More

    ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ 3 ವಾರ ವಿಳಂಬ, ಫೆಬ್ರವರಿ 8ರಂದು ಆರಂಭ

    ಮೆಲ್ಬೋರ್ನ್: ಮುಂದಿನ ವರ್ಷದ ಟೆನಿಸ್ ಋತುವಿನ ಮೊದಲ 7 ವಾರಗಳಲ್ಲಿ ನಡೆಯಲಿರುವ ಟೂರ್ನಿಗಳ ವೇಳಾಪಟ್ಟಿಯನ್ನು ವೃತ್ತಿಪರ ಟೆನಿಸ್ ಸಂಸ್ಥೆ ಎಟಿಪಿ ಗುರುವಾರ ಪ್ರಕಟಿಸಿದೆ. ಇದರಿಂದ ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ 3 ವಾರ ತಡವಾಗಿ ನಡೆಯುವುದು ಖಚಿತಗೊಂಡಿದೆ. ಎಟಿಪಿ ವೇಳಾಪಟ್ಟಿಯ ಪ್ರಕಾರ ಆಸ್ಟ್ರೇಲಿಯನ್ ಓಪನ್ ಫೆಬ್ರವರಿ 8ರಿಂದ 21ರವರೆಗೆ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ.

    ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಅರ್ಹತಾ ಸುತ್ತು ಜನವರಿ 10ರಿಂದ 13ರವರೆಗೆ ದೋಹಾದಲ್ಲಿ ನಡೆಯಲಿದೆ. ಮೂಲ ವೇಳಾಪಟ್ಟಿಯ ಪ್ರಕಾರ ಆಸ್ಟ್ರೇಲಿಯನ್ ಓಪನ್ ಜನವರಿ 18ರಂದು ಆರಂಭಗೊಳ್ಳಬೇಕಾಗಿತ್ತು. ಆದರೆ ಆಸ್ಟ್ರೇಲಿಯಾದ ಕ್ವಾರಂಟೈನ್ ನಿಯಮಗಳಿಂದಾಗಿ ಟೂರ್ನಿ ಮುಂದೂಡಿಕೆ ಅನಿವಾರ‌್ಯವೆನಿಸಿತ್ತು.

    ಇದನ್ನೂ ಓದಿ: ನಾನು ನವಭಾರತದ ಪ್ರತೀಕ ಎಂದು ವಿರಾಟ್ ಕೊಹ್ಲಿ ಹೇಳಿದ್ದೇಕೆ ಗೊತ್ತೇ?

    ಜನವರಿ 5ರಿಂದ 13ರವರೆಗೆ ನಡೆಯಲಿರುವ ಅಮೆರಿಕದ ಡೆಲ್‌ರೇ ಬೀಚ್ ಓಪನ್ ಮತ್ತು ಟರ್ಕಿಯ ಅಂಟಲ್ಯ ಓಪನ್ ಟೂರ್ನಿಯೊಂದಿಗೆ 2021ರ ಟೆನಿಸ್ ಋತುವಿಗೆ ಚಾಲನೆ ದೊರೆಯಲಿದೆ. ವರ್ಷಾರಂಭದಲ್ಲಿ ಭಾರತದಲ್ಲಿ ನಡೆಯಬೇಕಾಗಿದ್ದ ಮಹಾರಾಷ್ಟ್ರ ಓಪನ್ ಎಟಿಪಿ 250 ಟೂರ್ನಿಯನ್ನು ಈ ಬಾರಿ ರದ್ದುಗೊಳಿಸಲಾಗಿದೆ.

    ಆಸ್ಟ್ರೇಲಿಯನ್ ಓಪನ್‌ಗೆ ಶೇ. 25-30ರಷ್ಟು ಪ್ರೇಕ್ಷಕರಿಗೆ ಪ್ರವೇಶ ನೀಡುವ ಸಾಧ್ಯತೆ ಇದೆ. ಟೂರ್ನಿಯ ವೇಳೆ ಆಸೀಸ್‌ನಲ್ಲಿ ಕರೊನಾ ಸಂಪೂರ್ಣ ನಿಯಂತ್ರಣದಲ್ಲಿದ್ದರೆ ಇದಕ್ಕಿಂತ ಹೆಚ್ಚಿನ ಪ್ರೇಕ್ಷಕರಿಗೂ ಅವಕಾಶ ಲಭಿಸಬಹುದು. ಆಸ್ಟ್ರೇಲಿಯನ್ ಓಪನ್‌ಗೆ ಪೂರ್ವಭಾವಿಯಾಗಿ ಫೆಬ್ರವರಿ 1ರಿಂದ 5ರವರೆಗೆ ಮೆಲ್ಬೋರ್ನ್‌ನಲ್ಲೇ ಎಟಿಪಿ ಕಪ್ ನಡೆಯಲಿದೆ.

    ಮಲೇಷ್ಯಾದ ಪ್ರೇಯಸಿಯ ವರಿಸಿದ ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್..!

    ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೇರಲು ಭಾರತದ ಮುಂದಿದೆ ಸವಾಲಿನ ಹಾದಿ…

    ಮಗುವಿಗೆ ಬಾಟಲಿ ಹಾಲುಣಿಸಿ ಟೀಕೆಗೆ ಗುರಿಯಾದ ಹಾರ್ದಿಕ್ ಪಾಂಡ್ಯ!

    ಕೊಹ್ಲಿ ವಿರುದ್ಧ ಸ್ಲೆಡ್ಜಿಂಗ್ ಮಾಡಲ್ಲ, ನಮ್ಮ ಪ್ಲ್ಯಾನ್ ಬೇರೆಯೇ ಇದೆ ಎಂದ ಆಸೀಸ್ ಕೋಚ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts