More

    ನಿರಂತರ ಮಳೆಯಿಂದಾಗಿ ಭೂ ಕುಸಿತ; 12 ಮಂದಿ ಮೃತ್ಯು

    ಮುಂಬೈ: ಕಳೆದ ಕೆಲ ದಿನಗಳಿಂದ ಮಹಾರಷ್ಟ್ರದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಇದರ ಪರಿಣಾಮವಾಗಿ ರಾಯಗಢ ಜಿಲ್ಲೆಯ ಕಾಲಾಪುರ ತಾಲ್ಲೂಕಿನ ಇರ್ಶಲವಾಡಿ ಪ್ರದೇಶದಲ್ಲಿ ನಡೆದಿದೆ.

    ಘಟನೆಯಲ್ಲಿ 12 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಘಟನೆಯು ಬುಧವಾರ ರಾತ್ರಿ 10:30ರಿಂದ 11 ಘಂಟೆ ಸುಮಾರಿಗೆ ನಡೆದಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಜೀವಗಳನ್ನು ಉಳಿಸುವುದು ನಮ್ಮ ಪ್ರಥಮ ಆದ್ಯತೆಯಾಗಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಅಧಿಕಾರಿಗಳಿಂದ ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯಲಾಗುತ್ತಿದೆ.

    landslide

    ಇದನ್ನೂ ಓದಿ: ಹೆಚ್ಚುವರಿ ಅಕ್ಕಿ ಕೊಟ್ಟರೆ ಪ್ರಸ್ತುತ ನೀಡುವ ಧಾನ್ಯಕ್ಕೆ ಸಂಚಕಾರ: FCI ಸ್ಪಷ್ಟನೆ

    ಉಪಮುಖ್ಯಮಂತ್ರಿ ಅಜಿತ್​ ಪವಾರ್​ ಹಾಗೂ ಮುಖ್ಯ ಕಾರ್ಯದರ್ಶಿ ಕಂಟ್ರೋಲ್​ ರೂಂನಲ್ಲೇ ಬೀಡುಬಿಟ್ಟಿದ್ದು, ಸೇನೆ ಹಾಗೂ ರಕ್ಷಣಾ ಇಲಾಖೆಯ ನೆರವನ್ನು ಕೋರುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ. ಇಂಡಿಯನ್​ ಏರ್​ಪೋರ್ಸ್​ನ ಎರಡು ಹೆಲಿಕಾಪ್ಟರ್​ಗಳು ಕಾರ್ಯಾಚರಣೆಗೆ ಸನ್ನದ್ದವಾಗಿವೆ,

    ಹವಾಮಾನ ವೈಪಿರೀತ್ಯ ಹಾಗೂ ಪ್ರತಿಕೂಲ ವಾತಾವರಣದಿಂದಾಗಿ ಘಟನೆ ಸಂಭವಿಸಿದ್ದು, ಸ್ಥಳದಲ್ಲಿ ರಾಯ್​ಗಢ ಜಿಲ್ಲಾಧಿಕಾರಿ, ಪೊಲೀಸ್​ ವರಿಷ್ಠಾಧಿಕಾರಿ ಹಾಗೂ ಮೂವರು ಸಚಿವರು ಬೀಡುಬಿಟ್ಟಿದ್ದಾರೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್​ ಶಿಂಧೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts