More

    ಗಡಿ’ಬಿಡಿ’ಯಲ್ಲಿ ಕಾವೇರಲಿದೆ ಚಳಿಗಾಲದ ಅಧಿವೇಶನ; ನಡೆಯಲಿದ್ಯಾ ಮಹಾಮೇಳದ ‘ಧೈರ್ಯ’ ಪ್ರದರ್ಶನ?

    ಬೆಳಗಾವಿ: ಉಭಯರಾಜ್ಯಗಳಲ್ಲಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಗಡಿವಿವಾದ ಕೇಂದ್ರ ಗೃಹಸಚಿವ ಅಮಿತ್ ಷಾವರೆಗೂ ತಲುಪಿದ್ದು, ಅವರು ಅದನ್ನು ಒಂದು ಹಂತಕ್ಕೆ ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಇದರ ನಡುವೆಯೇ ಗಡಿಯ ಕೆಲವು ಭಾಗಗಳನ್ನು ನಮಗೇ ಬಿಡಿ ಎಂಬ ವಿಚಾರದಲ್ಲಿ ಮಹಾರಾಷ್ಟ್ರದವರು ಧೈರ್ಯ ಪ್ರದರ್ಶನಕ್ಕೆ ಮುಂದಾಗಿರುವುದು ಚಳಿಗಾಲದ ಅಧಿವೇಶನ ನಡೆಯಲಿರುವ ಬೆಳಗಾವಿಯಲ್ಲಿ ಕಾವೇರಿಸುವ ಲಕ್ಷಣಗಳು ಗೋಚರಿಸಿವೆ.

    ಬೆಳಗಾವಿಯಲ್ಲಿ ನಾಳೆಯಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಇದರ ನಡುವೆಯೇ ಎಂಇಎಸ್​ನಿಂದ ಮಹಾಮೇಳ ಆಯೋಜನೆ ಮಾಡಿಕೊಳ್ಳಲಾಗಿದೆ. ಈ ಮಹಾಮೇಳಕ್ಕೆ ಮಹಾರಾಷ್ಟ್ರದ ಸಂಸದ ಧೈರ್ಯಶೀಲ್ ಮಾನೆ ಬರಲಿರುವುದಾಗಿ ಹೇಳಿರುವುದು ಕುತೂಹಲವನ್ನು ಕೆರಳಿಸಿದೆ.

    ಧೈರ್ಯಶೀಲ್ ಪ್ರವಾಸದ ವೇಳಾಪಟ್ಟಿ ಪ್ರಕಟ ಮಾಡಿದ್ದು, ಪ್ರಚೋದನಕಾರಿ ಭಾಷಣ ಮಾಡಲಿರುವ ಹಿನ್ನೆಲೆಯಲ್ಲಿ ಅವರು ಬೆಳಗಾವಿಗೆ ಪ್ರವೇಶ ಮಾಡದಂತೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಜತೆಗೆ ಕಳೆದ ಕೆಲವು ದಿನಗಳಿಂದ ಉಭಯರಾಜ್ಯಗಳ ನಡುವೆ ಗಡಿವಿವಾದ ಸಂಚಲನ ಸೃಷ್ಟಿಸಿದ್ದು, ಇದು ಚಳಿಗಾಲದ ಅಧಿವೇಶನದಲ್ಲೂ ಮಹತ್ವದ ಚರ್ಚೆಯಾಗಿ ಪರಿಣಮಿಸಿ, ಕಾವೇರಿದ ವಾಗ್ವಾದಕ್ಕೆ ಕಾರಣವಾಗುವ ಸಾಧ್ಯತೆಗಳೂ ಇವೆ.

    ಸಂಬಂಧಿಯನ್ನೇ ಸುತ್ತಿಗೆಯಿಂದ ಹೊಡೆದು ಕೊಂದು ಪೀಸ್​ಪೀಸ್ ಮಾಡಿದ; ಒಂದೊಂದು ತುಂಡನ್ನು ಒಂದೊಂದು ಕಡೆ ಎಸೆದ!

    ಸಾಲ ತೀರಿಸಿಲ್ಲ ಅಂತ ಆಟೋಚಾಲಕನ ಪತ್ನಿ ಮೇಲೆ ಅತ್ಯಾಚಾರ; ದೇವಸ್ಥಾನಕ್ಕೆ ಕರೆದೊಯ್ದು ಹಣೆಗೆ ಸಿಂಧೂರ ಹಚ್ಚಿ ಹೆಂಡ್ತಿ ಎಂದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts