More

    ಆಟಿಯ ವೈಜ್ಞಾನಿಕ ತತ್ವ ತಿಳಿವಳಿಕೆ ಅಗತ್ಯ: ಡಾ.ಅರುಣ್ ಉಳ್ಳಾಲ್ ಸಲಹೆ

    ಮೂಲ್ಕಿ: ಆಟಿ ಪದ್ಧತಿ ಅಂದಿನ ಜೀವನದ ಅನಿವಾರ್ಯತೆಯಾದರೆ, ಇಂದಿನ ಸಂಭ್ರಮದ ದಿನಗಳಾಗಿದ್ದರೂ ಆಟಿಯ ವೈಜ್ಞಾನಿಕ ತತ್ವ ಹಾಗೂ ಸತ್ವವನ್ನು ಯುವಸಮಾಜಕ್ಕೆ ತಿಳಿಸುವ ಕಾರ್ಯ ನಡೆಯಬೇಕು ಎಂದು ವಾಗ್ಮಿ, ಜಾನಪದ ಸಂಶೋಧಕ ಡಾ.ಅರುಣ್ ಉಳ್ಳಾಲ್ ಹೇಳಿದರು.

    ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ ಮೂಲ್ಕಿ ಘಟಕದ ಆಶ್ರಯದಲ್ಲಿ 21ನೇ ವರ್ಷದ ಆಟಿಡೊಂಜಿ ದಿನದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

    ನಟ ಭೋಜರಾಜ್ ವಾಮಂಜೂರು ಮಾತನಾಡಿ, ಯುವ ಸಮಾಜ ಸಂಘಟನೆಯಲ್ಲಿ ಯುವವಾಹಿನಿ ಕಾರ್ಯ ಅಭಿನಂದನೀಯವಾಗಿದ್ದು, ಆಟಿ ಆಚರಣೆ ನಡೆಸಿ ಅದರ ತಿಳಿವಳಿಕೆ ನೀಡುವ ಕಾರ್ಯ ಅಭಿನಂದನೀಯ ಎಂದರು.

    ತುಳುಚಿತ್ರ ನಿರ್ಮಾಪಕ ಸಂದೇಶ್‌ರಾಜ್ ಬಂಗೇರ ಅವರನ್ನು ಸನ್ಮಾನಿಸಲಾಯಿತು. ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷ ಮಾಧವ ಪೂಜಾರಿ ಕಿಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿ ಅಧ್ಯಕ್ಷ ರಾಜೇಶ್ ಬಿ, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ, ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪೈರ್ ಸ್ಥಾಪಕ ಅಧ್ಯಕ್ಷ ವೆಂಕಟೇಶ ಹೆಬ್ಬಾರ್, ಯುವವಾಹಿನಿ ಮೂಲ್ಕಿ ಘಟಕದ ಕಾರ್ಯದರ್ಶಿ ವಿನಯಾ ವಿಶ್ವನಾಥ ಕಿಲ್ಪಾಡಿ, ಕೋಶಾಧಿಕಾರಿ ಲತೀಶ್ ಸಾಲ್ಯಾನ್, ಸಂಯೋಜಕಿ ಸವಿತಾ ಪ್ರಭಾಕರ್ ಹಾಜರಿದ್ದರು. ಮಾಧವ ಪೂಜಾರಿ ಸ್ವಾಗತಿಸಿದರು. ಜಯ ಕುಮಾರ್ ಕುಬೆವೂರು ಪ್ರಸ್ತಾವಿಸಿದರು. ನರೇಂದ್ರ ಕೆರೆಕಾಡು, ಮೋಹನ್ ಸುವರ್ಣ, ಉದಯ ಅಮೀನ್ ಮಟ್ಟು ನಿರೂಪಿಸಿದರು. ವಿನಯಾ ವಿಶ್ವನಾಥ ವಂದಿಸಿದರು. ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮಗಳು ನಡೆದವು.

    ಆಟಿ ತಮ್ಮನ ಊಟ

    ಅರೆಪುದಡ್ಡೆ, ಚಾ-ಕಾಫಿ, ಕಡ್ಲೆ, ಹಪ್ಪಳ, ಕುಕ್ಕುದ ಉಪ್ಪಡ್, ತೇವು ತೇಟ್ಲ, ತಿಮರೆಚಟ್ನಿ, ನುಪ್ಪು, ಕುಡು ಸಾರ್, ಕುಡುಚಟ್ನಿ, ತೇವು ಪದ್ಪೆ, ಕುಕ್ಕುದ ಚಟ್ನಿ, ತೊಜಂಕ್ ನುರ್ಗೆ ಸೊಪ್ಪು ಸುಕ್ಕ, ಮೆತ್ತೆದ ಗಂಜಿಯೊಂದಿಗೆ ಸುಮಾರು 1500 ಮಂದಿಗೆ ಬಡಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts