More

    ಗ್ರಂಥಾಲಯಗಳು ಮಕ್ಕಳ ಸ್ನೇಹಿಯಾಗಲಿ: ಫಕೀರಪ್ಪ ಕಟ್ಟಿಮನಿ ಹೇಳಿಕೆ

    ಯಲಬುರ್ಗಾ: ಗ್ರಾಪಂ ಗ್ರಂಥಾಲಯಗಳು ಮಕ್ಕಳ ಸ್ನೇಹಿ ಗ್ರಂಥಾಲಯವನ್ನಾಗಿ ಮಾಡಬೇಕೆಂದು ತಾಪಂ ಸಹಾಯಕ ನಿರ್ದೇಶಕ ಫಕೀರಪ್ಪ ಕಟ್ಟಿಮನಿ ಹೇಳಿದರು.

    ತಾಪಂ ಸಾಮರ್ಥ್ಯ ಸೌಧದಲ್ಲಿ ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಂಸ್ಥೆಯಿಂದ ಗ್ರಾಮೀಣ ಗ್ರಂಥಾಲಯ ಮೇಲ್ವಿಚಾರಕರಿಗೆ ಸೋಮವಾರ ಹಮ್ಮಿಕೊಂಡಿದ್ದ ಮಕ್ಕಳ ಸ್ನೇಹಿ ಗ್ರಂಥಾಲಯ ಕುರಿತ ಮೂರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಮಕ್ಕಳು, ಯುವಕರಿಗೆ ಸ್ಪರ್ಧಾತ್ಮಕ, ಪ್ರಚಲಿತ ಜ್ಞಾನ ನೀಡುವ ಗ್ರಾಮೀಣ ಪ್ರದೇಶಗಳ ಗ್ರಂಥಾಲಯಗಳು ಹೆಚ್ಚು ಉಪಯೋಗವಾಗಬೇಕು. ಇದಕ್ಕೆ ಪಂಚಾಯಿತಿ ಮಟ್ಟದ ಅಧಿಕಾರಿಗಳು, ಗ್ರಂಥಪಾಲಕರು, ಓದುಗರು, ದಾನಿಗಳು ಸಹಕರಿಸಬೇಕು. ಮಕ್ಕಳಿಗೆ ಅವಶ್ಯವಿರುವ ಪುಸ್ತಕಗಳನ್ನು ಸಂಗ್ರಹಿಸಬೇಕು. ವಿಭಿನ್ನ ಚಟುವಟಿಕೆಗಳ ಮೂಲಕ ಗ್ರಂಥಾಲಯಗಳನ್ನು ಮಕ್ಕಳಸ್ನೇಹಿ ಗ್ರಂಥಾಲಯ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

    ತಾಪಂ ಸಹಾಯಕ ಯೋಜನಾಧಿಕಾರಿ ಶಿವರಾಜ, ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ಭೀಮಪ್ಪ ಹವಳಿ, ಪ್ರವಿಣಕುಮಾರ ಸನಗಿನ, ವಿಷಯ ನಿರ್ವಾಹಕ ಬಸವರಾಜ ಮಾಲಿಪಾಟೀಲ್, ಗಣ್ಯರಾದ ಬಸವರಾಜ ಮ್ಯಾಗೇರಿ, ಹನುಮಂತ ಮೆತಗಲ್, ವೀರನಗೌಡ ಮಾಲಿಪಾಟೀಲ್, ಗವಿಸಿದ್ದಮ್ಮ ಗುಳಗುಳಿ, ಕಲ್ಲಪ್ಪ ಗುರಿಕಾರ, ಜಗದೇಶ ಚಲವಾದಿ, ಖಾಜಾಬನ್ನಿ ಬಾಗಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts