More

    ಅಸ್ಸಾಂ ಎನ್​ಆರ್​ಸಿ ವೈಬ್​ಸೈಟ್​ನಿಂದ ಅಂತಿಮ ನಾಗರಿಕ ಪಟ್ಟಿ ನಾಪತ್ತೆ: ಗೃಹ ಸಚಿವಾಲಯ ಹೇಳಿದ್ದು ಹೀಗೆ…

    ಗುವಾಹಾಟಿ: ಸುಪ್ರೀಂಕೋರ್ಟ್​ ಆದೇಶದಂತೆ ಕಳೆದ ಆಗಸ್ಟ್​ನಲ್ಲಿ ಪ್ರಕಟವಾಗಿದ್ದ ಅಸ್ಸಾಂನಲ್ಲಿನ ಅಂತಿಮ ನಾಗರಿಕರ ಪಟ್ಟಿಯು ರಾಜ್ಯ ರಾಷ್ಟ್ರೀಯ ನಾಗರಿಕ ನೋಂದಣಿ(ಎನ್​ಆರ್​ಸಿ) ವೆಬ್​ಸೈಟ್​ನಿಂದ ನಾಪತ್ತೆಯಾಗಿದ್ದು, ಭಾರಿ ಕುತೂಹಲ ಮೂಡಿಸಿದೆ.

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಗೃಸಚಿವಾಲಯ, ಎನ್​ಆರ್​ಸಿ ಡಾಟಾ ಸುರಕ್ಷಿತವಾಗಿದೆ ಮತ್ತು ಉಲ್ಲೇಖವಾಗಿದೆ. ಕೆಲವು ತಾಂತ್ರಿಕ ಸಮಸ್ಯೆಗಳಿಂದ ವೆಬ್​ಸೈಟ್​ನಲ್ಲಿ ಕಾಣಿಸುತ್ತಿಲ್ಲ. ಸಮಸ್ಯೆ ಶೀಘ್ರವೇ ಬಗೆಹರಿಯಲಿದೆ ಎಂದು ತಿಳಿಸಿದೆ.

    ಐಟಿ ಸಂಸ್ಥೆ ವಿಪ್ರೋ ಜತೆಗಿನ ಒಪ್ಪಂದ ಇನ್ನು ನವೀಕರಣ ಆಗದೇ ಇರುವುದರಿಂದ ಎನ್​ಆರ್​ಸಿ ಡಾಟಾ ಕಾಣಿಸುತ್ತಿಲ್ಲ ಆದಷ್ಟು ಬೇಗ ಎಲ್ಲವು ಸರಿಯಾಗಲಿದೆ ಎಂದು ಎನ್​ಆರ್​ಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಭಾರತೀಯ ನಾಗರಿಕರಲ್ಲಿ ಹೊರಗಿಡುವ ಮತ್ತು ಸೇರ್ಪಡೆಗೊಳ್ಳುವ ಅಸ್ಸಾಂ ಎನ್​ಆರ್​ಸಿಯ ಸಂಪೂರ್ಣ ಮಾಹಿತಿಯನ್ನು ಅಧಿಕೃತ ”www.nrcassam.nic.in” ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಮಾಡಲಾಗಿತ್ತು. ಸುಪ್ರೀಂಕೋರ್ಟ್​ ಆದೇಶದಂತೆ ಕಳೆದ ಆಗಸ್ಟ್​ 13, 2019ರಂದು ಅಂತಿಮ ಪಟ್ಟಿ ಪ್ರಕಟವಾಗಿತ್ತು.

    ಒಪ್ಪಂದದ ಮೇರೆಗೆ ವಿಪ್ರೋ ಐಟಿ ಸಂಸ್ಥೆ ಡಾಟಾವನ್ನು ಒದಗಿಸುತ್ತಿತ್ತು. ಆದರೆ, ಕಳೆದ ಅಕ್ಟೋಬರ್​ನಲ್ಲೇ ಅವರ ಒಪ್ಪಂದ ಮುಗಿದಿದ್ದು, ಇನ್ನೂ ನವೀಕರಣ ಆಗದೇ ಇರುವ ಹಿನ್ನೆಲೆಯಲ್ಲಿ ವಿಪ್ರೋ ಅಮಾನತ್ತಿನಲ್ಲಿಟ್ಟಿದೆ. ಈ ಕಾರಣದಿಂದಾಗಿ ಡಾಟಾವು ಡಿಸೆಂಬರ್​ 15ರ ನಂತರ ಆಫ್​ಲೈನ್​ಗೆ ಹೋಗಿದೆ.​​​ ಶೀಘ್ರವೇ ಸರಿ ಹೋಗಲಿದೆ ಎಂದು ಎನ್​ಆರ್​ಸಿ ರಾಜ್ಯ ಸಂಯೋಜಕ ಹಿತೇಶ್​ ದೇವ್​ ವರ್ಮಾ ತಿಳಿಸಿದ್ದಾರೆ.

    ಅಸ್ಸಾಂನ ನಾಗರಿಕ ಪಟ್ಟಿಯಲ್ಲಿ 19 ಲಕ್ಷ ಮಂದಿಯ ಹೆಸರು ಬಿಟ್ಟು ಹೋಗಿದ್ದು, ತಮ್ಮ ನಾಗರಿಕತ್ವವನ್ನು ಸಾಬೀತು ಪಡಿಸಲು ತಿಳಿಸಲಾಗಿದೆ. ಯಾರ ಹೆಸರು ಪಟ್ಟಿಯಲ್ಲಿ ಉಲ್ಲೇಖವಾಗಿಲ್ಲವೋ ಅವರು ಕಾನೂನಾತ್ಮಕವಾಗಿ ಸಾಬೀತು ಪಡಿಸುವವರೆಗೂ ವಿದೇಶಿಯರು ಎಂದು ಘೋಷಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts