More

    ಹೆಚ್ಚುವರಿ ಅಕ್ಕಿ ಕೊಟ್ಟರೆ ಪ್ರಸ್ತುತ ನೀಡುವ ಧಾನ್ಯಕ್ಕೆ ಸಂಚಕಾರ: FCI ಸ್ಪಷ್ಟನೆ

    ಬೆಂಗಳೂರು: ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ವಾಗ್ದಾದ ನಡುವೆಯೂ ಭಾರತೀಯ ಆಹಾರ ನಿಗಮ( ಎ್ಸಿಐ) ಮಧ್ಯಪ್ರವೇಶಿಸಿದ್ದು, ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ಕೊಟ್ಟರೆ ಮುಂದಿನ ದಿನಗಳಲ್ಲಿ ಪ್ರಸ್ತುತ ನೀಡುತ್ತಿರುವ 5 ಕೆಜಿ ಅಕ್ಕಿಗೂ ಸಂಚಕಾರ ಬಂದೊದಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.

    FCI ಪ್ರಾದೇಶಿಕ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಧಾನ ವ್ಯವಸ್ಥಾಪಕ ಭೂಪೇಂದ್ರಸಿಂಗ್ ಭಾಟಿ ಮಾತನಾಡಿ, ಭತ್ತ, ಗೋಧಿ ಬೆಳೆಯುವ ಉತ್ತರ ಭಾರತದ ರಾಜ್ಯಗಳಲ್ಲಿ ಅತಿ ಹೆಚ್ಚು ಮಳೆಯಿಂದ ಪ್ರವಾಹ ಉಂಟಾದರೆ, ಇತ್ತ ಮಳೆ ಕೊರತೆಯಿಂದ ಕೆಲ ರಾಜ್ಯಗಳಲ್ಲಿ ಬರಗಾಲ ಬಂದಿದೆ. ಇದರಿಂದಾಗಿ ಭವಿಷ್ಯದಲ್ಲಿ ಆಹಾರ ಉತ್ಪಾದನೆ ಕುಂಠಿತಗೊಳ್ಳುವ ಆತಂಕ ತಂದೊಡ್ಡಿದೆ. ಹೀಗಾಗಿ, ಹೆಚ್ಚುವರಿ ಅಕ್ಕಿ ನೀಡಿದರೆ ಮುಂದಿನ ದಿನದಲ್ಲಿ ಈಗ ನೀಡುವ 5 ಕೆ.ಜಿ ಅಕ್ಕಿಗೂ ತೊಂದರೆಯಾಗಲಿದೆ ಎಂದಿದ್ದಾರೆ.

    ಪ್ರವಾಹ ಬಂದ ಪ್ರದೇಶದಲ್ಲಿ ಮಣ್ಣಿನ ಲವತ್ತತೆ ಕೊಚ್ಚಿ ಹೋಗಿದ್ದು, ಇದು ಮುಂದಿನ ಕೆಲವು ವರ್ಷ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸದ್ಯ ದಾಸ್ತಾನು ಇಟ್ಟುಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಆಹಾರ ಕೊರತೆ ತಗ್ಗಿಸಲು ಸಹಕಾರಿಯಾಗಲಿದೆ.ನಮ್ಮಲ್ಲಿ ಅಕ್ಕಿ ದಾಸ್ತಾನಿದ್ದರೂ ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡಲು ಸಾಧ್ಯವಿಲ್ಲ. ಕರ್ನಾಟಕ ಮಾತ್ರವಲ್ಲದೆ ಯಾವುದೇ ರಾಜ್ಯಕ್ಕೂ ಹೆಚ್ಚುವರಿ ಅಕ್ಕಿ ನೀಡುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.

    FCI

    ಇದನ್ನೂ ಓದಿ: RSS ನಾಯಕರು ನೋಡಲಿ ಅಂತ ಬಿಜೆಪಿ ಸದಸ್ಯರು ಡ್ರಾಮಾ ಮಾಡಿದರು: ಸಿಎಂ ಸಿದ್ದರಾಮಯ್ಯ ಟೀಕೆ

    ಪ್ರತಿ ವಾರ ಹರಾಜು: ಭಾರತೀಯ ಆಹಾರ ನಿಗಮದಿಂದ ಅಕ್ಕಿ ಮತ್ತು ಗೋಧಿ ಖರೀದಿಗೆ ಪ್ರತಿ ಬುಧವಾರ ಇ-ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ. ಇದರಲ್ಲಿ ಖಾಸಗಿಯವರು ಭಾಗವಹಿಸಿ ಮುಕ್ತ ಮಾರುಕಟ್ಟೆ ದರದಲ್ಲಿ ಅಕ್ಕಿ, ಗೋಧಿ ಖರೀದಿಸಬಹುದು.ಅಕ್ಕಿ, ಗೋಧಿ ಖರೀದಿಗೆ ಬೆಲೆ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರವು ದೇಶಾದ್ಯಂತ ಒಎಂಎಸ್‌ಎಸ್ ಯೋಜನೆಯ ಮೂಲಕ ಗೋಧಿ ಮಾರಾಟದ ಮೀಸಲು ಬೆಲೆಯನ್ನು ಪರಿಷ್ಕರಿಸಿದೆ. ದೇಶಾದ್ಯಂತ ನ್ಯಾಯೋಚಿತ ಮತ್ತು ಸರಾಸರಿ ಗುಣಮಟ್ಟ (AQ)ಅಡಿಯಲ್ಲಿ ಗೋಧಿ ಮೀಸಲು ಬೆಲೆ ಪ್ರತಿ ಕ್ವಿಂಟಾಲ್‌ಗೆ 2,150 ರೂ. ಮತ್ತು ರಿಲ್ಯಾಕ್ಸ್ಡ್ ಸ್ಪೆಸಿಫಿಕೇಷನ್ಸ್ ಅಡಿಯಲ್ಲಿ (ಯುಆರ್‌ಎಸ್) ಪ್ರತಿ ಕ್ವಿಂಟಾಲ್‌ಗೆ 2,125 ರೂ. ನಿಗದಿಪಡಿಸಲಾಗಿದೆ. ಈ ಹೊಸ ಮೀಸಲು ಬೆಲೆಯನ್ನು ಡಿ.31ರವರೆಗೆ ನಿಗದಿಪಡಿಸಲಾಗಿದೆ ಎಂದು ಭೂಪೇದ್ರಸಿಂಗ್ ಭಾಟಿ ವಿವರಿಸಿದ್ದಾರೆ.

    ರಾಜ್ಯದಲ್ಲಿ 6.49 ಲಕ್ಷ ಮೆಟ್ರಿಕ್ ಟನ್ ದಾಸ್ತಾನು: ಅಕ್ಕಿಯ ಮೀಸಲು ಬೆಲೆ ಪ್ರತಿ ಕ್ವಿಂಟಾಲ್‌ಗೆ 3,100 ರೂ. ನಿಗದಿಪಡಿಸಲಾಗಿದೆ. ಬಲವರ್ಧಿತ ಅಕ್ಕಿಗೆ ಪ್ರತಿ ಕ್ವಿಂಟಾಲ್‌ಗೆ 73 ರೂ.ಮೀಸಲು ಬೆಲೆ ಸೇರಿಸಲಾಗಿದೆ. ನಿಗಮ ವ್ಯಾಪ್ತಿಯ ರಾಜ್ಯದ ಗೋದಾಮುಗಳಲ್ಲಿ 6.49 ಲಕ್ಷ ಮೆಟ್ರಿಕ್ ಟನ್ ಅಕ್ಕಿ, 63 ಸಾವಿರ ಮೆಟ್ರಿಕ್ ಟನ್ ಗೋಧಿ ದಾಸ್ತಾನ ವಿದೆ. ದೇಶದಲ್ಲಿ 253.49 ಲಕ್ಷ ಮೆಟ್ರಿಕ್ ಟನ್ ಅಕ್ಕಿ, 301.45 ಲಕ್ಷ ಮೆಟ್ರಿಕ್ ಟನ್ ಗೋಧಿ ದಾಸ್ತಾನಿದೆ. ಈ ಬಾರಿ ಒಎಂಎಸ್‌ಎಸ್‌ಡಿ ಹರಾಜಿನಲ್ಲಿ ಏಕಕಾಲದಲ್ಲಿ 10-100 ಮೆಟ್ರಿಕ್ ಟನ್‌ಗಳಷ್ಟು ಅಕ್ಕಿ,ಗೋಧಿ ಹರಾಜಿನಲ್ಲಿ ಖರೀದಿಸಬಹುದು. ಈ ಹಿಂದೆ ಹರಾಜಿನಲ್ಲಿ ಗರಿಷ್ಟ 3 ಸಾವಿರ ಮೆಟ್ರಿಕ್ ಟನ್ ದಾನ್ಯಗಳ ಖರೀದಿಗೆ ಅವಕಾಶವಿತ್ತು. ಇದರಿಂದ ಸಣ್ಣ, ಮಧ್ಯಮ ಖರೀದಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಹಾಗೂ ಈ ಯೋಜನೆಯು ಹೆಚ್ಚು ಜನರನ್ನು ತಲುಪಲು ಸಾಧ್ಯವಾಗಲಿದೆ. ಜತೆಗೆ, ಖರೀದಿ ಮಾಡಿದ ಧಾನ್ಯಗಳು ಕೂಡಲೇ ಜನರಿಗೆ ತಲುಪಲು ಸಾಧ್ಯವಾಗಲಿದೆ ಎಂದು FCI ಮಾಹಿತಿ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts