More

    ಮುಟ್ಟಿನ ರಜೆಗೆ ಸಂಬಂಧಿಸಿದಂತೆ ಖ್ಯಾತ ಉದ್ಯಮಿ ಹಂಚಿಕೊಂಡ ಪೋಸ್ಟ್ ವೈರಲ್; ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಪ್ರಾರಂಭ

    ಮಧ್ಯಪ್ರದೇಶ: ಮಾಸಿಕ ರಜೆಯ ಬಗ್ಗೆ ದೇಶದಲ್ಲಿ ಚರ್ಚೆ ನಡೆಯುತ್ತಿದೆ. ಏತನ್ಮಧ್ಯೆ, ಚಾಯ್ ಸುಟ್ಟಾ ಬಾರ್‌ನ ಸಿಇಒ ಮತ್ತು ಸಂಸ್ಥಾಪಕ ಅನುಭವ್ ದುಬೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಸಂಪೂರ್ಣ ಚರ್ಚೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರು ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ತಮ್ಮ ಕಂಪನಿಯು ಮೂರು ತಿಂಗಳ ಹಿಂದೆ ಮಹಿಳೆಯರಿಗೆ ಪಿರಿಯಡ್ ಲೀವ್‌ಗಳನ್ನು ಕೊಟ್ಟಿದೆ ಎಂದು ಹೇಳಿದ್ದಾರೆ.

    ಏನಿದು ಪೋಸ್ಟ್?
    ಅನುಭವ್ ದುಬೆ ಲಿಂಕ್ಡ್‌ಇನ್‌ನಲ್ಲಿ, ಕಂಪನಿಯು ಪಿರಿಯಡ್ ಲೀವ್‌ ಪರಿಚಯಿಸಿದಾಗ ತಮ್ಮ ತಂಡದ ಮಹಿಳಾ ಸದಸ್ಯರಿಂದ ವಿಭಿನ್ನ ಪ್ರತಿಕ್ರಿಯೆಗಳನ್ನು ಪಡೆದೆ. ಕೆಲವು ಮಹಿಳೆಯರು ತಮ್ಮ ಋತುಚಕ್ರದ ಸಮಯದಲ್ಲಿ ರಜೆ ಅಗತ್ಯವಿಲ್ಲ ಎಂದು ಹೇಳಿದರೆ, ಇತರ ಮಹಿಳೆಯರು ಆ ಸಮಯದಲ್ಲಿ ಕೆಲಸ ಮಾಡಲು ಅನಾನುಕೂಲವಾಗಿದೆ, ರಜೆ ಬೇಕು ಎಂದು ಹೇಳಿದರು. ತನ್ನ ಕಚೇರಿಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದಿದೆ. ಈ ರಜೆಯಲ್ಲಿರುವ ಎಲ್ಲಾ ಮಹಿಳೆಯರ ಅನುಭವಗಳನ್ನು ಅರ್ಥಮಾಡಿಕೊಳ್ಳಲಾಗಿದೆ ಮತ್ತು ಗೌರವಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

    ಮುಟ್ಟಿನ ರಜೆಗೆ ಸಂಬಂಧಿಸಿದಂತೆ ಖ್ಯಾತ ಉದ್ಯಮಿ ಹಂಚಿಕೊಂಡ ಪೋಸ್ಟ್ ವೈರಲ್; ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಪ್ರಾರಂಭ

    “ಪ್ರತಿಯೊಬ್ಬ ವ್ಯಕ್ತಿಯ ದೇಹವು ಒಂದೇ ಆಗಿರುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಕೆಲವು ಮಹಿಳೆಯರ ದೇಹವು ಈ ನೋವನ್ನು ಸಹಿಸಿಕೊಳ್ಳಬಲ್ಲದು. ಮತ್ತೆ ಕೆಲವು ಮಹಿಳೆಯರೂ ಇದ್ದಾರೆ, ಅವರು ನೋವಿನಿಂದ ಮೂರ್ಛೆ ಹೋಗುವುದನ್ನು ನಾವು ನೋಡಿದ್ದೇವೆ. ನಾವು ಪುರುಷರಾಗಿರುವುದರಿಂದ ನಾವು ಆ ಬಗ್ಗೆ ಕೇಳಬಹುದು ಅಷ್ಟೇ ಅಲ್ಲವೇ, ಕಂಪನಿಯ ನೀತಿಯು ತೀವ್ರವಾದ ಮುಟ್ಟಿನ ನೋವಿನಿಂದ ಬಳಲುತ್ತಿರುವ ಮಹಿಳೆಯರಿಗೆ ರಜೆ ತೆಗೆದುಕೊಳ್ಳುವ ಆಯ್ಕೆಯನ್ನು ನೀಡುತ್ತದೆ ಎಂದು ಅನುಭವ್ ಹೇಳಿದರು. ಆದರೆ ಅದರ ಅಗತ್ಯವನ್ನು ಅನುಭವಿಸದ ಜನರ ಮೇಲೆ ಇದನ್ನು ಅನ್ವಯಿಸುವುದಿಲ್ಲ” ಎಂದು ಹೇಳಿದ್ದಾರೆ.

    ಅಷ್ಟೇ ಅಲ್ಲ, “ನಾವು ಈ ನೈಸರ್ಗಿಕ ಪ್ರಕ್ರಿಯೆಯ ರಜೆಯ ಬಗ್ಗೆ ಮುಕ್ತವಾಗಿ ಮಾತನಾಡಬೇಕು ಎಂದು ಭಾವಿಸುತ್ತೇನೆ. ಅಗತ್ಯವಿರುವ ಮಹಿಳೆಯರಿಗೆ ಅದರ ಪ್ರಾಮುಖ್ಯತೆಯನ್ನು ಪರಿಗಣಿಸಿ ನಾವು ಈ ರಜೆಯನ್ನು ಜಾರಿಗೆ ತಂದಿದ್ದೇವೆ” ಎಂದು ಅನುಭವ್ ದುಬೆ ತಿಳಿಸಿದ್ದಾರೆ.

    ಅನುಭವ್ ದುಬೆ ಈ ಪೋಸ್ಟ್ ಅನ್ನು ಹಂಚಿಕೊಂಡ ನಂತರ, ಇದುವರೆಗೆ 7,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಮತ್ತು 250 ಕಾಮೆಂಟ್‌ಗಳನ್ನು ಸ್ವೀಕರಿಸಲಾಗಿದೆ. ಈ ವಿಷಯದ ಬಗ್ಗೆ ಅವರ ಅಭಿಪ್ರಾಯವನ್ನು ಮಹಿಳೆಯರು ಬೆಂಬಲಿಸುತ್ತಿದ್ದಾರೆ. ಮಹಿಳಾ ಬಳಕೆದಾರರು ಈ ವಿಧಾನವನ್ನು ಇಷ್ಟಪಟ್ಟಿದ್ದಾರೆ. “ಅತ್ಯಂತ ಮುಖ್ಯವಾದ ವಿಷಯವೆಂದರೆ ಇದನ್ನು ಮಹಿಳಾ ಉದ್ಯೋಗಿಗಳೊಂದಿಗೆ ಬಹಿರಂಗ ಸಭೆಯಲ್ಲಿ ಚರ್ಚಿಸಬೇಕು, ಪಿರಿಯಡ್ ಲೀವ್ ನೀಡುವುದು ನಿಜವಾಗಿಯೂ ಒಳ್ಳೆಯ ಆಲೋಚನೆ., ಉತ್ತಮ ಕಲ್ಪನೆ, ಮಹಿಳೆಗಿಂತ ಪುರುಷನಿಗೆ ಇದು ಚೆನ್ನಾಗಿ ತಿಳಿದಿದೆ., ಇತರ ಕಂಪನಿಗಳು ಸಹ ಇಂತಹ ನಿಯಮವನ್ನು ಪ್ರಾರಂಭಿಸುತ್ತವೆ, ನಿಮ್ಮ ಕಂಪನಿ ಮತ್ತು ನಿಮಗೆ ಶುಭಾಶಯಗಳು” ಎಂದೆಲ್ಲಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. “ಋತುಚಕ್ರದ ಸಮಯ ಮಹಿಳೆಯರಿಗೆ ತುಂಬಾ ಕಷ್ಟಕರ ಸಮಯ. ನಿಮ್ಮಂತಹ ವ್ಯಕ್ತಿ ಈ ದಿಸೆಯಲ್ಲಿ ಇಂತಹ ಹೆಜ್ಜೆಗಳನ್ನು ಇಟ್ಟರೆ ಅದು ನಮ್ಮ ಸಂಸ್ಕೃತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ” ಎಂದೆಲ್ಲಾ ತಿಳಿಸಿದ್ದಾರೆ.

    ಮುಟ್ಟಿನ ರಜೆಗೆ ಸಂಬಂಧಿಸಿದಂತೆ ಖ್ಯಾತ ಉದ್ಯಮಿ ಹಂಚಿಕೊಂಡ ಪೋಸ್ಟ್ ವೈರಲ್; ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಪ್ರಾರಂಭ

    ಋತುಚಕ್ರದ ರಜೆಯ ವಿಷಯ ಚರ್ಚೆಯಾಗುತ್ತಿರುವ ಸಮಯದಲ್ಲಿ ಚಾಯ್ ಸುಟ್ಟಾ ಬಾರ್‌ನ ಸಿಇಒ ಅನುಭವ್ ದುಬೆ ಅವರ ಈ ಪೋಸ್ಟ್ ವೈರಲ್​​​ ಆಗಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ಸಚಿವ ಶಶಿ ತರೂರ್ ಅವರಿಗೆ ಉತ್ತರಿಸುತ್ತಾ, “ಎಲ್ಲಾ ಕೆಲಸದ ಸ್ಥಳಗಳಿಗೆ ಕಡ್ಡಾಯ ಋತುಚಕ್ರದ ರಜೆ ಒದಗಿಸುವ ಯಾವುದೇ ಪ್ರಸ್ತಾಪವು ಸರ್ಕಾರದ ಪರಿಗಣನೆಯಲ್ಲಿಲ್ಲ” ಎಂದು ಹೇಳಿದಾಗ ಈ ಚರ್ಚೆ ಪ್ರಾರಂಭವಾಯಿತು.

    ಇಂದಿನಿಂದ ಭಾರತಕ್ಕೆ ಆಸೀಸ್ ಟೆಸ್ಟ್: ವಾಂಖೆಡೆಯಲ್ಲಿ ಮಹಿಳೆಯರ ಕಾದಾಟ, ಮೊದಲ ಜಯುದ ನಿರೀಕ್ಷೆಯಲ್ಲಿ ಹರ್ಮಾನ್‌ಪ್ರೀತ್ ಬಳಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts