More

    ಟೋಕಿಯೊ ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿದೆ ಸೆಕ್ಸ್ ನಿರೋಧಕ ಬೆಡ್!

    ಟೋಕಿಯೊ: ಕ್ರೀಡಾಪಟುಗಳು ಲೈಂಗಿಕಾಸಕ್ತಿ ತೋರದೆ ಕೇವಲ ಕ್ರೀಡಾಸ್ಪರ್ಧೆಗಳತ್ತ ಗಮನ ಹರಿಸಲಿ ಎಂಬ ಧ್ಯೇಯದೊಂದಿಗೆ ಟೋಕಿಯೊ ಒಲಿಂಪಿಕ್ ಕ್ರೀಡಾ ಗ್ರಾಮದಲ್ಲಿ ‘ಆ್ಯಂಟಿ-ಸೆಕ್ಸ್ ಬೆಡ್’ಗಳನ್ನು ಅಳವಡಿಸಲಾಗಿದೆ. ಕ್ರೀಡಾಪಟುಗಳು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಕರೊನಾ ಹರಡುವಿಕೆಯ ಭೀತಿಯಿಂದ ದೂರವಿರಲಿ ಎಂಬುದು ಕೂಡ ಈ ಸೆಕ್ಸ್ ನಿರೋಧಕ ಬೆಡ್‌ನ ಪ್ರಮುಖ ಉದ್ದೇಶವಾಗಿದೆ.

    ಒಬ್ಬ ವ್ಯಕ್ತಿ ಮಾತ್ರ ಮಲಗಬಹುದಾದ ಹಾಸಿಗೆಗಳನ್ನು ಕ್ರೀಡಾಗ್ರಾಮದ ಬೆಡ್ ರೂಂಗಳಲ್ಲಿ ಅಳವಡಿಸಲಾಗಿದೆ. ಇವು ಇಬ್ಬರು ವ್ಯಕ್ತಿಗಳು ಮಲಗಿದರೆ ಅಥವಾ ಕ್ಷಿಪ್ರ ಚಲನೆ ಹೊಂದಿದರೆ ಮುರಿದುಹೋಗುವಂಥ ಬೆಡ್‌ಗಳಾಗಿದ್ದು, ಕ್ರೀಡಾಪಟುಗಳು ಸಾಮಾಜಿಕ ಅಂತರ ಕಾಯ್ದುಕೊಂಡಿರುವರೇ ಇಲ್ಲವೇ ಎಂಬುದನ್ನೂ ಖಚಿತಪಡಿಸುತ್ತದೆ.

    ಇದನ್ನೂ ಓದಿ: ದೀರ್ಘಕಾಲದ ಗೆಳತಿ ಅಂಜುಂ ಖಾನ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಶಿವಂ ದುಬೆ

    ಕ್ರೀಡಾಗ್ರಾಮದಲ್ಲಿ ಒಟ್ಟು 18 ಸಾವಿರ ಬೆಡ್‌ಗಳಿದ್ದು, ಮರುಬಳಕೆ ಮಾಡಬಹುದಾದಂಥ ವಸ್ತುಗಳಿಂದ ಇದನ್ನು ಸಿದ್ಧಪಡಿಸಲಾಗಿದೆ. ಆದರೆ ಪ್ರತಿ ಬೆಡ್ ಸುಮಾರು 200 ಕೆಜಿ ಭಾರವನ್ನಷ್ಟೇ ಹೊರಬಲ್ಲಷ್ಟು ಸಾಮರ್ಥ್ಯ ಹೊಂದಿದೆ ಎನ್ನಲಾಗುತ್ತಿದೆ. ಕಾರ್ಡ್‌ಬೋರ್ಡ್‌ನಿಂದ ತಯಾರಿಸಲಾಗಿರುವ ಬೆಡ್‌ಗಳ ಬಗ್ಗೆ ಕ್ರೀಡಾಪಟುಗಳು, ಕ್ರೀಡಾಪ್ರೇಮಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹಲವು ತಮಾಷೆಯ ಕಾಮೆಂಟ್‌ಗಳೂ ಹರಿದುಬರುತ್ತಿವೆ.

    ಈ ಬಾರಿ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಸುಮಾರು 11 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳಿಗೆ ತಲಾ 14ರಂತೆ ಒಟ್ಟಾರೆ 1.60 ಲಕ್ಷ ಕಾಂಡೋಮ್‌ಗಳನ್ನು ಸಂಘಟಕರು ವಿತರಿಸಲಿದ್ದಾರೆ. ಆದರೆ ಕ್ರೀಡಾಪಟುಗಳು ಅದನ್ನು ಒಲಿಂಪಿಕ್ಸ್ ಗ್ರಾಮದಲ್ಲಿ ಬಳಸಬಾರದು. ಸ್ಮರಣಿಕೆಗಳ ರೀತಿಯಲ್ಲಿ ತವರಿಗೆ ಕೊಂಡೊಯ್ಯಿರಿ ಎಂದು ಐಒಸಿ ಸೂಚಿಸಿದೆ. 1988ರ ಸಿಯೋಲ್ ಒಲಿಂಪಿಕ್ಸ್‌ನಿಂದ ಏಡ್ಸ್ ರೋಗದ ಜಾಗೃತಿಗಾಗಿ ಪ್ರತಿ ಗೇಮ್ಸ್‌ನಲ್ಲಿ ಕಾಂಡೋಮ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ.

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಿಂಚಲಿವೆ ಮೇಡ್ ಇನ್ ಇಂಡಿಯಾ ಕ್ರೀಡಾ ಸಾಮಗ್ರಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts