More

    VIDEO| ಮದ್ಯದ ಅಮಲಿನಲ್ಲಿ ದೇವಸ್ಥಾನದ ಮುಂದೆಯೇ ಡಾನ್ಸ್​ ಮಾಡಿದ ASIಗೆ ಕಾದಿತ್ತು ಆಘಾತ!

    ಇಡುಕ್ಕಿ: ಮದ್ಯದ ಅಮಲಿನಲ್ಲಿ ಸಮವಸ್ತ್ರದಲ್ಲೇ ದೇವಸ್ಥಾನದ ಮುಂದೆ ಕುಣಿದು ಕುಪ್ಪಳಿಸಿದ ಸಹಾಯಕ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ (ಎಎಸ್​ಐ) ಅನ್ನು ಅಮಾನತು ಮಾಡಲಾಗಿದೆ.

    ಈ ಘಟನೆ ಕೇರಳದಲ್ಲಿ ನಡೆದಿದೆ. ಸ್ಪೆಷಲ್​ ಬ್ರಾಂಚ್​ ವರದಿಯ ಪ್ರಕಾರ ಇಡುಕ್ಕಿ ಜಿಲ್ಲೆಯ ಸಾಂಥನಪರದ ಎಎಸ್​ಐ ಕೆ.ಪಿ. ಶಾಜಿ ಎಂಬುವರನ್ನು ಅಮಾನತು ಮಾಡಲಾಗಿದೆ. ಪೂಪ್ಪಾರ ಬಳಿ ದೇವಸ್ಥಾನದ ಉತ್ಸವದಲ್ಲಿ ಪೊಲೀಸ್​ ಅಧಿಕಾರಿಯೊಬ್ಬರು ಡಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಸ್ಪೆಷಲ್​ ಬ್ರಾಂಚ್​ ತನಿಖೆ ನಡೆಸಿ ವರದಿ ಸಲ್ಲಿಸಿತ್ತು.

    ಇದನ್ನೂ ಓದಿ: ಪಾಕಿಸ್ತಾನದ ತಂದೆ-ಭಾರತದ ತಾಯಿಗೆ ದುಬೈನಲ್ಲಿ 2 ಮಕ್ಕಳು ಜನನ | ಭಾರತದ ಪೌರತ್ವ ಕೋರಿದ್ದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

    ಅಮಾನತಿಗೆ ಮುಖ್ಯ ಕಾರಣವೆಂದರೆ, ಎಎಸ್​ಐ ಕರ್ತವ್ಯದ ಸಮಯದಲ್ಲಿ ಸಮವಸ್ತ್ರದಲ್ಲೇ ಸಾರ್ವಜನಿಕರ ಮುಂದೆ ಡಾನ್ಸ್ ಮಾಡುತ್ತಿರುವುದು ಕಂಡುಬಂದಿದೆ. ಕರ್ತವ್ಯ ಲೋಪ ಎಸಗಿರುವುದು ವರದಿಯಲ್ಲಿ ಸ್ಪಷ್ಟವಾಗಿದೆ. ಮುನ್ನಾರ್ ಡಿವೈಎಸ್ಪಿ ನೀಡಿದ ವರದಿಯನ್ನು ಆಧರಿಸಿ ಎರ್ನಾಕುಲಂ ಡಿಐಜಿ, ಶಾಜಿಯನ್ನು ಅಮಾನತುಗೊಳಿಸಿದ್ದಾರೆ. (ಏಜೆನ್ಸೀಸ್​)

    (ವಿಡಿಯೋ ಕೃಪೆ: ಕೇರಳಕೌಮುದಿ ನ್ಯೂಸ್​)

    ಸವ್ಯಸಾಚಿ ಅಂಕಣ | ಚೈತ್ರದ ಪ್ರೇಮಾಂಜಲಿಯಲ್ಲಿ ಪ್ರೀತಿಯ ಮೆರವಣಿಗೆ…

    ಯೋಗ ಕ್ಷೇಮ | ಮಾನವನ ಬಂಧನಕ್ಕೂ ಮೋಕ್ಷಕ್ಕೂ ಮನಸ್ಸೇ ಕಾರಣ

    ವೈಭವದ ಐತಿಹಾಸಿಕ ಕರಗ ಮಹೋತ್ಸವ; ದ್ರೌಪದಿ ದೇವಿಯ ಕರಗ ಕಣ್ತುಂಬಿಕೊಳ್ಳಲು ಬಂದ ಸಾವಿರಾರು ಭಕ್ತರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts