More

    ‘ನೌಕಾಪಡೆಯ ನಿವೃತ್ತ ಅಧಿಕಾರಿ ಮೇಲೆ ನಡೆದ ಹಲ್ಲೆ ಸ್ವಯಂಪ್ರೇರಿತ’-ಶಿವಸೇನೆ ಪ್ರತಿಕ್ರಿಯೆ

    ಮುಂಬೈ: ನೌಕಾಪಡೆ ನಿವೃತ್ತ ಅಧಿಕಾರಿಯ ಮೇಲೆ ಶಿವಸೇನೆಯ ಸುಮಾರು 12 ಕಾರ್ಯಕರ್ತರು ತೀವ್ರ ದಾಳಿ ನಡೆಸಿದ್ದರು. ಮನೆಯಿಂದ ಹೊರಗೆ ಕಳಿದು ಹೊಡೆದ ಪರಿಣಾಮ 66 ವರ್ಷದ ನಿವೃತ್ತ ಅಧಿಕಾರಿಯ ಕಣ್ಣಿಗೆ ಗಂಭೀರ ಗಾಯವಾಗಿದೆ.

    ಗಾಯಗೊಂಡ ಮದನ್​ ಶರ್ಮಾ ಅವರೊಂದಿಗೆ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್​ ಅವರೂ ಕೂಡ ಮಾತುಕತೆ ನಡೆಸಿದ್ದಾರೆ.  ಇಷ್ಟೆಲ್ಲ ಆದಮೇಲೆ ಘಟನೆಗೆ ಸಂಬಂಧಪಟ್ಟಂತೆ ಶಿವಸೇನೆ ಪ್ರತಿಕ್ರಿಯೆ ನೀಡಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಯವರ ಕಾರ್ಟೂನ್​ ಶೇರ್​ ಮಾಡಿದ್ದಕ್ಕೆ ಉದ್ರಿಕ್ತಗೊಂಡವರು ಸ್ವಯಂ ಪ್ರೇರಣೆಯಿಂದ ಈ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದೆ. ಇದನ್ನೂ ಓದಿ: ಒಂಟಿ ಮನೆಯಲ್ಲಿ ಡಬಲ್​ ಮರ್ಡರ್​; ವೃದ್ಧ ದಂಪತಿಯ ಭೀಕರ ಹತ್ಯೆ

    ಶಿವಸೇನೆ ಮುಖ್ಯಸ್ಥ, ವಕ್ತಾರ ಸಂಜಯ್​ ರಾವತ್​ ಅವರು ಮಾತನಾಡಿ, ಮಹಾರಾಷ್ಟ್ರದಲ್ಲಿ ಕಾನೂನುಗಳನ್ನು ಕೈಗೆ ತೆಗೆದುಕೊಳ್ಳುವ ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಇದು ಉದ್ಧವ್ ಠಾಕ್ರೆಯವರ ನೀತಿ ಎಂದು ತಿಳಿಸಿದ್ದಾರೆ.
    ನೌಕಾಪಡೆಯ ನಿವೃತ್ತ ಅಧಿಕಾರಿ ಮದನ್​ ಶರ್ಮಾ ಅವರು ಉದ್ಧವ್ ಠಾಕ್ರೆಯವರನ್ನು ಅವಹೇಳನ ಮಾಡುವಂಥ ವ್ಯಂಗ್ಯಚಿತ್ರವನ್ನು ವಾಟ್ಸ್​​ಆ್ಯಪ್​​ನಲ್ಲಿ ಫಾರ್​ವಾರ್ಡ್ ಮಾಡಿದ್ದರು. ಇದರಿಂದಾಗಿ ಶಿವಸೈನಿಕರು ಸಿಟ್ಟಾಗಿ, ಸ್ವಯಂಪ್ರೇರಿತರಾಗಿ ಹಲ್ಲೆ ಮಾಡಿದ್ದಾರೆ. ದಾಳಿ ಮಾಡಿದವರನ್ನು ಆಗಲೇ ಬಂಧಿಸಲಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:  ವೇದಿಕೆ ಮೇಲೆ ಸಚಿವರ ಕೂದಲು ಕತ್ತರಿಸಿದ…60,000 ರೂ.ಪಡೆದ !

    ಈ ಘಟನೆಯನ್ನು ಬಿಜೆಪಿ ರಾಜಕೀಯಗೊಳಿಸಿದೆ. ಸಂಯಮ ಎರಡೂ ಕಡೆಯಿಂದಲೂ ಇರಬೇಕಿತ್ತು. ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲ ಅಥವಾ ಮುಖ್ಯಮಂತ್ರಿಗಳು ಸೇರಿ ಗಣ್ಯರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದರೆ ಅವರ ಬೆಂಬಲಿಗರು ನಿಯಂತ್ರಣ ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    VIDEO: ನೌಕಾಪಡೆ ನಿವೃತ್ತ ಅಧಿಕಾರಿಯನ್ನು ಥಳಿಸಿದ ಶಿವಸೇನೆ ಗೂಂಡಾಗಳು; ಕಣ್ಣಿಗೆ ಗಂಭೀರ ಗಾಯ

    ಫೇಸ್‌ಬುಕ್ ಅಧಿಕಾರಿಯ ವಿಚಾರಣೆಗೆ ಮುಂದಾದ ವಿಧಾನಸಭೆ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts