More

    ನಾಮಸ್ಮರಣೆಯಿಂದ ಭಗವಂತನ ಕೃಪೆ ಪ್ರಾಪ್ತಿ

    ಶಿಕಾರಿಪುರ: ಭಗವಂತನ ಕೃಪೆಗಾಗಿ ಅವನ ನಾಮಸ್ಮರಣೆ ಮಾಡಬೇಕು. ಏಕಾದಶಿ ಅತ್ಯಂತ ಪವಿತ್ರವಾದ ಮತ್ತು ಪಾಂಡುರಂಗನಿಗೆ ಅತ್ಯಂತ ಇಷ್ಟವಾದ ದಿನ ಎಂದು ಶ್ರೀ ವಿಠಲ ರಖುಮಾಯಿ ದೇವಾಲಯ ಸಮಿತಿ ಸಂಚಾಲಕ ಪಾಂಡುರಂಗ ನವಲೆ ಹೇಳಿದರು.

    ತಾಲೂಕಿನ ತೊಗರ್ಸಿ ಶ್ರೀ ಪಾಂಡುರಂಗ ರಖುಮಾಯಿ ದೇವಾಲಯದಲ್ಲಿ ಮಂಗಳವಾರ ರಾತ್ರಿ ಅಖಂಡ ಪಾಳಿ ಭಜನೆ ಮತ್ತು ಬುಧವಾರ ಏರ್ಪಡಿಸಿದ್ದ ಶ್ರೀ ಪಾಂಡುರಂಗ ರಖುಮಾಯಿಗೆ ಮಹಾಪೂಜೆ, ಪಲ್ಲಕ್ಕಿ ಉತ್ಸವ ಮತ್ತು ದಿಂಡಿ ಉತ್ಸವದಲ್ಲಿ ಮಾತನಾಡಿ,
    ಪಂಢರಾಪುರದ ಪಾಂಡುರಂಗ ನಾದಬ್ರಹ್ಮ. ಕೇವಲ ಅವನ ನಾಮಸ್ಮರಣೆಯೇ ಅತ್ಯಂತ ಶ್ರೇಷ್ಠವಾದದ್ದು. ಇಂದು ನೂರಾರು ಸಂತರು ಹರಿಹರ, ದಾವಣಗೆರೆ, ಭದ್ರಾವತಿ, ಸಾಗರ, ಹಾನಗಲ್ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದಾರೆ. ಸಂತರ ರೂಪದಲ್ಲಿ ಪಾಂಡುರಂಗ ಇಲ್ಲಿಗೆ ಬಂದಿದ್ದಾನೆ ಎಂದರು.
    ತೊಗರ್ಸಿ ಸುಕ್ಷೇತ್ರದಲ್ಲಿ ಇರುವ ಪೂಜ್ಯತ್ರಯರ ಶುಭಾಶೀರ್ವಾದದ ನೆರಳಿನಲ್ಲಿ ಕಳೆದ 33 ವರ್ಷದಿಂದ ದಿಂಡಿ ಉತ್ಸವ ನಿರಂತರ ನಡೆಯುತ್ತಿದೆ. ಇತ್ತೀಚೆಗೆ ದೇವಸ್ಥಾನದಲ್ಲಿ ಶ್ರೀರಾಮ, ಸೀತಾ, ಲಕ್ಷ್ಮಣ ಹಾಗೂ ಆಂಜನೇಯರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಹೇಳಿದರು.
    ದೇವಾಲಯ ಸಂಸ್ಥಾಪಕರಾದ ರಾಮಚಂದ್ರಪ್ಪ ನವಲೆ, ಸಂತರಾದ ಕೃಷ್ಣಮೂರ್ತಿ, ಪ್ರಧಾನ ಅರ್ಚಕ ಸತ್ಯನಾರಾಯಣ ರಾವ್ ನಾಡಿಗೇರ್ ಅವರನ್ನು ಸನ್ಮಾನಿಸಲಾಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಪರಶುರಾಮ ಹೆಬ್ಬಾರೆ, ಹಾವೇರಿಯ ಬಾಬುರಾವ್ ಹುದ್ದಾರ್, ಗ್ರಾಪಂ ಮಾಜಿ ಅಧ್ಯಕ್ಷ ಜೋಗಿಹಳ್ಳಿ ಪರಮೇಶ್ವರಪ್ಪ, ಸಂತರಾದ ಜಯಣ್ಣ, ರಾಮಕೃಷ್ಣಪ್ಪ, ಚಂದ್ರಶೇಖರ, ಪ್ರಮುಖರಾದ ಶಿವಾನಂದ ಬಾಂಬೂರೆ, ದಾಮೋದರ್, ನಾಗೇಂದ್ರ ಜಿಂಗಾಡೆ, ಹರೀಶ್ ಹೆಬ್ಬಾರೆ, ಸುನಿಲ್ ಬಾಂಬೂರೆ, ಪ್ರವೀಣ್, ಗೋಪಿನಾಥ್, ಡಾ. ನೂತನ್, ಸಾಗರ್, ಚಂದ್ರಪ್ಪ, ಅಣ್ಣಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts