ಏಷ್ಯಾಕಪ್​ 2023 ವೇಳಾಪಟ್ಟಿ ಪ್ರಕಟ; ಸೆ.2ರಂದು ಭಾರತ-ಪಾಕ್​ ಹಣಾಹಣಿ

Asia Cup
Published on

ನವದೆಹಲಿ: ಏಷ್ಯಾಕಪ್​ 2023ರ ವೇಳಾಪಟ್ಟಿ ಪ್ರಕಟವಾಗಿದ್ದು, ಆಗಷ್ಟ್​ 30ರಿಂದ ಟೂರ್ನಮೆಂಟ್​ ಶುರುವಾಗಲಿದೆ. ಉದ್ಘಾಟನಾ ಪಂದ್ಯ ಪಾಕಿಸ್ತಾನದ ಮುಲ್ತಾನ್​ನಲ್ಲಿ ನಡೆಯಲಿದ್ದು, ಅತಿಥೇಯರು ನೇಪಾಳವನ್ನು ಎದುರಿಸಲಿದ್ದಾರೆ.

ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಸೆಪ್ಟೆಂಬರ್​ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ಭಾರತ ಮತ್ತು ನೇಪಾಳ ನಡುವಿನ ಪಂದ್ಯ ಸೆಪ್ಟೆಂಬರ್​ 4ರಂದು ಕ್ಯಾಂಡಿಯಲ್ಲಿ ನಡೆಯಲಿದೆ.

ಈ ಬಾರಿಯ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗುತ್ತಿದ್ದು, ಭದ್ರತೆ ಕಾರಣಗಳಿಂದಾಗಿ ಭಾರತ ಪಾಕಿಸ್ತಾನಕ್ಕೆ ಆಡಲು ತೆರಳುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ, ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ ಮುಖ್ಯಸ್ಥ ಜಯ್​ ಶಾ ತಿಳಿಸಿದ್ದರು. ಅದರಂತೆ ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ.

ಏಷ್ಯಾಕಪ್​ ಟೂರ್ನಮೆಂಟ್​ನಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ಭಾಗವಹಿಸಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net