More

    ಶಾಸನಾಧ್ಯಯನ ಕ್ಷೇತ್ರಕ್ಕೆ ಹೆಚ್ಚಿನ ಶ್ರಮ ಅಗತ್ಯ

    ಧಾರವಾಡ: ಸಂಶೋಧನೆಯಲ್ಲಿ ಹೆಚ್ಚು ಶ್ರಮ ಬಯಸುವುದು ಶಾಸನಾಧ್ಯಯನ ಕ್ಷೇತ್ರ. ಇಲ್ಲಿ ತಾಳ್ಮೆ ಬಹಳ ಅವಶ್ಯಕ ಎಂದು ಹುಬ್ಬಳ್ಳಿಯ ಹಿರಿಯ ವಿದ್ವಾಂಸ ಡಾ. ಬಿ.ವಿ. ಶಿರೂರ ಹೇಳಿದರು.
    ಇಲ್ಲಿನ ಕರ್ನಾಟಕ ಶಾಸನ ಸಾಹಿತ್ಯ ಪರಿಷತ್, ಜನತಾ ಶಿಕ್ಷಣ ಸಮಿತಿ ಮತ್ತು ರಾಷ್ಟಿçÃಯ ದೃಶ್ಯಕಲಾ ಅಕಾಡೆಮಿ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ಶಾಸನ ಸಾಹಿತ್ಯ ಪರಿಷತ್‌ನ ಮೊದಲ ಮಹಾಽವೇಶನ ಉದ್ಘಾಟಿಸಿ ಅವರು ಮಾತನಾಡಿದರು.
    ಇತ್ತೀಚಿನ ದಿನಗಳಲ್ಲಿ ಶಾಸನ ಅಧ್ಯಯನ ಆಸಕ್ತಿ ಕಡಿಮೆಯಾಗುತ್ತಿದೆ. ಶಾಸನಗಳ ಸೂಕ್ಷ÷್ಮ ಅಧ್ಯಯನದಿಂದ ಇತಿಹಾಸದ ಹೊಸ ಸಂಗತಿಗಳು ಮತ್ತು ನಿಜ ಸ್ವರೂಪ ಬೆಳಕಿಗೆ ಬರುತ್ತದೆ ಎಂದರು.
    ಸಮ್ಮೇಳನದ ಸರ್ವಾಧ್ಯಕ್ಷ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ಕರ್ನಾಟಕದಲ್ಲಿ ದೊರೆಯುವ ಶಾಸನಗಳು ಕೇವಲ ಘಟನೆಯ ದಾಖಲೆಗಳಾಗಿರದೆ ಭಾಷೆ ಮತ್ತು ಸಂಸ್ಕೃತಿಯ ಕೋಶಗಳೂ ಆಗಿವೆ ಎಂದರು.
    ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಶಾಸನ ಸಾಹಿತ್ಯ ಸಮ್ಮೇಳನದ ಐತಿಹಾಸಿಕ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದರು.
    ಇದೇವೇಳೆ ಹನುಮಾಕ್ಷಿ ಗೋಗಿಯವರ ಕಾಳಗಿ ಇತಿಹಾಸ ಮತ್ತು ಸಂಸ್ಕೃತಿ, ಮುದನೂರು ಮತ್ತು ಯಡ್ರಾಮಿ ಶಾಸನಗಳು', ಪ್ರೊ. ಎಸ್.ಸಿ. ಪಾಟೀಲರದೃಶ್ಯಕಲಾ ಸಂಚಯ’, ವಚನಕಾರ ಹಂಡೆ ಚಂದಿಮರಸನ ಶಾಸನಗಳು' ಮತ್ತುಹಂಡೆ ಅರಸರ ಸಾಂಸ್ಕೃತಿಕ ಚರಿತ್ರೆ’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
    ಡಾ. ಹನುಮಾಕ್ಷಿ ಗೋಗಿ ಅಧ್ಯಕ್ಷತೆ ವಹಿಸಿದ್ದರು. ವಿದ್ವಾಂಸ ಡಾ. ಬಿ.ವಿ. ಶಿರೂರ ಅವರಿಗೆ ಹನುಮಾಕ್ಷಿ ಗೋಗಿಯವರು ಸ್ಥಾಪಿಸಿದ ಡಾ. ಎಂ.ಎA. ಕಲಬುರ್ಗಿ ಶಾಸನ ಸಾಹಿತ್ಯ' ಪ್ರಶಸ್ತಿ, ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರಕೊಂಡಾ ರೆಡ್ಡಿ ಅವರಿಗೆ ಪ್ರೊ. ಎಸ್.ಸಿ. ಪಾಟೀಲ ಸ್ಥಾಪಿಸಿದಪಿ.ಆರ್. ಹಿರೇಮಠ ಸಂಶೋಧನಶ್ರೀ’ ಪ್ರಶಸ್ತಿ ಮತ್ತು ಚಿತ್ರದುರ್ಗದ ಹಿರಿಯ ವಿದ್ವಾಂಸ ಡಾ. ಬಿ. ರಾಜಶೇಖರಪ್ಪ ಅವರಿಗೆ ಡಾ. ಬಾಳೇಶ ಚಿನಗುಡಿ ಸ್ಥಾಪಿಸಿದ `ಶಿ.ಚೆ. ನಂದಿಮಠ ಶಾಸನ ಸಾಹಿತ್ಯ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
    ಡಾ. ಎ. ಚೆನ್ನಪ್ಪ, ಡಾ. ಎಂ. ಕೊಟ್ರೇಶ, ಡಾ. ಜೆ.ಎಂ. ನಾಗಯ್ಯ, ಡಾ. ಎಸ್.ಬಿ. ಹಿರೇಮಠ, ಪ್ರೊ. ಅಮರೇಶ ಯತಗಲ್, ಮಂಜುಳಾ ಯಲಿಗಾರ, ಡಾ. ಎಲ್.ಆರ್. ಅಂಗಡಿ, ಡಾ. ಜಿನದತ್ತ ಹಡಗಲಿ, ಮಹಾವೀರ ಉಪಾಧ್ಯೆ, ಡಾ. ಲಕ್ಷ÷್ಮ್ಮಣ ತೆಲಗಾವಿ, ಡಾ. ಆರ್. ಶೆಜೇಶ್ವರ, ಎಚ್.ಆರ್. ದೇಸಾಯಿ, ಇತರರಿದ್ದರು.
    ಡಾ. ಎಸ್.ಕೆ. ಮೇಲಕಾರ ನಿರೂಪಿಸಿದರು. ಡಾ. ಎಸ್.ಸಿ. ಪಾಟೀಲ ಸ್ವಾಗತಿಸಿದರು. ಡಾ. ಮಹಾದೇವಿ ಹಿರೇಮಠ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts