More

    ಅನ್ನದಾನೀಶ್ವರ ಮಠ ಯಾವುದೇ ಒಳಪಂಗಡಕ್ಕೆ ಸೇರಿಲ್ಲ

    ದಾವಣಗೆರೆ: ನಮ್ಮ ಶ್ರೀ ಮಠವು ಜಾತಿ, ಮತ, ಪಂಥ ಮೀರಿದ ಮಠವಾಗಿದ್ದು, ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದು ಹಾಲಕೆರೆ ಸಂಸ್ಥಾನ ಮಠದ ಜಗದ್ಗುರು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.

    ಇಲ್ಲಿನ ದೇವರಾಜ ಅರಸ್ ಬಡಾವಣೆ ಅನ್ನದಾನೀಶ್ವರ ಮಠದಲ್ಲಿ ಶುಕ್ರವಾರ ಶ್ರೀ ಅನ್ನದಾನೀಶ್ವರ ಸಾರ್ವಜನಿಕ ಸೇವಾ ಟ್ರಸ್ಟ್‌ನಿಂದ ದಾವಣಗೆರೆ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಟ್ರಸ್ಟ್ ಅಧ್ಯಕ್ಷ ಅಥಣಿ ವೀರಣ್ಣನವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ನಮ್ಮ ಹಿರಿಯ ಗುರುಗಳು ಸ್ವಾತಂತ್ರೃ ಪೂರ್ವದಲ್ಲಿಯೇ ಶಿಕ್ಷಣ, ಪ್ರಸಾದಕ್ಕೆ ಒತ್ತುನೀಡಿ ಮಠವನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ನಾವು ನೀವೆಲ್ಲರೂ ಸೇರಿ ಇನ್ನೂ ಎತ್ತರಕ್ಕೆ ಬೆಳೆಸೋಣ ಎಂದು ಹೇಳಿದರು.

    ಉದ್ಯಮಿ ಅಥಣಿ ವೀರಣ್ಣರಿಗೆ ಗೌರವ ಡಾಕ್ಟರೇಟ್ ಬಂದಿರುವುದು ನಮ್ಮ ಅನ್ನದಾನಿಶ್ವರ ಮಠಕ್ಕೆ ನೀಡಿದಷ್ಟು ಸಂತೋಷವಾಗಿದೆ ಎಂದರು.
    ಅಥಣಿ ವೀರಣ್ಣ ಶ್ರೀಮಠದ ಅಧ್ಯಕ್ಷರಾಗಿ ಹಲವಾರು, ಮಠ, ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯೊಂದಿಗೆ ಹಿರಿಯ ಲೆಕ್ಕ ಪರಿಶೋಧಕರಾಗಿ ಸಮಾಜಮುಖಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ ಎಂದರು.

    ಶ್ರೀ ಅನ್ನದಾನೀಶ್ವರ ಸಾರ್ವಜನಿಕ ಸೇವಾ ಟ್ರಸ್ಟ್‌ನಿಂದ ಇಲ್ಲಿ ಕಲ್ಯಾಣ ಮಂಟಪ ಕಟ್ಟುವ ಯೋಜನೆ ಇದೆ. ದಾನಿಗಳಿಂದ ಧನ ಸಹಾಯ ಪಡೆದು ಕಟ್ಟಡ ಕಾರ್ಯಕ್ರಮ ಆರಂಭಿಸಬೇಕೆಂದು ಕರೆ ನೀಡಿದರು.

    ಸನ್ಮಾನ ಸ್ವೀಕರಿಸಿದ ಡಾ. ಅಥಣಿ ವೀರಣ್ಣ ಮಾತನಾಡಿ, ಶ್ರೀಗಳು ನನಗೆ ಇಲ್ಲಿ ಗೌರವಿಸಿರುವುದು ನನಗೆ ಸಂತೋಷ ತಂದಿದೆ. ಶ್ರೀಗಳ ಭಕ್ತರ ಆಶಯದಂತೆ ಇಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಸುಮಾರು 2 ಕೋಟಿ ರೂ.ಅವಶ್ಯಕತೆ ಇದೆ. ದಾನಿಗಳ ಸಹಕಾರದಿಂದ ಕಲ್ಯಾಣ ಮಂಟಪ ಕಟ್ಟಿಸೋಣ ಎಂದರು.

    ದಾವಣಗೆರೆ ಅರ್ಬನ್ ಬ್ಯಾಂಕ್‌ನ ಉಪಾಧ್ಯಕ್ಷ ಅಂದನೂರು ಮುಪ್ಪಣ್ಣ, ನಿರ್ದೇಶಕ ದೇವರಮನಿ ಶಿವಕುಮಾರ, ಉದ್ಯಮಿಗಳಾದ ವೈ.ಬಿ. ಸತೀಶ, ಜಿ.ಎಸ್. ಉಳವಯ್ಯ, ಟ್ರಸ್ಟ್ ಉಪಾಧ್ಯಕ್ಷ ಅಮರಯ್ಯ ಗುರುವಿನಮಠ, ಕೆ.ಟಿ. ಮಹಾಲಿಂಗೇಶ್, ಅಡಿವೆಪ್ಪ ಮತ್ತಿತರರಿದ್ದರು.

    ಈ ಸಂದರ್ಭದಲ್ಲಿ ಕಲ್ಯಾಣ ಮಂಟಪ ಕಟ್ಟಡಕ್ಕೆ ದೇಣಿಗೆ ನೀಡಿದ ದಾನಿಗಳಿಗೆ ಗೌರವಿಸಲಾಯಿತು. ಹಿರಿಯ ಪತ್ರಕರ್ತ ವೀರಪ್ಪ ಎಂ. ಭಾವಿ ಸ್ವಾಗತಿಸಿ, ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts