More

    ಕ್ರೀಡಾಪಟು ನಿರ್ಮಾಣಕ್ಕೆ ಕ್ರೀಡಾಕೂಟ ಸಹಕಾರ ಅಗತ್ಯ

    ಮುದಗಲ್: ಉತ್ತಮ ಕ್ರೀಡಾಪಟುವಿನ ಪ್ರತಿಭೆ ಹೊರಬರಬೇಕಾದರೆ ಕ್ರೀಡಾಕೂಟಗಳು ಸಹಕಾರಿಯಾಗಲಿವೆ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚೆನ್ನಬಸವರಾಜ ಮೇಟಿ ಹೆಳಿದರು.

    ಇದನ್ನೂ ಓದಿ: ಉತ್ತಮ ಕ್ರೀಡಾಪಟುವಾಗಲು ಶಿಸ್ತುಬದ್ಧ ಕ್ರೀಡೆ ಮುಖ್ಯ

    ಸಮೀಪದ ಕನ್ನಾಪೂರುಹಟ್ಟಿ ಸರ್ಕಾರಿ ಶಾಲೆಯಲ್ಲಿ ಆಮದಿಹಾಳ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಕ್ರೀಡಾ ಜ್ಯೋತಿ ಸ್ವಿಕರಿಸಿ ಗುರುವಾರ ಮಾತನಾಡಿದರು. ಮಕ್ಕಳಲ್ಲಿ ಪಠ್ಯ ಶಿಕ್ಷಣದ ಜತೆಗೆ ಕ್ರೀಡಾಸಕ್ತಿ ಬೆಳೆಸಲು ಸರ್ಕಾರ ಕ್ರಿಡಾಕೂಟಗಳನ್ನು ಏರ್ಪಡಿಸಲಾಗುತ್ತಿದೆ.

    ಕ್ರೀಡೆಗಳಿಗೆ ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡುತಿದ್ದು ಇದಕ್ಕೆ ಪೂರಕವಾಗಿ ಪಾಲಕರು ಮತ್ತು ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆಗೆ ಸೂಕ್ತ ನ್ಯಾಯ ಕಲ್ಪಿಸಬೇಕು ಎಂದರು. ಉಪ್ಪರನಂದಿಹಾಳ ಗ್ರಾಪಂ.ಅಧ್ಯಕ್ಷೆ ಶಾಂತಾ ಹಿರೇ ಹನಮಂತ ಲೆಕ್ಕಿಹಾಳ,

    ಆಮದಿಹಾಳ ಗ್ರಾಪಂ.ಅಧ್ಯಕ್ಷ ಶಶಿಧರ ಗೌಡ ಕೋಮಲಾಪುರು, ದೈಹಿಕ ಶಿಕ್ಷಕ ಎಸ್.ಎನ್.ಅಕ್ಕಿ, ಲಿಂಗಸುಗೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುಸಂಗಯ್ಯ ಗಣಾಚಾರಿ, ಸಿಆರ್‌ಸಿಗಳಾದ ಮಂಜುನಾಥ ರಜಪೂತ, ರಾಮಚಂದ್ರಪ್ಪ ಡವಳೆ,

    ಶಿಕ್ಷಣ ಸಂಯೋಜಕ ಸಂತೋಷ, ಎಸ್ಡಿಎಂಸಿ ಅಧ್ಯಕ್ಷ ಶಿವುಕುಮಾರ ಪೂಜಾರಿ, ಮುಖ್ಯಶಿಕ್ಷಕ ಶಿವಶಂಕರ ಪಾಟೀಲ್, ಅಮರೇಶ ನಾಡಗೌಡ, ಮುಖಂಡರಾದ ವಿನೋದಕುಮಾರ ಗುಡಿಮನಿ, ದೇವಪ್ಪ ತೊಂಡಿಹಾಳ, ಬಸವರಾಜ ಕಟ್ಟಿಮನಿ, ಹನುಮಂತ ಮರಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts