವೈಎಸ್ಪಿ ಡಾ.ಗಿರೀಶ ಭೋಜಣ್ಣವರ, ಹಿರೇಕೆರೂರ ಸಿಪಿಐ ಲಕ್ಷ್ಮೀಕಾಂತ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪರಾರಿಯಾಗಿರುವ ಆರೋಪಿ ಪತ್ತೆಗಾಗಿ ತಂಡ ರಚನೆ ಮಾಡಲಾಗಿದೆ. ಶೀಘ್ರವೇ ಆರೋಪಿ ಪತ್ತೆ ಮಾಡಲಾಗುವುದು ಎಂದು ಪಿಎಸ್​ಐ ಜಗದೀಶ ಜಿ. ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts