More

    ನಾಸ್ಟ್ರಾಡಾಮಸ್, ಬಾಬಾ ವಂಗಾ ಭವಿಷ್ಯವಾಣಿ ಭಯಾನಕ: ಹಾಗಾದರೆ 2024ರಲ್ಲಿ ಏನಾಗಬಹುದು?

    ನವದೆಹಲಿ: 2024 ರ ಹೊಸ ವರ್ಷ ಸಮೀಪಿಸುತ್ತಿದೆ, ಮುಂಬರುವ ವರ್ಷ ಕುರಿತಂತೆ ಪ್ರಸಿದ್ಧ ಜ್ಯೋತಿಷಿಗಳ ಭವಿಷ್ಯವಾಣಿ ಏನಿರುತ್ತದೆ ಎಂಬ ಕುತೂಹಲ ಇದ್ದೇ ಇರುತ್ತದೆ.
    16ನೇ ಶತಮಾನದ ಫ್ರೆಂಚ್ ಜ್ಯೋತಿಷಿಯಾದ ನಾಸ್ಟ್ರಾಡಾಮಸ್ ಮತ್ತು 1996 ರಲ್ಲಿ ನಿಧನರಾದ ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದು ಕರೆಯಲ್ಪಡುವ ಬಾಬಾ ವಂಗಾ ಅವರಂತಹ ಪ್ರಸಿದ್ಧ ಜ್ಯೋತಿಷಿಗಳು ಮುಂಬರುವ ದಿನಗಳ ಕುರಿತು ಭವಿಷ್ಯ ನುಡಿದಿದ್ದಾರೆ.

    ಯುದ್ಧಗಳು, ನೈಸರ್ಗಿಕ ವಿಪತ್ತುಗಳು, ನಾಗರಿಕ ಅಶಾಂತಿ, ರಾಜಕೀಯ ಗೊಂದಲಗಳು ಮೊದಲಾದ ಸಂಗತಿಗಳ ಕುರಿತು ಭವಿಷ್ಯ ನುಡಿದಿದ್ದಾರೆ.

    ವರ್ಷಗಳ ಹಿಂದೆಯೇ ನಿಧನರಾಗಿದ್ದರೂ ಅಡಾಲ್ಫ್ ಹಿಟ್ಲರ್‌ನ ಉದಯ, 9/11 ದಾಳಿಗಳು ಮತ್ತು ರಾಣಿ ಎಲಿಜಬೆತ್‌ನ ಮರಣದಂತಹ ಕೆಲವು ಸಂಗತಿಗಳ ಕುರಿತ ಅವರ ಭವಿಷ್ಯವಾಣಿಗಳು ನಿಜವಾಗಿರುವುದು ಜನರ ಮನಸ್ಸನ್ನು
    ಆಕ್ರಮಿಸಿಕೊಂಡಿವೆ.

    ರಾಣಿ ಎಲಿಜಬೆತ್‌ನ ಮರಣವನ್ನು ನಿಖರವಾಗಿ ಊಹಿಸಿದ ನಾಸ್ಟ್ರಾಡಾಮಸ್, ರಾಜ ಚಾರ್ಲ್ಸ್‌ನ ನಂತರ ‘ರಾಜನ ಗುರುತು ಇಲ್ಲದವನು’ ರಾಜನಾಗುತ್ತಾನೆ ಎಂದು ಉಲ್ಲೇಖಿಸಿದ್ದಾನೆ. ಈ ನಿಗೂಢ ಮುನ್ಸೂಚನೆಯು ಸಿಂಹಾಸನವನ್ನು ಪ್ರಿನ್ಸ್ ಹ್ಯಾರಿ ಅಥವಾ ಇನ್ನೊಬ್ಬರು ಸ್ವಾಧೀನಪಡಿಸಿಕೊಳ್ಳುತ್ತಾರೆ ಎಂಬ ಊಹಾಪೋಹಗಳಿಗೆ ಉತ್ತೇಜನ ನೀಡಿದೆ.

    ನ್ಯೂಯಾರ್ಕ್ ಪೋಸ್ಟ್ ಪತ್ರಿಕೆಯ ಪ್ರಕಾರ, ಈ ಜ್ಯೋತಿಷಿಯ ಪುಸ್ತಕವು “ದಿ ಕಿಂಗ್ ಆಫ್ ದಿ ಐಲ್ಸ್” ಅನ್ನು “ಬಲದಿಂದ ಹೊರಹಾಕಲಾಗುವುದು” ಎಂದು ಸುಳಿವು ನೀಡುತ್ತದೆ, ಇದು ಕಿಂಗ್ ಚಾರ್ಲ್ಸ್ III ಇವರ ಪಾತ್ರ ಮತ್ತು ನಿಯಂತ್ರಣದ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕುತ್ತದೆ. ಮತ್ತೊಂದು ಭಾಗವು, ಭೂಮಿಗೆ ಶಾಂತಿಯನ್ನು ತರುವ ಹೊಸ ರಾಜನ ನೇಮಕದ ನಂತರ ವಿನಾಶಕಾರಿ ಯುದ್ಧದ ಬಗ್ಗೆ ಎಚ್ಚರಿಸುತ್ತದೆ.

    ಹವಾಮಾನ ಬಿಕ್ಕಟ್ಟುಗಳು:

    ದಾಖಲೆ ಮುರಿಯುವ ತಾಪಮಾನ, ಕಾಳ್ಗಿಚ್ಚು, ಬರ ಮತ್ತು ಸಮುದ್ರ ಜೀವಿಗಳಿಗೆ ಬೆದರಿಕೆಗಳೊಂದಿಗೆ, ಪ್ರಪಂಚವು ಈಗಾಗಲೇ ಹಲವಾರು ಪರಿಸರ ಸಮಸ್ಯೆಗಳನ್ನು ಎದುರಿಸುತ್ತಿದೆ. ನಾಸ್ಟ್ರಾಡಾಮಸ್ ಪ್ರಕಾರ, “ಒಣ ಭೂಮಿಯು ಹೆಚ್ಚು ಒಣಗುತ್ತದೆ. ದೊಡ್ಡ ಪ್ರವಾಹಗಳು ಉಂಟಾಗುತ್ತವೆ.ಪ್ರವಾಹ, ಬರ ಮತ್ತು ಪರಿಸರಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳು ಹೆಚ್ಚಾಗುತ್ತವೆ.

    ಚೀನಾದ ಉದಯ:

    2024ರಲ್ಲಿ ಚೀನಾವು ಬಹಳವಾಗಿ ಬೆಳೆಯುತ್ತದೆ ಎಂದು ನಾಸ್ಟ್ರಾಡಾಮಸ್ ಹೇಳಿದ್ದರು. ಈ ಭವಿಷ್ಯವಾಣಿಯು ಸಮುದ್ರ ಯುದ್ಧದ ಸಾಧ್ಯತೆಯನ್ನು ಸೂಚಿಸುತ್ತದೆ. ಚೀನಿಯರು ನೌಕಾ ಸಂಘರ್ಷವನ್ನು ಪ್ರಾರಂಭಿಸಬಹುದು.

    ಬಾಬಾ ವಂಗಾ ಅವರು ಕೃತ್ಯಕ ಬುದ್ಧಿಮತ್ತೆ (AI) ಪ್ರಪಂಚದಲ್ಲಿ ಪ್ರಾಬಲ್ಯ ಸಾಧಿಸುವ ಶಕ್ತಿಯನ್ನು ಹೊಂದಿರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಮತ್ತೊಂದೆಡೆ, ಕ್ವಾಂಟಮ್ ಕಂಪ್ಯೂಟಿಂಗ್‌ನ ಉನ್ನತಿಯು ಹಣಕಾಸು, ಆರೋಗ್ಯ ಮತ್ತು ಸೈಬರ್‌ ಸೆಕ್ಯುರಿಟಿ ಕ್ಷೇತ್ರಗಳಿಗೆ ಅಡಚಣೆ ಉಂಟು ಮಾಡುತ್ತದೆ. ಅಲ್ಲದೆ, ಪವರ್ ಗ್ರಿಡ್‌ಗಳು ಮತ್ತು ನೀರಿನ ಸಂಸ್ಕರಣಾ ಸೌಲಭ್ಯಗಳಂತಹ ನಿರ್ಣಾಯಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಸೈಬರ್ ದಾಳಿಕೋರರು ರಾಷ್ಟ್ರೀಯ ಭದ್ರತೆಗೆ ಬೆದರಿಕೆಗಳನ್ನು ಒಡ್ಡಲಿದ್ದಾರೆ ಎಂದು ವಂಗಾ ಭವಿಷ್ಯವಾಣಿ ಹೇಳುತ್ತದೆ.

    ಕ್ಯಾನ್ಸರ್, ಆಲ್​ಝೈಮರ್​ಗೆ ಚಿಕಿತ್ಸೆ:

    ಈ ಎಲ್ಲಾ ಕೆಟ್ಟ ಸುದ್ದಿಗಳ ನಡುವೆಯೇ ಬಾಬಾ ವಂಗಾ ಅವರು ವೈದ್ಯಕೀಯ ಪ್ರಗತಿಯ ವಿಷಯದಲ್ಲಿ ಭರವಸೆಯ ಒಂದು ನೋಟವನ್ನು ನೀಡಿದ್ದಾರೆ. 2024 ರಿಂದ ನಿರ್ದಿಷ್ಟ ಕ್ಯಾನ್ಸರ್ ಮತ್ತು ಆಲ್​ಝೈಮರ್​ಗೆ ಕಾಯಿಲೆಗಳಿಗೆ ಚಿಕಿತ್ಸೆ ದೊರೆಯಲಿದೆ ಎಂದು ಆಕೆಯ ಭವಿಷ್ಯವಾಣಿಗಳು ಹೇಳಿವೆ.

    ​ಉತ್ತಪ್ಪದಲ್ಲೊಂದು ಅದ್ಭುತ ಆರ್ಟ್: ನೀವೂ ಮನೆಯಲ್ಲಿ ಮಾಡಬಹುದು ಈ ಖಾದ್ಯ ಕಲಾಕೃತಿ

    ಭಾರತದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಕೋಟಿಗಳ ಲೆಕ್ಕಗಳಲ್ಲಿದೆ…

    ನೆಟ್ಟಿಗರ ಗಮನಸೆಳೆದ ಬುಲ್​ ರೈಡರ್​: ದೆಹಲಿಯ ರಸ್ತೆಗಳಲ್ಲಿಯೇ ಗೂಳಿ ಸವಾರಿ ಮಾಡಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts