More

    ಆಳ್ವಾಸ್ ಕಾಲೇಜಿನಲ್ಲಿ ಆಟಿ-ಆನಿ ಇನಿ ಕಾರ್ಯಕ್ರಮ

    ಮೂಡುಬಿದಿರೆ: ತುಳುನಾಡಿನ ಸಂಸ್ಕೃತಿಯನ್ನು ಪ್ರಾಕೃತಿಕ ಹಿನ್ನೆಲೆಯಿಂದ ವಿವೇಚಿಸಬೇಕು. ಪ್ರಕೃತಿಯಲ್ಲಿ ಆಹಾರ- ಔಷಧವನ್ನುಪ್ರಯೋಗಿಸಿದ ಹಿರಿಯರ ಜ್ಞಾನ ಅನನ್ಯ ಎಂದು ಜಾನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರ್ ಹೇಳಿದರು.

    ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ವತಿಯಿಂದ ಗುರುವಾರ ಆಟಿ- ಆನಿ ಇನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಪ್ರಾಂಶುಪಾಲ ಡಾ.ಕುರಿಯನ್ ಅಧ್ಯಕ್ಷತೆ ವಹಿಸಿ, ಪ್ರಕೃತಿಯನ್ನು ಅವಲಂಬಿಸಿದ್ದ ಮನುಷ್ಯ ಇಂದು ಮಾರುಕಟ್ಟೆಯ ದಾಸನಾಗಿದ್ದಾನೆ. ಯಂತ್ರ ಮತ್ತು ಮಾರುಕಟ್ಟೆ ಮುನುಷ್ಯನನ್ನು ನಿಯಂತ್ರಣ ಮಾಡುತ್ತಿದ್ದು, ತನ್ನತನವನ್ನು ಕಳೆದುಕೊಳ್ಳುತ್ತಿದ್ದಾನೆ. ಒಳಗಿದ್ದು ಹೊರಗಡೆ ಉಳಿದ ಅತಂತ್ರ ಸ್ಥಿತಿಯಿಂದ ಪಾರಾಗುವ ಬಗೆಯನ್ನು ಕಂಡುಕೊಳ್ಳಬೇಕು ಎಂದರು.

    ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಗೌರವ್ ಅಮೀನ್ ಉಪಸ್ಥಿತರಿದ್ದರು. ಸಂಯೋಜಕ ಡಾ.ಯೋಗೀಶ್ ಕೈರೋಡಿ ಪ್ರಸ್ತಾವಿಸಿದರು. ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಹೇಮಂತ್ ವಂದಿಸಿದರು. ಚೆನ್ನೆಮಣೆ ಆಟ, ಪದಪಾಡ್ದನ, ಆಟಿಕಳೆಂಜ ಕುಣಿತ, ತುಳು ಕ್ವಿಜ್ ಮೊದಲಾದ ಕಾರ್ಯಕ್ರಮ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts