More

    ಮಾತಿಗೆ ತಪ್ಪದವರಿಗೆ ಮಾತ್ರ ಅಧಿಕಾರ: ಭವಿಷ್ಯ ನುಡಿದ ಕೊಡೇಕಲ್ ಕಾಲಜ್ಞಾನಿ ಬಸವಣ್ಣ…

    ಯಾದಗಿರಿ: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿರುವ ಕಾಲಜ್ಞಾನಿ ಬಸವಣ್ಣನ ದೇವಸ್ಥಾನದಲ್ಲಿ ಪ್ರತಿ ಬಾರಿಯಂತೆ ಶಿವರಾತ್ರಿ ದಿನ ವಚನದ ನುಡಿ ಮೂಲಕ ಭವಿಷ್ಯ ನುಡಿಯಲಾಗುತ್ತದೆ. ,

    ಕಾಲಜ್ಞಾನಿ ಬಸವಣ್ಣನವರ ವಚನಗಳನ್ನೆ ಪ್ರತಿ ವರ್ಷ ಶಿವರಾತ್ರಿ ಹಬ್ಬದ ದಿನ ನುಡಿಯುತ್ತಾರೆ. ಈ ಬಾರಿ ಶಿವರಾತ್ರಿಯಂದು ಭವಿಷ್ಯ ನುಡಿಯಲ್ಲಿ ‘ಶಿವರಾತ್ರಿ ನುಡಿಯಲ್ಲಿ ಪಕ್ಷಾಂತರಿಗಳಿಗೆ ಎಚ್ಚರಿಕೆ. ನುಡಿದಂತೆ ನಡೆಯುವರಿಗೆ ಮತ್ತೆ ಅಧಿಕಾರದ ಗದ್ದುಗೆ’ ಎನ್ನಲಾಗಿದೆ.

    ವಚನ ನುಡಿಯಲ್ಲಿ ”ಪುಣ್ಯ ಸ್ತ್ರಿಯಳ ಒಲುಮೆ ಬಣ್ಣ ಭಜನೆ ಅಲ್ಲ. ತನ್ನ ಪುರುಷನೆ ತನಗೆ ಗತಿ ಎಂದು ಇದ್ದರೆ ಮನ್ನಣೆ ಉಂಟು ಶಿವನಲ್ಲಿ” ಎನ್ನಲಾಗಿದೆ.

    ಶಿವರಾತ್ರಿ ನುಡಿಯನ್ನು ಹಲವು ಅರ್ಥದಲ್ಲಿ ವಿಶ್ಲೇಷಣೆ ಮಾಡಲಾಗಿದ್ದು
    ಪಕ್ಷಾಂತರ,ಕುದುರೆ ವ್ಯಾಪಾರ ಮಾಡುವ ಪಕ್ಷದವರಿಗೆ ಶಾಸಕರಿಗೆ ಅಧಿಕಾರ ಯೋಗವಿಲ್ಲ. ಬಣ್ಣದ ಮಾತನಾಡುವರಿಗೆ ಈ ಬಾರಿ ಚುನಾವಣೆಯಲ್ಲಿ ಗೆಲುವು ಕಷ್ಟ. ನುಡಿದಂತೆ ನಡೆದುಕೊಳ್ಳುವರು ಜನರ ನಂಬಿಕೆ ಇಟ್ಟುಕೊಂಡವರಿಗೆ ಅಧಿಕಾರ ಗದ್ದುಗೆ ಎಂದು ಹೇಳಲಾಗಿದೆ.

    ಈ ಹಿಂದೆ ಕೂಡ ಶಿವರಾತ್ರಿ ನುಡಿ ಭವಿಷ್ಯ ನಿಜವಾಗಿದೆ ಎಂದು ವಿಶ್ಲೇಷಕ ಬಸವರಾಜ ಭದ್ರಗೋಳ ಹೇಳಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts