More

    ಟೀಮ್ ಇಂಡಿಯಾ ನಾಯಕ ಕೊಹ್ಲಿ ವಿರುದ್ಧ ಅಶ್ವಿನ್ ಬಂಡಾಯ, ಬಿಸಿಸಿಐಗೆ ದೂರು!

    ನವದೆಹಲಿ: ಕಳೆದ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯ ನಾಲ್ಕೂ ಪಂದ್ಯಗಳಿಗೆ ಕಡೆಗಣಿಸಲ್ಪಟ್ಟಿದ್ದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದೀಗ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಬಂಡಾಯವೆದ್ದಿದ್ದಾರೆ ಎಂದು ವರದಿಯಾಗಿದೆ.

    ನಾಯಕ ಕೊಹ್ಲಿ ತಮಗೆ ತಂಡದಲ್ಲಿ ‘ಅಭದ್ರತೆ’ ಮೂಡಿಸುತ್ತಿದ್ದಾರೆ ಎಂದು ಆರ್. ಅಶ್ವಿನ್, ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಅವರಿಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಹೇಳಲಾಗಿದೆ. ಇದೇ ವೇಳೆ ಅಶ್ವಿನ್ ವಿರುದ್ಧ ಕೊಹ್ಲಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ಕಳೆದ ಜೂನ್‌ನಲ್ಲಿ ಸೌಥಾಂಪ್ಟನ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಹಿರಿಯ ಆಟಗಾರ ಶ್ರದ್ಧಾಪೂರ್ವಕ ಆಟವಾಡಿರಲಿಲ್ಲ ಎಂದು ದೂರಿದ್ದಾರೆ ಎನ್ನಲಾಗಿದೆ.

    ಅಶ್ವಿನ್ ಕಳೆದ ಕೆಲ ವರ್ಷಗಳಿಂದ ಭಾರತ ಟೆಸ್ಟ್ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದರೂ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಅವಕಾಶ ಪಡೆದಿರಲಿಲ್ಲ. ಸ್ಪಿನ್ ಬೌಲಿಂಗ್ ಆಲ್ರೌಂಡರ್ ರವೀಂದ್ರ ಜಡೇಜಾ ವಿಕೆಟ್ ಕಬಳಿಸಲು ವಿಫಲರಾಗುತ್ತಿದ್ದ ನಡುವೆಯೂ ಆಡುವ 11ರ ಬಳಗದಲ್ಲಿ ಸ್ಥಾನ ಉಳಿಸಿಕೊಂಡಿದ್ದರು. ಅಶ್ವಿನ್‌ಗೆ ಸ್ಥಾನ ನೀಡುವ ಬಗ್ಗೆ 4ನೇ ಟೆಸ್ಟ್‌ಗೆ ಮುನ್ನ ಕೋಚ್ ರವಿಶಾಸ್ತ್ರಿ ಮಾತನಾಡಿದ್ದರೂ, ಅವರ ಸಲಹೆಯನ್ನು ಕೊಹ್ಲಿ ತಿರಸ್ಕರಿಸಿದ್ದರು ಎನ್ನಲಾಗಿದೆ.

    ವಿಶ್ವಕಪ್‌ಗೆ ಚಾಹಲ್ ಬಯಸಿದ್ದ ಕೊಹ್ಲಿ
    ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅವಕಾಶ ಪಡೆಯದಿದ್ದರೂ, ಅದೇ ಸಮಯದಲ್ಲಿ ಆಯ್ಕೆಯಾದ ಟಿ20 ವಿಶ್ವಕಪ್ ತಂಡದಲ್ಲಿ ಅಶ್ವಿನ್ ಅಚ್ಚರಿಯ ರೀತಿಯಲ್ಲಿ ಸ್ಥಾನ ಪಡೆದಿದ್ದರು. ಆದರೆ ಟಿ20 ವಿಶ್ವಕಪ್‌ಗೆ ನಾಯಕ ವಿರಾಟ್ ಕೊಹ್ಲಿ, ಅಶ್ವಿನ್‌ಗಿಂತ ಸೀಮಿತ ಓವರ್ ಕ್ರಿಕೆಟ್‌ನ ಅನುಭವಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರ ಆಯ್ಕೆಯನ್ನು ಬಯಸಿದ್ದರು ಎನ್ನಲಾಗಿದೆ. ಆದರೆ ಟಿ20 ವಿಶ್ವಕಪ್‌ಗೆ ಭಾರತ ತಂಡ ಆಯ್ಕೆಯಾದ ಕೆಲವೇ ದಿನಗಳಲ್ಲಿ ಕೊಹ್ಲಿ ಚುಟುಕು ಕ್ರಿಕೆಟ್ ನಾಯಕತ್ವ ತ್ಯಜಿಸಿದ್ದಕ್ಕೂ, ಈ ಆಯ್ಕೆ ವಿಚಾರಕ್ಕೂ ಸಂಬಂಧವಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

    ಏಕಕಾಲದಲ್ಲಿ ನಡೆಯಲಿವೆ ಕೊನೇ 2 ಐಪಿಎಲ್ ಲೀಗ್ ಪಂದ್ಯಗಳು, ಕಾರಣವೇನು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts