More

    ಎಸ್‌ಟಿಐಸಿ ಉದ್ಯಮ ಕ್ಷೇತ್ರದ ಮೈಲಿಗಲ್ಲು: ಆಳ್ವಾಸ್‌ನಲ್ಲಿ ರಣ್‌ದೀಪ್ ನಂಬಿಯಾರ್ ಅಭಿಪ್ರಾಯ

    ಮೂಡುಬಿದಿರೆ: ಹ್ಯೂಸ್ಟನ್ ಮೂಲದ ಮ್ಯಾನುಫಾಕ್ಚರಿಂಗ್ ಹಾಗೂ ಲಾಜಿಸ್ಟಿಕ್ಸ್ ಸಂಬಂಧಿತ ‘ಸ್ಟೆಲಿಯಂ ಇಂಕ್’ ಅಂತಾರಾಷ್ಟ್ರೀಯ ಕಂಪನಿಯ ಸಹಭಾಗಿತ್ವದಲ್ಲಿ ವಿನೂತನ ತಂತ್ರಜ್ಞಾನ ಆಧಾರಿತ ‘ಸ್ಟೆಲಿಯಂ ಟೆಕ್ನಾಲಜಿ ಆ್ಯಂಡ್ ಇನೋವೇಶನ್ ಸೆಂಟರ್’ (ಎಸ್‌ಟಿಐಸಿ) ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಉದ್ಘಾಟಿಸಲಾಯಿತು.

    ನೂತನ ಲ್ಯಾಬ್‌ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಚಾಲನೆ ನೀಡಿದರು.

    ಸ್ಟೆಲಿಯಂ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಣ್‌ದೀಪ್ ನಂಬಿಯಾರ್ ಮಾತನಾಡಿ, ಆಳ್ವಾಸ್‌ನಲ್ಲಿ ಆರಂಭಗೊಂಡಿರುವ ಸ್ಟೆಲಿಯಂ ಟೆಕ್ನಾಲಜಿ ಆ್ಯಂಡ್ ಇನೋವೇಶನ್ ಸೆಂಟರ್ ಭಾರತೀಯ ಉದ್ಯಮ ಕ್ಷೇತ್ರದಲ್ಲಿ ಅಪೂರ್ವ ಮೈಲಿಗಲ್ಲು. ವಿದ್ಯಾರ್ಥಿಗಳು ತಮ್ಮ ಆಸಕ್ತಿಯನ್ನು ಹೊಸ ಆವಿಷ್ಕಾರಗಳಿಗೆ ಅಳವಡಿಸಲು ಈ ಲ್ಯಾಬ್ ಒಂದು ಉತ್ತಮ ವೇದಿಕೆಯಾಗಲಿದ್ದು, ಏಷ್ಯಾ ಖಂಡ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸಲಿದೆ. ತಮ್ಮ ಸಂಸ್ಥೆಗೆ ಇದೊಂದು ಹೊಸ ಆರಂಭವಾಗಿದ್ದು, ವೇಗವಾಗಿ ಬೆಳೆಯುವುದರೊಂದಿಗೆ ಪ್ರಪಂಚಾದ್ಯಂತ ಮಾರುಕಟ್ಟೆಗಳಲ್ಲಿ ಕಂಪನಿಯನ್ನು ವಿಸ್ತರಿಸುವ ಯೋಜನೆ ಇದೆ ಎಂದರು.

    ಕಾನ್‌ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ ಅಧ್ಯಕ್ಷ ಗೌರವ್ ಹೆಗ್ಡೆ ಮಾತನಾಡಿ, ಇಂದು ಲಾಜಿಸ್ಟಿಕ್ಸ್ ಹಾಗೂ ಇ-ಕಾಮರ್ಸ್ ಕ್ಷೇತ್ರವು ಬಹಳಷ್ಟು ಬೇಡಿಕೆ ಮತ್ತು ಅವಕಾಶಗಳನ್ನು ಹೊಂದಿದೆ. ಈ ನಿಟ್ಟಿನಲ್ಲಿ ಸ್ಟೆಲಿಯಂ ಸಂಸ್ಥೆಯು ಅಟೋಮೇಶನ್ ಇಕ್ವಿಪ್‌ಮೆಂಟ್ ಮೂಲಕ ಲಾಜಿಸ್ಟಿಕ್ಸ್ ಹಾಗೂ ಸಪ್ಲೈ ಚೈನ್ ಸೇವೆಗಳನ್ನು ಸುಗಮಗೊಳಿಸಲಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಅಗತ್ಯಗಳನ್ನು ಆರಂಭಿಸದರಷ್ಟೇ ಸಾಲದು, ವಿದ್ಯಾರ್ಥಿಗಳ ನಿರಂತರ ಒಳಗೊಳ್ಳುವಿಕೆಯೂ ಬಹು ಅಗತ್ಯ ಎಂದರು.

    ಮಂಗಳೂರಿನ ಯಂಗ್ ಇಂಡಿಯಾ (ವೈಐ) ಸಂಸ್ಥೆಯ ಕೋ-ಚೇರ್‌ಪರ್ಸನ್ ಸಿಎ ಸಲೋಮಿ ಲೋಬೊ, ಸ್ಟೆಲಿಯಂ ಸಂಸ್ಥೆಯ ಮುಖ್ಯ ಹಣಕಾಸು ಹಾಗೂ ನಿರ್ವಹಣಾಧಿಕಾರಿ ಮೇರಿ ಥೋಮಸ್, ಡಿಜಿಟಲ್ ಎಂಟರ್‌ಪ್ರೈಸ್‌ನ ನಿರ್ದೇಶಕ ಕಾರ್ತಿಕ್ ಕೃಷ್ಣನ್, ಪ್ರಾಂಶುಪಾಲ ಡಾ.ಪೀಟರ್ ಫರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಇಂದ್ರಜಾ ಸ್ವಾಗತಿಸಿದರು.

    ಸಂಪೂರ್ಣ ಪ್ರಾಯೋಗಿಕ ಕೇಂದ್ರ: ‘ಸ್ಟೆಲಿಯಂ ಇಂಕ್’ ಕಂಪನಿಯು ಸಪ್ಲೈ ಚೈನ್, ಮ್ಯಾನುಫಾಕ್ಚರಿಂಗ್ ಹಾಗೂ ಲಾಜಿಸ್ಟಿಕ್ಸ್ ಸಂಬಂಧಿತ ಕಾರ್ಯಗಳಲ್ಲಿ ದಶಕಗಳಿಂದ ವಿನೂತನ ಆವಿಷ್ಕಾರಗಳನ್ನು ತೆರೆದಿಟ್ಟಿದೆ. ವಿದ್ಯಾರ್ಥಿಗಳಿಗೆ ಎಸ್‌ಟಿಐಸಿ ಸ್ವಯಂಚಾಲಿತ ಕನ್ವೇಯರ್ ಸಿಸ್ಟಮ್‌ಗಳು, ಮಿನಿ ವೇರ್‌ಹೌಸ್ ಸಿಮ್ಯುಲೇಶನ್‌ಗಳು, ತಂತ್ರಜ್ಞಾನ ಮಾದರಿಗಳನ್ನು ಹೊಂದಿರುವ ಸಂಪೂರ್ಣ ಪ್ರಾಯೋಗಿಕ ಕೇಂದ್ರವಾಗಿದೆ. ಸ್ಟೀಲಿಯಂ, ಸ್ಯಾಪ್, ಜೀಬ್ರಾ ಟೆಕ್ನಾಲಜೀಸ್ ಮತ್ತು ರಾಕ್ಸ್ ಮತ್ತು ರೋಲರ್ ಸಂಸ್ಥೆಯ ಸಹಭಾಗಿತ್ವದಲ್ಲಿ ಇಲ್ಲಿನ ಚಟುವಟಿಕೆಗಳನ್ನು ವಿಸ್ತರಿಸಲು ಯೋಜಿಸಿದೆ.

    ಎಸ್‌ಟಿಐಸಿ ಮೂಲಕ ಆಳ್ವಾಸ್ ವಿದ್ಯಾರ್ಥಿಗಳಿಗೆ ವರ್ಷದ ಎಲ್ಲ ದಿನಗಳಿಲ್ಲಯೂ ನಿರಂತರ ಕಲಿಕಾ ವಾತಾವರಣ ನಿರ್ಮಿಸುವ ಗುರಿ ಹೊಂದಿದ್ದೇವೆ. ಉದ್ಯಮ ಕ್ಷೇತ್ರ ಹಾಗೂ ಶಿಕ್ಷಣ ಸಂಸ್ಥೆಗಳ ಕೊಡುಕೊಳ್ಳುವಿಕೆ ಮೂಲಕ ಉದ್ಯಮ ಕ್ಷೇತ್ರದ ಅಗತ್ಯಗಳನ್ನು ಪೂರೈಸಲು ಹಾಗೂ ಅವರ ಕೌಶಲಗಳನ್ನು ಹೆಚ್ಚಿಸುವ ಮೂಲಕ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸಲಾಗುವುದು. ವಿದ್ಯಾರ್ಥಿಗಳಲ್ಲಿ ಆಲೋಚಿಸುವ, ಆವಿಷ್ಕರಿಸುವ ಮತ್ತು ವಿತರಿಸುವ ಅಗತ್ಯವನ್ನು ಕಲಿಸಲು ಈ ಕೇಂದ್ರ ಒಂದು ಅತ್ಯುತ್ತಮ ವೇದಿಕೆಯಾಗಲಿದೆ.
    – ವಿವೇಕ್ ಆಳ್ವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts