More

    ಡಿಸೆಂಬರ್​ನಲ್ಲಿ ಅಧಿವೇಶನ – ಬೆಂಗಳೂರಲ್ಲೋ? ಬೆಳಗಾವಿಯಲ್ಲೋ? ಇಂದು ನಿರ್ಧಾರ

    ಬೆಂಗಳೂರು: ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಕರೊನಾ ಕಾರಣದಿಂದ ಈ ಬಾರಿಯ ಲೋಕಸಭೆ ಅಧಿವೇಶನ ನಡೆಸಲು ಕೇಂದ್ರ ಸರ್ಕಾರ ಹಿಂದೇಟು ಹೊಡೆದಿದ್ದು, ಬಜೆಟ್ ಅಧಿವೇಶನವನ್ನು ಮುಂಚಿತವಾಗಿ ನಡೆಸಲು ಉದ್ದೇಶಿಸಿದೆ ಎನ್ನಲಾಗುತ್ತಿದೆ.

    ಆದರೆ, ರಾಜ್ಯದಲ್ಲಿ ಕರೊನಾ ಪ್ರಕರಣ ಕಡಿಮೆ ಇರುವುದರಿಂದ ಮತ್ತು ಪ್ರಮುಖ ವಿಧೇಯಕಗಳಿಗೆ ಒಪ್ಪಿಗೆ ಪಡೆಯಬೇಕಿರುವುದರಿಂದ ಡಿಸೆಂಬರ್​ನಲ್ಲಿ ಅಧಿವೇಶನ ಕರೆಯಲು ಉದ್ದೇಶಿಸಿದೆ. ಬುಧವಾರ ನಡೆಯುವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿವೇಶನ ನಡೆಸುವ ಕುರಿತು ಸಂಪುಟ ಸದಸ್ಯರಿಂದ ಅಭಿಪ್ರಾಯ ಕೇಳಲಿದ್ದಾರೆ.

    ಇದನ್ನೂ ಓದಿ:  ಹತ್ತು ಕಿ.ಮೀ. ನಡೆದುಕೊಂಡು ಹೋಗಿ ಅಪ್ಪನ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ 11ರ ಬಾಲಕಿ !

    ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯೊಳಗೆ ಅಧಿವೇಶನ ನಡೆಸಬೇಕೆಂಬ ಉದ್ದೇಶವಿದ್ದು, ಈ ಕಾರಣಕ್ಕೆ ಡಿಸೆಂಬರ್ ಎರಡನೇ ವಾರದ ಆರಂಭದಿಂದ 10 ದಿನ ಕಲಾಪ ನಡೆಸುವ ಬಗ್ಗೆ ಚಿಂತನೆ ಇದೆ. ಸಂಪುಟ ಸಭೆಯಲ್ಲಿ ದಿನಾಂಕದ ಬಗ್ಗೆ ಚರ್ಚೆ ನಡೆಯಲಿದ್ದು, ಅಂತಿಮ ನಿರ್ಧಾರವನ್ನು ಸಿಎಂ ಕೈಗೊಳ್ಳಲಿದ್ದಾರೆ.

    ದಾರುಲ್ ಉಲೂಮ್ ಹಕ್ಕಾನಿಯಾ ಪಾಕಿಸ್ತಾನದ ಜಿಹಾದಿಗಳ ವಿಶ್ವವಿದ್ಯಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts