More

    ಇರುಳಾದರೂ ಮುಗಿಯದ ಕದನ; ಹಮಾಸ್​ ದಾಳಿಗೆ ನೂರಕ್ಕೂ ಅಧಿಕ ಇಸ್ರೇಲಿಗರು ಬಲಿ!

    ನವದೆಹಲಿ: ಇಂದು ಬೆಳ್ಳಂಬೆಳಗ್ಗೆ ಹಮಾಸ್ ಉಗ್ರರಿಂದ ನಡೆದ ರಾಕೆಟ್​ ದಾಳಿಯಿಂದ ಇಸ್ರೇಲ್​ ರಣರಂಗವಾಗಿದ್ದು, ಇರುಳಾದರೂ ಕದನ ಮುಗಿದಿಲ್ಲ. ರಣಭೀಕರ ಪರಿಸ್ಥಿತಿ ಇನ್ನೂ ಮುಂದುವರಿದಿದ್ದು, ಈಗಾಗಲೇ ಕನಿಷ್ಠವೆಂದರೂ ನೂರು ಮಂದಿ ಹತರಾಗಿದ್ದಾರೆ.

    ಈ ಕುರಿತು ಇಸ್ರೇಲ್​ ವಿದೇಶಾಂಗ ಸಚಿವಾಲಯ ಇದೀಗ ಕೆಲವೇ ನಿಮಿಷಗಳ ಹಿಂದೆ ಮಾಹಿತಿ ನೀಡಿದ್ದು, ಕನಿಷ್ಠ ನೂರು ಮಂದಿ ಸಾವಿಗೀಡಾಗಿದ್ದಾರೆಂದು ಅಧಿಕೃತವಾಗಿ ಘೋಷಿಸಲಾಗಿದೆ. ಇಸ್ರೇಲಿನ ದಕ್ಷಿಣ ಭಾಗದಲ್ಲಿ ಯುದ್ಧ ಇನ್ನೂ ನಡೆಯುತ್ತಿರುವುದಾಗಿ ಹೇಳಿರುವ ಸಚಿವಾಲಯ, ಸಾವು-ನೋವುಗಳ ಕುರಿತು ಅಂಕಿ-ಅಂಶ ಪ್ರಕಟಿಸಿದೆ.

    ನಮ್ಮ ರಕ್ಷಣಾ ಪಡೆಗಳು ಕಾರ್ಯಾಚರಣೆ ನಿರತವಾಗಿದ್ದು, ಹಮಾಸ್ ದಾಳಿಗೆ ಒಳಗಾಗಿರುವ ಪ್ರದೇಶಗಳ ಮೇಲೆ ಹತೋಟಿ ಸಾಧಿಸುತ್ತಿದ್ದಾರೆ ಮತ್ತು ಉಗ್ರರ ಅಧೀನದಲ್ಲಿರುವ ನಾಗರಿಕರನ್ನು ಪಾರು ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ನೂರಕ್ಕೂ ಅಧಿಕ ಮಂದಿ ಉಗ್ರರ ದಾಳಿಗೆ ಬಲಿಯಾಗಿದ್ದು, 900ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

    ಭಾರತದ ಬಳಿಕ ಅಮೆರಿಕವೂ ಬೆಂಬಲ ಘೋಷಣೆ

    ಇಸ್ರೇಲ್​ ಮೇಲೆ ಹಮಾಸ್ ಉಗ್ರರ ಭೀಕರ ದಾಳಿ ನಡೆದ ಬೆನ್ನಿಗೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ನೀಡಿದ್ದರು. ದಾಳಿಯಿಂದ ತೀವ್ರ ಆಘಾತವಾಗಿದ್ದು, ಅಲ್ಲಿನ ಜನರ ಪರವಾಗಿ ನಾವೂ ಪ್ರಾರ್ಥಿಸಿಕೊಳ್ಳುತ್ತಿದ್ದೇವೆ. ಕಷ್ಟದ ಕಾಲದಲ್ಲಿ ಇಸ್ರೇಲ್ ಬೆಂಬಲಕ್ಕೆ ನಾವಿದ್ದೇವೆ ಎಂದಿದ್ದರು. ಇದೀಗ ಅಮೆರಿಕ ಕೂಡ ಇಸ್ರೇಲ್​ಗೆ ಬೆಂಬಲ ಘೋಷಣೆ ಮಾಡಿದೆ.

    ಹಮಾಸ್​ ಉಗ್ರರ ದಾಳಿಗೆ ಸಂಬಂಧಿಸಿದಂತೆ ಇಸ್ರೇಲ್ ಪ್ರಧಾನಿಗೆ ಕರೆ ಮಾಡಿ ಮಾತನಾಡಿರುವೆ ಎಂದಿರುವ ಅಮೆರಿಕದ ಅಧ್ಯಕ್ಷ ಜೋ ಬೈಡೆನ್​, ಇಸ್ರೇಲ್​ಗೆ ಬೆಂಬಲ ನೀಡುವ ಜತೆಗೆ ಭದ್ರತೆಗೂ ಬದ್ಧತೆ ತೋರುವುದಾಗಿ ಭರವಸೆ ನೀಡಿದ್ದಾಗಿ ಹೇಳಿದ್ದಾರೆ.

    ಇಬ್ಬರು ಮಕ್ಕಳನ್ನು ನೋಡಿಕೊಳ್ಳೋ ಆಯಾಗೆ 80 ಲಕ್ಷ ರೂ. ಸಂಬಳ ಕೊಡ್ತಾರಂತೆ!

    ಚಂದ್ರಯಾನ, ಸೌರಯಾನದ ಬಳಿಕ ಮತ್ತೊಂದು ಯಾನಕ್ಕೂ ಸಿದ್ಧವಾದ ಇಸ್ರೋ; ಇಲ್ಲಿದೆ ವಿವರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts