More

    ನಮ್ಮ ಪಾಲಿಗೆ ಭಾರತ್​ ಜಿಂದಾಬಾದ್​ ಆಗಿತ್ತು, ಮುಂದೆಯೂ ಜಿಂದಾಬಾದ್​ ಆಗಿರುತ್ತದೆ: ಬೆಂಗಳೂರಿನಲ್ಲಿ ಅಸಾದುದ್ದೀನ್ ಓವೈಸಿ ಹೇಳಿಕೆ

    ಬೆಂಗಳೂರು: ಹಿಂದೂ ಮುಸ್ಲಿಂ ಸಿಖ್ ಈಸಾಯಿ ಫೆಡರೇಷನ್ ಬೆಂಗಳೂರು ಸಂಘಟನೆ ಗುರುವಾರ ಫ್ರೀಡಂಪಾರ್ಕ್​ನಲ್ಲಿ ಆಯೋಜಿಸಿದ್ದ ಸಿಎಎ ಮತ್ತು ಎನ್​ಆರ್​ಸಿ ವಿರೋಧಿಸಿ ಸಮಾವೇಶದ ವೇದಿಕೆ ಮೇಲೆ ಅಮೂಲ್ಯ ಲಿಯೋನಾ ಎಂಬ ಯುವತಿ ಪಾಕ್ ಪರ ಘೋಷಣೆ ಕೂಗಿದ್ದಳು. ಇದರಿಂದಾಗಿ ಸಮಾವೇಶದ ಹಾದಿ ತಪ್ಪಿದ್ದು, ಎಲ್ಲರೂ ಆತಂಕಕ್ಕೆ ಒಳಗಾಗಿದ್ದರು.

    ಅನಿರೀಕ್ಷಿತ ಬೆಳವಣಿಗೆ ಕಾರಣ, ಸಮಾವೇಶದ ಉದ್ದೇಶ ಈಡೇರದೇ ಹೋಗಿದೆ. ಎಲ್ಲರ ಗಮನವೂ ಆ ಯುವತಿ ಮೇಲೆ ಹೋಗಿದ್ದು, ಆ ಕ್ಷಣದ ಪ್ರತಿಕ್ರಿಯೆ ಹೀಗಿತ್ತು-
    ಅಮೂಲ್ಯ ಗೆ ಆಹ್ವಾನ ಕೊಟ್ಟಿಲ್ಲ. ಆಕೆ ಯಾರೆಂಬುದು ಗೊತ್ತಿಲ್ಲ. ತಾನಾಗೆ ಬಂದಿದ್ದಾಳೆ. ಸಮಾವೇಶಕ್ಕೆ ಕೆಟ್ಟ ಹೆಸರು ತರಲು ಈ ರೀತಿ ಹೇಳಿಕೆ ಕೊಟ್ಟಿದ್ದಾಳೆ. ಅದೊಂದು ಕುತಂತ್ರದ ಕೆಲಸ. ಹಿಂದೂ-ಮುಸ್ಲಿಂರನ್ನು‌ ಒಗ್ಗೂಡಿಸುವ ಸಮಾವೇಶ. ಸಂವಿಧಾನದ ವಿರೋಧಿ ಹೇಳಿಕೆಗೆ ಅವಕಾಶ ಇಲ್ಲ. ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಹಿಂದಿನ ಉದ್ದೇಶ ಏನೆಂಬುದು ಪೊಲೀಸರು ತನಿಖೆ ಮೂಲಕ ಬಹಿರಂಗವಾಗಲಿ ಎಂದು ಜೆಡಿಎಸ್ ಮುಖಂಡ ಇಮ್ರಾನ್ ಪಾಷಾ ಹೇಳಿಕೆ ನೀಡಿದ್ದಾರೆ.

    ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಈ ಬೆಳವಣಿಗೆಯಿಂದ ಸಿಡಿಮಿಡಿಗೊಂಡು, ಪಾಕಿಸ್ತಾನ ಪರ ಘೋಷಣೆ ಕೂಗಿದ ಯುವತಿಗೂ ನಮ್ಮ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ. ನಾವು ಇಂತಹ ಹೇಳಿಕೆಯನ್ನು ಒಪ್ಪುವುದಿಲ್ಲ. ಸಂಘಟಕರ ತಪ್ಪಿನಿಂದ ಈ ಯುವತಿ ಭಾಷಣ ಮಾಡಿದ್ದಾರೆ. ಅದಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದರಲ್ಲದೆ, ನಮ್ಮ ಪಾಲಿಗೆ ಭಾರತ್ ಜಿಂದಾಬಾದ್ ಆಗಿತ್ತು, ಮುಂದೆಯೂ ಭಾರತ್ ಜಿಂದಾಬಾದ್ ಆಗಿರಲಿದೆ ಎಂದರು.

    VIDEO|ಫ್ರೀಡಂ ಪಾರ್ಕ್​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ನಡೆಯುತ್ತಿದ್ದ ಹೋರಾಟದಲ್ಲಿ ಪಾಕ್​ ಪರ ಘೋಷಣೆ ಕೂಗಿದ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts