More

    16 ರಂದು ಕೊಲೆ ಖಂಡಿಸಿ ಮಾನ್ವಿಯಲ್ಲಿ ಪ್ರತಿಭಟನೆ

    ಮಸ್ಕಿ: ಜಿಲ್ಲೆಯಲ್ಲಿ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ತಡೆಯುವಲ್ಲಿ ವಿಫಲವಾಗಿದೆ ಎಂದು ಜಿಪಂ ಮಾಜಿ ಸದಸ್ಯ ದೊಡ್ಡಪ್ಪ ಮುರಾರಿ ಆರೋಪಿಸಿದರು.

    ದಲಿತರ ಮೇಲೆ ದೌರ್ಜನ್ಯ ತಡೆಗಟ್ಟುವಲ್ಲಿ ಎಸ್ಪಿ ವಿಫಲ

    ಪಟ್ಟಣದ ಗಾಂಧಿನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ದಲಿತ ಮುಖಂಡರು ಹಮ್ಮಿಕೊಂಡಿದ್ದ ಮಾನ್ವಿಯ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮದ್ಲಾಪೂರು ಗ್ರಾಮದಲ್ಲಿ ಪ್ರಸಾದ್ ಅವರ ಕೊಲೆಯಲ್ಲಿ ಕಾಣದ ಕೈಗಳ ಕೈವಾಡವಿದೆ. ಆದ್ದರಿಂದ ಪ್ರಕರಣವನ್ನು ಸಿಐಡಿ ಒಪ್ಪಿಸಬೇಕು ಎಂದು ಒತ್ತಾಯಿಸಿ ನ.16 ರಂದು ಮಾನ್ವಿಯಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿ ಹಮಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಇದನ್ನೂ ಓದಿ:

    ದಲಿತರ ಮೇಲೆ ದೌರ್ಜನ್ಯ ತಡೆಗಟ್ಟುವಲ್ಲಿ ಎಸ್ಪಿ ಅವರು ವಿಫಲರಾಗಿದ್ದಾರೆ. ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು. ಆರೋಪಿಗಳನ್ನು ಪತ್ತೆ ಹಚ್ಚಲು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ದಲಿತ ಸಾಹಿತಿ ದಾನಪ್ಪ ನಿಲೋಗಲ್, ದುಷ್ಟ ಶಕ್ತಿಗಳು ಪ್ರಸಾದ ಅವರ ಏಳ್ಗಿ ಸಹಿಸದೇ ಕೊಲೆ ಮಾಡಿಸಿದ್ದಾರೆ. ಸರ್ಕಾರ ಆರೋಪಿಗಳನ್ನು ಪತ್ತೆ ಹಚ್ಚದೆ ನಿರ್ಲಕ್ಷೃ ಮಾಡುತ್ತಿದೆ ಎಂದು ಆರೋಪಿಸಿದರು.
    ದಲಿತ ಮುಖಂಡರಾದ ಮಲ್ಲಯ್ಯ ಬಳ್ಳಾ, ಹನುಮಂತಪ್ಪ ವೆಂಕಟಾಪೂರು, ಮೌನೇಶ ಮುರಾರಿ, ಪ್ರಸಾದ್ ತೋರಣದಿನ್ನಿ, ಸುರೇಶ ಅಂತರಗಂಗಿ, ಮುದುಕಪ್ಪ ನಾಗರಬೆಂಚಿ, ರಾಮಣ್ಣ ಉದ್ಬಾಳ್, ಮಲ್ಲಯ್ಯ ಮುರಾರಿ ಬಸವರಾಜ ಕೊಠಾರಿ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts