More

    ​ಉತ್ತಪ್ಪದಲ್ಲೊಂದು ಅದ್ಭುತ ಆರ್ಟ್: ನೀವೂ ಮನೆಯಲ್ಲಿ ಮಾಡಬಹುದು ಈ ಖಾದ್ಯ ಕಲಾಕೃತಿ

    ನವದೆಹಲಿ: ಇಲ್ಲೊಬ್ಬ ಬಾಣಸಿಗರೊಬ್ಬರು ತಿನಿಸೊಂದನ್ನು ಸುಂದರವಾದ ಖಾದ್ಯ ಕಲಾಕೃತಿಯನ್ನಾಗಿ ಪರಿವರ್ತಿಸಿದ್ದಾರೆ,
    ಈ ಬಾಣಸಿಗ ತಯಾರಿಸಿದ ಖಾದ್ಯ ಕಲಾಕೃತಿಯನ್ನು ನೋಡಿದರೆ, ಇದನ್ನು ತಿನ್ನಬೇಕೋ ಅಥವಾ ಸುಂದರ ಆರ್ಟ್​ ವರ್ಕ್​ನಂತೆ ರಕ್ಷಿಸಿ ಇಡಬೇಕೋ ಎಂಬ ಗೊಂದಲ ಉಂಟಾಗುವುದು ಖಚಿತ.

    ಕಲೆ, ಸೌಂದರ್ಯಶಾಸ್ತ್ರ ಮತ್ತು ಸೃಜನಶೀಲತೆಯೂ ಎಲ್ಲೆಡೆಯೂ ಅಸ್ತಿತ್ವದಲ್ಲಿರುತ್ತದೆ, ಅಡುಗೆ ಮನೆಯಲ್ಲಿ ಕೂಡ. ಬಾಯಿ ಚಪ್ಪರಿಸಿ ತಿನ್ನುವ ಉತ್ತಪ್ಪವನ್ನು ಕಲಾಕೃತಿಯನ್ನಾಗಿ ಮಾಡಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಆದರೆ, ಬಾಣಸಿಗ ಸುರಭಿ ಸೆಹಗಲ್ ಅವರು ದಕ್ಷಿಣ ಭಾರತದ ಈ ಖಾದ್ಯವನ್ನು ಖಾದ್ಯ ಕಲೆಯ ಕೆಲಸವನ್ನಾಗಿ ಪರಿವರ್ತಿಸಿದ್ದಾರೆ.
    ಬೇಬಿ ಕಾರ್ನ್, ಹಸಿರು ಈರುಳ್ಳಿ, ಬೆಂಡೆಕಾಯಿ, ಉಪ್ಪಿನಕಾಯಿ ಈರುಳ್ಳಿ ಮತ್ತು ಸಾಸಿವೆ ಮೈಕ್ರೋಗ್ರೀನ್‌ಗಳನ್ನು ಬಳಸಿ ಉತ್ಪದಲ್ಲಿಯೇ ಸುಂದರ ಕಲಾಕೃತಿ ರೂಪಿಸಿದ್ದಾರೆ.

    ಈ ಕುರಿತು ವೀಡಿಯೋ ಹಂಚಿಕೊಂಡಿದ್ದಾರೆ.
    ಉತ್ತಪ್ಪದಲ್ಲಿ ಹೂವುಗಳನ್ನು ತಯಾರಿಸಲು ಅನಕೇ ತರಕಾರಿಗಳನ್ನು ತೆಳುವಾಗಿ ಕತ್ತರಿಸಿಕೊಂಡಿದ್ದಾರೆ. ಇದರಲ್ಲಿ ಬೇಬಿ ಕಾರ್ನ್, ಉಪ್ಪಿನಕಾಯಿ ಈರುಳ್ಳಿ ಮತ್ತು ಬೆಂಡೆಕಾಯಿ ಸೇರಿವೆ.
    ಹೂವುಗಳ ಕಾಂಡಕ್ಕಾಗಿ ಹಸಿರು ಈರುಳ್ಳಿಯ ತೆಳುವಾದ ಹೋಳುಗಳನ್ನು ಬಳಸಿದ್ದಾರೆ. ಕೊನೆಯದಾಗಿ ಸಾಸಿವೆ ಸಸ್ಯದ ಎಲೆ ಚಿಗುರು ಉಪಯೋಗಿಸಿದ್ದಾರೆ.
    ಎಲ್ಲಾ ವಸ್ತುಗಳ ಸಿದ್ಧವಾದ ನಂತರ, ಎರಕಹೊಯ್ದ ಕಬ್ಬಿಣದ ತವಾದಲ್ಲಿ ಉತ್ತಪ್ಪ ಹೊಯ್ದಿದ್ದಾರೆ. ನಂತರ ಈ ಉತ್ತಪ್ಪದಲ್ಲಿ ಹೂವನ್ನು ಮಾಡಲು ತರಕಾರಿಗಳನ್ನು ನಿಧಾನವಾಗಿ ಆರಿಸಿ ಮತ್ತು ಜೋಡಿಸಿದ್ದಾರೆ. ಹಸಿರು ಈರುಳ್ಳಿ ಕಾಂಡಗಳನ್ನು ಸೇರಿಸಿದ್ದಾರೆ. ಸಾಸಿವೆ ಎಲೆ ಚಿಗುರನ್ನು ಸವರಿದ್ದಾರೆ.

    ಈಗ ಬಾಣಲೆಗೆ ಎಣ್ಣೆಯನ್ನು ಹಾಕಿ ಉತ್ತಪ್ಪ ಬೇಯಿಸಿದ್ದಾರೆ. ಎರಡೂ ಬದಿಗಳಲ್ಲಿ ಬೇಯಿಸಿದ್ದಾರೆ. ತಟ್ಟೆಯಲ್ಲೂ ಗುಲಾಬಿ ಬಣ್ಣವನ್ನು ಇರುವಂತೆ ನೋಡಿಕೊಳ್ಳುವುದಕ್ಕಾಗಿ ಮಸಾಲೆಯುಕ್ತ ಬೀಟ್‌ರೂಟ್ ಚಟ್ನಿಯೊಂದಿಗೆ ಬಡಿಸಿದ್ದಾರೆ.
    “ತಿನ್ನಬಹುದಾದ ಕಲೆ! ಇದು ತಿನ್ನಲು ತುಂಬಾ ಚೆನ್ನಾಗಿ ಕಾಣುತ್ತದೆ.” “ಬಟ್ಟೆಯ ಮೇಲೆ ಕಸೂತಿ ತೋರುತ್ತಿದೆ.” “ಒಂದು ತಟ್ಟೆಯಲ್ಲಿ ಎಂತಹ ಬಹುಕಾಂತೀಯ ಕಲಾಕೃತಿ.” “ಸುಂದರವಾದ ಕಲಾಕೃತಿ, ಅದನ್ನು ಹೊಂದಲು ಸಹ ಸಾಧ್ಯವಿಲ್ಲ.” ಹೀಗೆ ನೆಟ್ಟಿಗರು ಶ್ಲಾಘನಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

    ಭಾರತದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಕೋಟಿಗಳ ಲೆಕ್ಕಗಳಲ್ಲಿದೆ…

    ನೆಟ್ಟಿಗರ ಗಮನಸೆಳೆದ ಬುಲ್​ ರೈಡರ್​: ದೆಹಲಿಯ ರಸ್ತೆಗಳಲ್ಲಿಯೇ ಗೂಳಿ ಸವಾರಿ ಮಾಡಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts