More

    ತೀವ್ರ ಕ್ಷಾಮದಿಂದಾಗಿ ಜಿಂಬಾಬ್ವೆಯಲ್ಲಿ 100 ಕ್ಕೂ ಹೆಚ್ಚು ಆನೆಗಳು ಸಾವು

    ಜಿಂಬಾಬ್ವೆ: ಆಫ್ರಿಕಾದ ಜಿಂಬಾಬ್ವೆಯಲ್ಲಿ ಬರಗಾಲಕ್ಕೆ ತುತ್ತಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆನೆಗಳು ಸಾಯುತ್ತಿವೆ. ವಯಸ್ಸಾದ ಮತ್ತು ಅನಾರೋಗ್ಯದ ಆನೆಗಳು ನೀರು ಹುಡುಕಿಕೊಂಡು ಹೆಚ್ಚು ದೂರ ಹೋಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನೀರಿನ ಕೊರತೆಯುಂಟಾಗಿ ಸಾಯುತ್ತಿವೆ. ಹ್ವಾಂಗೆ ರಾಷ್ಟ್ರೀಯ ಉದ್ಯಾನವನದಲ್ಲಿ ಬರದಿಂದಾಗಿ 2019 ರಲ್ಲಿ ಇನ್ನೂರು ಆನೆಗಳು ಸಾವನ್ನಪ್ಪಿರುವುದನ್ನು ನಾವಿಲ್ಲಿ ಗಮನಿಸಬಹುದು.

    ತೀವ್ರ ಕ್ಷಾಮದಿಂದಾಗಿ ಜಿಂಬಾಬ್ವೆಯಲ್ಲಿ 100 ಕ್ಕೂ ಹೆಚ್ಚು ಆನೆಗಳು ಸಾವು

    ಆನೆಗಳ ಸಾವಿನ ಸಂಖ್ಯೆ ಹೆಚ್ಚಳ
    ಇತ್ತೀಚಿನ ದಿನಗಳಲ್ಲಿ ಜಿಂಬಾಬ್ವೆಯ ಅತಿದೊಡ್ಡ ರಾಷ್ಟ್ರೀಯ ಮೀಸಲು ಪ್ರದೇಶದಲ್ಲಿ ಬರಗಾಲದಿಂದಾಗಿ ಕನಿಷ್ಠ 100 ಆನೆಗಳು ಸಾವನ್ನಪ್ಪಿವೆ. ವನ್ಯಜೀವಿ ಅಧಿಕಾರಿಗಳು ಮತ್ತು ಸಂರಕ್ಷಣಾ ಗುಂಪುಗಳು ಈ ಆನೆಗಳ ಸಾವಿಗೆ ಹವಾಮಾನ ಬದಲಾವಣೆ ಮತ್ತು ಎಲ್ ನಿನ್ಯೊ ಕಾರಣ ಎಂದು ದೂರುತ್ತಿದ್ದಾರೆ. ಹ್ವಾಂಗೆ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ದಕ್ಷಿಣ ಆಫ್ರಿಕಾದ ದೇಶದ ಇತರ ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಶಾಖ ಮತ್ತು ಕಡಿಮೆ ಮಳೆಯ ನಿರೀಕ್ಷೆಯಿರುವುದರಿಂದ ಹೆಚ್ಚಿನ ಸಾವು ಸಂಭವಿಸಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

    “ಎಲ್ ನಿನ್ಯೊ ಈಗಾಗಲೇ ಭೀಕರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿದೆ” ಎಂದು ಜಿಂಬಾಬ್ವೆ ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ನಿರ್ವಹಣಾ ಪ್ರಾಧಿಕಾರದ ವಕ್ತಾರ ಟಿನಾಶೆ ಫರಾವೊ ಹೇಳಿದ್ದಾರೆ. ಎಲ್ ನಿನ್ಯೊ ವಾಸ್ತವವಾಗಿ ಪ್ರತಿ 2 ರಿಂದ 7 ವರ್ಷಗಳಿಗೊಮ್ಮೆ ಸಂಭವಿಸುವ ಹವಾಮಾನ ಸಂಬಂಧಿತ ಕಾಲೋಚಿತ ಪರಿಣಾಮವಾಗಿದೆ. ಇದು ಮುಖ್ಯವಾಗಿ ಪೂರ್ವ ಪೆಸಿಫಿಕ್ ಮಹಾಸಾಗರದಲ್ಲಿ ಅಸಾಮಾನ್ಯವಾಗಿ ಬೆಚ್ಚಗಿನ ನೀರಿನಿಂದ ಉಂಟಾಗುತ್ತದೆ.

    ಹವಾಮಾನ ಬದಲಾವಣೆಯಿಂದ ವನ್ಯಜೀವಿ ಜೀವಕ್ಕೆ ಅಪಾಯ
    ಎಲ್ ನಿನ್ಯೊದ ಅನುಭವ ಜಿಂಬಾಬ್ವೆಯಲ್ಲಿ ಈಗಾಗಲೇ ಸಂಭವಿಸಿದೆ. ಹವಾಮಾನ ಬದಲಾವಣೆಯೂ ಎಲ್ ನಿನ್ಯೊವನ್ನು ಬಲಗೊಳಿಸುತ್ತಿದೆ ಎಂದು ಅಧ್ಯಯನಗಳು ತೋರಿಸುತ್ತವೆ. ತೀವ್ರ ಬರದಿಂದಾಗಿ ಹ್ವಾಂಗೆ ರಾಷ್ಟ್ರೀಯ ಉದ್ಯಾನವನದಲ್ಲಿ 200 ಕ್ಕೂ ಹೆಚ್ಚು ಆನೆಗಳು ಸಾವನ್ನಪ್ಪಿದ 2019 ರ ಘಟನೆಗಳ ಪುನರಾವರ್ತನೆಯಿಂದಾಗಿ ಸದ್ಯ ಅಧಿಕಾರಿಗಳು ಭಯಪಡುತ್ತಿದ್ದಾರೆ. 

    ಮುಟ್ಟಿನ ರಜೆಗೆ ಸಂಬಂಧಿಸಿದಂತೆ ಖ್ಯಾತ ಉದ್ಯಮಿ ಹಂಚಿಕೊಂಡ ಪೋಸ್ಟ್ ವೈರಲ್; ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಪ್ರಾರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts