More

    ವಕೀಲೆ ಮೇಲೆ ಹಲ್ಲೆ ಖಂಡಿಸಿ ನಾಳೆ ರಾಜ್ಯಾದ್ಯಂತ ಪ್ರತಿಭಟನೆ: ಆರೋಪಿ ಪರ ಯಾರೂ ವಕಾಲತ್ತು ವಹಿಸದಂತೆ ಮನವಿ

    ಬಾಗಲಕೋಟೆ: ನಿನ್ನೆ ಬಾಗಲಕೋಟೆಯ ನಡುರಸ್ತೆಯಲ್ಲಿ ವಕೀಲೆ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿರುವ ಬಾಗಲಕೋಟೆ ವಕೀಲರ ಸಂಘ ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

    ಸೋಮವಾರ ಕೋರ್ಟ್​ ಕಲಾಪಗಳಿಂದ ದೂರ ಉಳಿಯಲು ನಿರ್ಧರಿಸಲಾಗಿದೆ ಎಂದು ವಕೀಲರ ಸಂಘ ತಿಳಿಸಿದೆ.
    ನವನಗರದ ಜಿಲ್ಲಾ ವಕೀಲರ‌ ಭವನದಲ್ಲಿ ನಡೆದ ಬಾಗಲಕೋಟೆ ವಕೀಲರ ಸಂಘದ ತುರ್ತು ಸಭೆ ನಡೆಸಿದ ಪದಾಧಿಕಾರಿಗಳು, ವಕೀಲರು ಈ ತೀರ್ಮಾನ ಕೈಗೊಂಡಿದ್ದಾರೆ.

    ನಾಳೆ ರಾಜ್ಯದ ವಿವಿದ ಜಿಲ್ಲೆ ಹಾಗೂ ತಾಲೂಕಾ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆ. ಮಹಿಳಾ ವಕೀಲರ ಮೇಲೆ‌ ಹಲ್ಲೆ ಪ್ರಕರಣದ ಆರೋಪಿಗಳ ಪರ ಯಾರೂ ವಕಲಾತ್ತು ವಹಿಸದಂತೆ ಸ್ವಯಂ ತೀರ್ಮಾನ ಕೈಗೊಳ್ಳಲಾಗಿದ್ದು, ವಕೀಲರಿಗೂ ಮನವಿ ಮಾಡಿದೆ.

    ಯಾವ ವಕೀಲರು ಆರೋಪಿಗಳ ಪರ ವಕಾಲತ್ತು ವಹಿಸಬಾರದು ಎಂದು ರಾಜ್ಯ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು.ನಾಳೆ ನವನಗರದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿದ್ದು, ಜಿಲ್ಲಾಡಳಿತ ಭವನದ‌ ಮುಂದೆ ಪ್ರತಿಭಟನೆ ನಡೆಯಲಿದೆ.

    ವಕೀಲೆ ಸಂಗೀತಾ ಶಿಕ್ಕೇರಿ ಅವರ ಮನೆಗೆ ಬಂದ್ ಮಾಡಿರುವ ನೀರು, ವಿದ್ಯುತ್ ಸಂಪರ್ಕ ಕೂಡಲೇ ಒದಗಿಸಬೇಕು.ವಕೀಲೆ ಮೇಲೆ ಹಾಡು ಹಗಲೇ ಮೃಗೀಯವಾಗಿ ಹಲ್ಲೆ ಮಾಡಿರುವ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು.ವಕೀಲರ ಮೇಲೆ ದೌರ್ಜನ್ಯ ನಡೆದಯಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗುವುದು ಎಂದು ಸಭೆಯಲ್ಲಿ ಚರ್ಚಿಸಲಾಯಿತು.

    ಸಭೆಯಲ್ಲಿ ಬಾಗಲಕೋಟೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ‌.ಬಿ‌.ಪೂಜಾರ್, ಉಪಾಧ್ಯಕ್ಷ ಅನಿಲ ಜಾಧವ, ರಾಜ್ಯ ವಕೀಲರ ಪರಿಷತ್ ಸದಸ್ಯ ಎಸ್.ಎಸ್.ಮಿಠ್ಠಲ ಕೋಡ , ರಮೇಶ ಬದ್ನೂರ್, ಪಾರ್ವತಿ ಪಾಟೀಲ ಸೇರಿ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು.(ದಿಗ್ವಿಜಯ ನ್ಯೂಸ್)

    ಸಾರ್ವಜನಿಕರ ಎದುರಲ್ಲೇ ವಕೀಲೆ ಮೇಲೆ ಹಲ್ಲೆ: ಕಾಲಿನಿಂದ ಒದ್ದು ವಿಕೃತಿ ಮೆರೆದ್ರೂ ತಪ್ಪಿಲ್ಲ ಎಂದು ಸಮರ್ಥನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts