More

    ಸಿಎಂಎ ಪರೀಕ್ಷೆ: ಆಳ್ವಾಸ್ ವಿದ್ಯಾರ್ಥಿನಿಗೆ ಶೇ.80 ಅಂಕ

    ಮೂಡುಬಿದಿರೆ: ಸರ್ಟಿಫೈಡ್ ಮ್ಯಾನೇಜ್‌ಮೆಂಟ್ ಅಕೌಂಟೆಟ್ (ಯು.ಎಸ್.) ಪಾರ್ಟ್ 1 ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕೀರ್ತಿ ಶಂಕರ್ 500ರಲ್ಲಿ 400 ಅಂಕ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕೋರ್ಸ್‌ಗಳಾದ ಎ.ಸಿ.ಸಿ.ಎ (ಯು.ಕೆ) ಮತ್ತು ಸಿ.ಎಂ.ಎ (ಯು.ಎಸ್) ತರಗತಿಗಳನ್ನು 2019-2020ರಿಂದ ಆಳ್ವಾಸ್ ಕಾಲೇಜಿನಲ್ಲಿ ಪ್ರಾರಂಭಿಸಿದ್ದು, ವೃತ್ತಿಪರ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಈ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲಿಯೇ ತೇರ್ಗಡೆಗೊಳಿಸಿದ್ದಾರೆ.

    ಸಿ.ಎಂ.ಎ (ಯು.ಎಸ್) ಪಾರ್ಟ್-2 ಪರೀಕ್ಷೆಯನ್ನು 360/500 (ಶೇ.72) ಫಲಿತಾಂಶದೊಂದಿಗೆ 2021ರ ಸೆಪ್ಟೆಂಬರ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಸಿ.ಎಂ.ಎ (ಯು.ಎಸ್) ಎರಡು ವರ್ಷಗಳ ತರಬೇತಿಯ ಕೋರ್ಸ್ ಆಗಿದ್ದು, ಆಳ್ವಾಸ್ ಕಾಲೇಜಿನಿಂದ ಎರಡೂ ಪತ್ರಿಕೆಗಳನ್ನು ಒಂದೇ ಪ್ರಯತ್ನದಲ್ಲಿ ಉತ್ತೀರ್ಣರಾಗಿ ಸಿ.ಎಂ.ಎ (ಯು.ಎಸ್) ಪದವಿಯನ್ನು ಯು.ಎಸ್.ಎ.ಯಿಂದ ಪಡೆದ ಮೊದಲ ವಿದ್ಯಾರ್ಥಿನಿ.
    ಒಟ್ಟು 50 ವಿದ್ಯಾರ್ಥಿಗಳು ಸಿ.ಎಂ.ಎ (ಯು.ಎಸ್) ಕೋರ್ಸ್ ತರಬೇತಿ ಪಡೆಯುತ್ತಿದ್ದು, 45 ವಿದ್ಯಾರ್ಥಿಗಳು ಬಿ.ಕಾಂ. ಜತೆಗೆ ಸಿ.ಎಂ.ಎ ಮತ್ತು 5 ವಿದ್ಯಾರ್ಥಿಗಳು ಬಿ.ಬಿ.ಎ. ಜತೆಗೆ ಸಿ.ಎಂ.ಎ ಅಧ್ಯಯನ ಮಾಡುತ್ತಿದ್ದಾರೆ.

    ವಿದ್ಯಾರ್ಥಿನಿಯ ಸಾಧನೆಗೆ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ.ಕುರಿಯನ್, ವೃತ್ತಿಪರ ವಾಣಿಜ್ಯ ವಿಭಾಗ ಮುಖ್ಯಸ್ಥ ಅಶೋಕ್ ಕೆ.ಜಿ. ಹಾಗೂ ಸಿ.ಎಂ.ಎ (ಯು.ಎಸ್) ಕೋರ್ಸ್ ಸಂಯೋಜಕಿ ಶಿಲ್ಪಾ ಭಟ್ ಎನ್.ಎಚ್. ಅಭಿನಂದಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts