More

    ಮುಗಳಿಹಾಳದಲ್ಲಿ ಕನಕ ಭವನ ನಿರ್ಮಾಣಕ್ಕೆ ಕ್ರಮ

    ಕಡಬಿ: ಜಾತ್ಯತೀತ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಕನಕದಾಸರು ಅತ್ಯಂತ ಶ್ರೇಷ್ಠ ಪರಂಪರೆ ಹೊಂದಿದವರಾಗಿದ್ದರು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

    ಸಮೀಪದ ಮುಗಳಿಹಾಳ ಗ್ರಾಮದಲ್ಲಿ ಭಕ್ತ ಕನಕದಾಸ ಜಯಂತಿ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಡೊಳ್ಳಿನ ಪದ ಗಾಯನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಕನಕ ಭವನ, ಬಸವೇಶ್ವರ ಭವನ, ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಕ್ರಮ ವಹಿಸಲಾಗುವುದು ಎಂದರು.
    ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ಧಬಸನವರ ಮಾತನಾಡಿ, ಭಕ್ತ ಕನಕದಾಸರು ಸಮಾಜದಲ್ಲಿನ ಮೌಢ್ಯ ಹೋಗಲಾಡಿಸಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದರು.

    ಶಾಸಕ ವಿಶ್ವಾಸ ವೈದ್ಯ ಅವರನ್ನು ಸನ್ಮಾನಿಸಲಾಯಿತು. ವಿಠ್ಠಲ ದಳವಾಯಿ, ಎಪಿಎಂಸಿ ಸದಸ್ಯ ಲಕ್ಷ್ಮಣ ದಳವಾಯಿ, ಪ್ರಕಾಶ ವಾಲಿ, ಶಂಕರ ಇಟ್ನಾಳ, ಗೋವಿಂದಪ್ಪ ಮುರಗಟ್ಟಿ, ಹನಮಂತ ಪೂಜೇರ, ಪಂಚಾಕ್ಷರಿ ಪಟ್ಟಣಶೆಟ್ಟಿ, ಬಸವರಾಜ ದಳವಾಯಿ, ಬಸಪ್ಪ ಅರಭಾವಿ, ಯಲ್ಲಪ್ಪ ಇಟಗೌಡ್ರ, ನಾಗರಾಜ ದೇಸಾಯಿ, ಮುತ್ತೆಪ್ಪ ಅಣ್ಣಿಗೇರಿ, ಬಸಪ್ಪ ಪಾಟೀಲ, ಗೋಪಾಲ ದಳವಾಯಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts